ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರ ವಿರುದ್ದ ಕಾಂಗ್ರೇಸ್ ವಕ್ತಾರ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಮೇಶ ಜಿಗಜಿಣಗಿ ಇವರಿಬ್ಬರನ್ನು ಸಮಾಜದ ಎರಡು ಕಣ್ಣುಗಳಾಗಿ ಭಾವಿಸಲಾಗುತ್ತದೆ. ಆದರೆ ರಮೇಶ ಜಿಗಜಿಣಗಿ ಅವರು ೩೦ವರ್ಷಗಳ ಕಾಲ ಸಂಸತ್ತಿನಲ್ಲಿದ್ದು ರಾಜಕೀಯ ಮಾಡಿದ ಅವರು ಇಂದು ಪ್ರಧಾನ ಮಂತ್ರಿಯ ಹುದ್ದೆಗೆ ಪೈಪೋಟಿ ಮಾಡುವ ವ್ಯಕ್ತಿತ್ವವುಳ್ಳವರಾಗಬೇಕಿತ್ತು, ಆದರೆ ನಮಗ್ ಯಾರ್ ಮತ ಹಾಕ್ತಾರ್ ಮೋದಿಗೆ ಮತ್ ಹಾಕ್ತಾರ್ ಎನ್ನುವುದು ಅತ್ಯಂತ ಬಾಲೀಶವಾಗಿದೆ. ಏಕೆಂದರೆ ಮೋದಿ ಸಂಸತ್ತಿಗೆ ಪಾದಾರ್ಪಣೆ ಮಾಡುವ ಮೊದಲು ೧೫ವರ್ಷಗಳ ಕಾಲ ಸಂಸದರಾಗಿ ರಾಜಕೀಯ ಅನುಭವಿಕರು ತಮ್ಮ ಆತ್ಮವಂಚನೆ ಮಾಡಿಕೊಂಡು ಈ ಮಾತನ್ನು ಹೇಳುತ್ತಿದ್ದಾರೆ. ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನ ಬಿಟ್ಟು ಮಾತನಾಡುವುದಷ್ಟೇ ಅಲ್ಲದೇ ದಲಿತರ ಆಶೋತ್ತರಗಳನ್ನು ಕೆಣಕುತ್ತಿದ್ದಾರೆ.
ಸುಮಾರು ೩೦ ವರ್ಷಗಳ ಕಾಲ ಸಂಸತ್ತಿನಲ್ಲಿದ್ದು, ಒಂದೇ ಒಂದು ಪ್ರಶ್ನೇ ಕೇಳಲಾಗದೇ ಇರುವ ಹಿರಿಯ ಸಂಸದರು ಮತ್ತೇ ಸಂಸತ್ತಿಗೆ ಹೋಗುವ ತವಕದಲ್ಲಿದ್ದರೆ ಇನ್ನೊಂದೆಡೆ ಮೊದಲ ಬಾರಿಗೆ ಸಂಸತ್ತಿಗೆ ಪಾದಾರ್ಪಣೆ ಮಾಡುವ ಹಂಬಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೋ.ರಾಜು ಆಲಗೂರ ಅವರದ್ದಾಗಿದೆ.
ಮಾಜಿ ವಿಪಸದಸ್ಯ ಅರುಣ ಶಹಾಪೂರ ಅವರು ವಿಜಯಪುರಕ್ಕೆ ರಾಜು ಆಲಗೂರ ಕೊಡುಗೆ ಏನು ಎಂದು ಕೇಳಿದ್ದಾರೆ. ಅವರು ದಲಿತ ಸಂಘಟನೆಗಳ ಹೋರಾಟದೊಂದಿಗೆ ಜಿಲ್ಲಾ ಸಂಚಾಲಕರಾಗಿ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸದುದ್ದೇಶಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ದಲಿತರಿಗಾಗಿ ಜಿಲ್ಲೆಯಲ್ಲಿ ನಿರ್ಮಿಸಿರುವ ಬದ್ಧವಿಹಾರ ಅವರಿಗೆ ಕಾಣುವುದಿಲ್ಲ ಎಂದೆನಿಸುತ್ತಿದೆ ಎಂದು ಹರಿಹಾಯ್ದರು.
ಇಂತಹ ಹೇಳಿಕೆಗಳನ್ನು ನೀಡುವುದು ಬಿಟ್ಟು ಜಿಲ್ಲೆಯಲ್ಲಿ ಆಗಿರುವ ಸಮಗ್ರ ಅಭಿವೃದ್ಧಿಗಳನ್ನು ಮುಂದಿಟ್ಟು ಮತ ಕೇಳಲಿ ಎಂದರು.
ಈ ವೇಳೆ ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಯ್ಯಪ್ಪ ಕಟ್ಟಿಮನಿ, ಸಾಯಬಣ್ಣ ಪುರದಾಳ, ಅಂಬರೀಷ ಚೌಗಲೆ, ಸಂತೋಷ ಜಾದವ, ತಿರುಪತಿ ಬಂಡಿವಡ್ಡರ, ಧರ್ಮಣ್ಣ ಯಂಟಮಾನ, ಶ್ರೀಶೈಲ ಜಾಲವಾದಿ, ದಿಲೀಪ ಚೌವ್ಹಾಣ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

