ದೇವರಹಿಪ್ಪರಗಿ: ಪಟ್ಟಣದ ಬಿ.ಎಲ್‌ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಶೇ ೯೮.೪೦ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ ೯೭.೭೭ ಒಟ್ಟಾರೆ ಶೇ ೯೮.೨೩ ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ದೀಪಾರಾಣಿ ತಳವಾರ ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತç ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದು ಶೇ ೯೭.೮೩ ಫಲಿತಾಂಶದೊಂದಿಗೆ ಪ್ರಥಮ, ಸೃಷ್ಠಿ ಹಡಗಲಿ ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿ ಶೇ ೯೬.೮೩ ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಅಂಕಿತಾ ಕಾಖಂಡಕಿ ಮತ್ತು ದೀಪಾ ಪೂಜಾರಿ ಶೇ ೯೫.೩೩ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸುಷ್ಮಾ ಬಾಗೇವಾಡಿ ಶೇ ೯೪.೬೭ ಫಲಿತಾಂಶದೊಂದಿಗೆ ಪ್ರಥಮ, ಕೀರ್ತಿ ಬಿರಾದಾರ ಶೇ ೯೩.೮೩ ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಲಕ್ಷ್ಮೀ ಬಿರಾದಾರ ಶೇ ೯೨.೮೩ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನೀಯರ ಸಾಧನೆಗೆ ಪಾಲಕರು, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಸದಸ್ಯರು ಹಾಗೂ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
