ಸಿಂದಗಿ: ಪಟ್ಟಣದ ಪಿ.ಇ.ಎಸ್. ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಶೇ. ೧೦೦ ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ೩೦೮ ವಿದ್ಯಾರ್ಥಿಗಳಲ್ಲಿ ೧೧೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೬೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೧೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ೫ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಕು. ಅಮೇರಾಕೌಸರ್ ತರಫದಾರ ೫೮೬ (೯೭.೬೬%) ಪ್ರಥಮ, ಕು. ಮಹೇಶ ಚಂದಾನವರ ೫೮೪ (೯೭.೩೩%) ದ್ವಿತೀಯ, ಕು. ನಿಂಗಮ್ಮ ನಾಟೀಕಾರ ೫೭೮ (೯೬.೩೩%) ಹಾಗೂ ಸುಜಾತಾ ಗಡೆದ ೫೭೮ (೯೬.೩೩%) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕು. ಭಾಗ್ಯಶ್ರೀ ಕಲ್ಲೂರ ೫೮೧ (೯೬.೮೩%) ಪ್ರಥಮ, ಕು. ದಾನಮ್ಮ ಅಗಸರ ೫೭೮ (೯೬.೩೩%) ದ್ವಿತೀಯ, ಸಾನಿಯಾ ತಾಂಬೋಳಿ ೫೭೬ (೯೬.೦೦%) ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕು. ರಾಜೇಶ್ವರಿ ಪೂಜಾರಿ ೫೮೦ (೯೬.೬೬%) ಪ್ರಥಮ, ಕು. ಲಕ್ಷೀ ಬಿರಾದಾರ ೫೭೩ (೯೫.೫೦%) ದ್ವಿತೀಯ, ಕು. ಮಹಾನಂದ ಬಿರಾದಾರ ೫೭೨ (೯೫.೩೩%) ತೃತೀಯ ಸ್ಥಾನ ಪಡೆದಿದ್ದಾರೆ.
ವಿವಿಧ ವಿಷಯಗಳಲ್ಲಿ ೧೪ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ಪ್ರಾಚಾರ್ಯ ಆರ್.ಬಿ.ಗೋಡಕರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

