Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಸಂತೋಷ್ ರಾವ್ ಪೆರ್ಮುಡ,ಪರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ಯೋಗವು ಪ್ರಾಚೀನ ಭಾರತೀಯ ಅಭ್ಯಾಸವಾಗಿದ್ದು, ಇದು ದೈಹಿಕ ಭಂಗಿಗಳು (ಆಸನಗಳು), ಉಸಿರಾಟದ ತಂತ್ರಗಳು (ಪ್ರಾಣಾಯಾಮ) ಮತ್ತು ಧ್ಯಾನದ ಮೂಲಕ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಕಾಪಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ನಮ್ಯತೆಯನ್ನು ಹೆಚ್ಚಿಸಲು ಮತ್ತು ಒಟ್ಟು ಆರೋಗ್ಯವನ್ನು ಸುಧಾರಿಸುವ ಪರಿಣಾಮಕಾರಿ ಮಾರ್ಗವಾಗಿದೆ.ಯೋಗ ಮಾಡಿದರೆ ಆರೋಗ್ಯವಂತರಾಗಿ ಇರಬಹುದು ಎನ್ನುವ ಮಾತಿದೆ. ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ. ಆದಿಕಾಲದಿಂದಲೇ ಯೋಗದ ಬಳಕೆ ಇತ್ತೆಂಬುದು ಸಾಕ್ಷಗಳಿಂದ ತಿಳಿಯುತ್ತದೆ. ’ಯೋಗವು ಭಾರತೀಯರಿಗೆ ಪರಂಪರಾಗತವಾಗಿ ಹಿರಿಯರಿಂದ ಬಂದ ಉಡುಗೊರೆ’. ಆದ್ದರಿಂದ ಮೊದಲು ಯೋಗ ಎಂದರೇನು, ಹೇಗೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕು. ಗಾಂಧೀಜಿಯ ಮಾತಿನಂತೆ ‘ಶರೀರದ, ಮನಸ್ಸಿನ, ಆತ್ಮದ ಸರ್ವಶಕ್ತಿಗಳನ್ನೂ ಭಗವಂತನ ಜೊತೆಗೆ ಸಂಯೋಜನೆ ಮಾಡುವುದೇ ಯೋಗ’. ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದು ಆಥವಾ ಬಂಧಿಸುವುದು ಅಥವಾ ನೊಗಕ್ಕೆ ಕಟ್ಟುವುದೇ…
ವ್ಯಕ್ತಿ – ವ್ಯಕ್ತಿತ್ವ(ಸಾಧಕರ ಬದುಕಿನ ಪುಟಗಳು) ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಜಾನ್ ವಾರ‍್ಸ್ ಅವರು, “ಅoಟಟeಛಿಣ booಞs, eveಟಿ iಜಿ ಥಿou ಜoಟಿ’ಣ ಠಿಟಚಿಟಿ oಟಿ ಡಿeಚಿಜiಟಿg ಣhem ಡಿighಣ ಚಿತಿಚಿಥಿ. ಓoಣhiಟಿg is moಡಿe imಠಿoಡಿಣಚಿಟಿಣ ಣhಚಿಟಿ ಚಿಟಿ uಟಿಡಿeಚಿಜ ಟibಡಿಚಿಡಿಥಿ” ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ, ಹವ್ಯಾಸ ಮತ್ತು ಸಂಸ್ಕೃತಿ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಅದರಲ್ಲಿ ಪುಸ್ತಕ ಓದುವಿಕೆಯಂತೂ ತೀರ ವಿರಳ. ಪುಸ್ತಕ ಓದುವುದು ಎಂದರೆ ಕೇವಲ ಕಾಲಹರಣ ಮಾಡುವುದಲ್ಲ. ಅದು ನಮ್ಮ ಜ್ಞಾನ ವೃದ್ಧಿ, ವ್ಯಕ್ತಿತ್ವ ವಿಕಸನ ಮತ್ತು ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಹಂಬಲವನ್ನು ಅಭಿವ್ಯಕ್ತಿಗೊಳಿಸುವ ಸಾಧನವಾಗಿದೆ. ಓದುವ ಹವ್ಯಾಸವು ನಮ್ಮಲ್ಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನದಲ್ಲಿ ಸೃಜನಾತ್ಮಕತೆಯು ಅರಳುವಂತೆ ಮಾಡುತ್ತದೆ. ಆದ್ದರಿಂದ ಕೇವಲ ‘ಮೋಬೈಲ್ ಫೋಬಿಯಾ’ ಮತ್ತು ಸಮೂಹ ಮಾಧ್ಯಮಗಳ ಬೆನ್ನು ಹತ್ತಿರುವ ಯುವ ಜನಾಂಗ ಓದುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ. ಮೋಬೈಲ್ ಬಳಕೆಯಿಂದ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ ಅನಿಲ ಕುಂಭ್ಳೆ ಅವರ ವೃತ್ತಿ ಜೀವನದ ಆರಂಭದಲ್ಲಿ ವಿಮರ್ಶಕರಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಅವರು ಸಾಂಪ್ರದಾಯಿಕ ಸ್ಪಿನ್ನರ್‌ಗಳಂತೆ ಚೆಂಡನ್ನು ಹೆಚ್ಚು ಟರ್ನ್ ಮಾಡುವುದಿಲ್ಲ ಹೀಗಾಗಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಮಾಧ್ಯಮಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಬಹಿರಂಗವಾಗಿ ಅವಮಾನಿಸಲಾಗಿತ್ತು. ಟೀಕೆಗಳಿಗೆ ಅನಿಲ ಕುಂಬ್ಳೆ ಮೈದಾನದಲ್ಲಾಗಲಿ ಹೊರಗಾಗಲಿ ಎಂದೂ ಜಗಳವಾಡಲಿಲ್ಲ. ಬದಲಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿಖರ ಬೌಲಿಂಗ್ ದಾಳಿ ನಡೆಸಿ ಪಾಕಿಸ್ತಾನದ ವಿರುದ್ಧ ಒಂದೇ ಇನ್ನಿಂಗ್ಸ್ನಲ್ಲಿ ೧೦ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಜಾಗತಿಕ ದಂತಕಥೆಯಾಗಿ ವಿಮರ್ಶಕರ ಬಾಯಿ ಮುಚ್ಚಿಸಿದರು. ‘ಬಿದ್ದಾಗ ನಗುವವರ ಸಂಖ್ಯೆ ಹೆಚ್ಚಿರಬಹುದು. ಆದರೆ ಗೆದ್ದಾಗ ಚಪ್ಪಾಳೆ ತಟ್ಟುವ ಜಗತ್ತು ಇದೇ ಆಗಿದೆ.’ ಆದ್ದರಿಂದ ದೃತಿಗೆಡದೇ ಮುನ್ನಡೆಯಬೇಕು.ಹಾಗಾದರೆ ಗೆಲುವಿನ ಹಾದಿಯಲ್ಲಿ ಎದುರಾಗುವ ಅವಮಾನವನ್ನು ಮೆಟ್ಟಿ ನಿಲ್ಲುವ ಬಗೆ…
ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಕೆಲವರು ದುಡ್ಡು ಮಾಡುತ್ತಿದ್ದಾರೆ. ಇಲಾಖೆಗಳಲ್ಲಿ ಮಧ್ಯ ಪ್ರವೇಶಿಸಿ ಹಣಗಳಿಸುವ ದಂಧೆ ಮಾಡಿಕೊಂಡಿದ್ದಾರೆ. ಜೊತೆಗೆ ಸಿವಿಲ್ ಪ್ರಕರಣಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ದಲಿತ ಸಮುದಾಯದ ಕೆಲವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿಗೆ ಮನವಿ ಮಾಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಹೆಚ್.ಡಿ.ಕೋಟೆ, ಸರಗೂರು ಹಾಗೂ ಅಂತರಸಂತೆ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಹಲವು, ಸಲಹೆ, ಸೂಚನೆ, ದೂರುಗಳು ಕೇಳಿಬಂದವು.ಶಾಲಾ, ಕಾಲೇಜು ಸಮಯಗಳಲ್ಲಿ ಪುಂಡರು ಅತೀ ವೇಗ, ಎಕ್ಸಲೇಟರ್ ಶಬ್ದ ಹೆಚ್ಚಿಸಿಕೊಂಡು ಬೈಕ್ ಚಲಾಯಿಸುತ್ತಾರೆ. ಗದ್ದಿಗೆ ಸರ್ಕಲ್ ಪುಂಡ, ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಶಾಲಾ, ಕಾಲೇಜಿಗೆ ಮಕ್ಕಳು ಹೋಗುವ, ಬರುವ ಸಮಯ ಬ್ಯಾರಿಕೇಡ್ ಅಳವಡಿಸಿ ಸಂಚಾರ ದಟ್ಟಣೆ, ಅತೀ ವೇಗದ ಚಾಲನೆ ನಿಯಂತ್ರಿಸಬೇಕು. ಹೌಸಿಂಗ್ ಬೋರ್ಡ್, ಸ್ಟೇಡಿಯಂ, ಕನಕ ಭವನದ ಹಿಂದಿನ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಯಾವುದೇ ಕೆಲಸ ಕಷ್ಟದಿಂದ ಮಾಡುವ ಬದಲಿಗೆ ಇಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ವಿ ಆಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಮಂಗಳವಾರ ಪಟ್ಟಣದ ಬಸವೇಶ್ವರ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು.ಯಾವುದೇ ಕೆಲಸವಿರಲಿ ಗೌರವದಿಂದ ಮಾಡಬೇಕು ಅದು ಯೋಗ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಗ್ರಾಮೀಣ ಭಾಗದ ಬಡಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಇಂಥ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾಗಿದೆ. ಅದಕ್ಕಾಗಿ ಈ ಬಸವೇಶ್ವರ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಕೊಡಿಸಲಾಗಿದೆ. ಅನುದಾನ ಪಡೆದುಕೊಂಡು ಉತ್ತಮ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿದ್ದು ಈ ಸಂಸ್ಥೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂಥಾಗಲಿ ಎಂದು ಹೇಳಿದರು.ಮಾಜಿ ಶಾಸಕ ರಮೇಶ್ ಭೂಸನೂರ, ಸಾನಿಧ್ಯ ವಹಿಸಿದ ಶಂಕ್ರಾನಂದ ಮಹಾರಾಜರು, ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಎಂಟುಮಾನ ಮುಂತಾದವರು ಮಾತನಾಡಿದರು.ಸಿಂದಗಿಯ ಧಮ್ಮ ವಿಜಯ ಯುದ್ಧ ಬಿಹಾರದ ಪೂಜ್ಯಂತೆ ಸಂಘಪಾಲ ಸಾನಿಧ್ಯ ವಹಿಸಿದ್ದರು. ಮಾಜಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಕುಮಸಗಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026 27ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಸತ್ತು ಚುನಾವಣೆ ಮತದಾನ ಮತ ಎಣಿಕೆ ಕುರಿತು ಪ್ರತೀಕ್ಷಿತ ನಡೆಯಿತುಶಾಲೆಯಲ್ಲಿ ಮಿನಿ ಸಂಸತ್ತು ರಚಿಸುವ ಕಾರ್ಯಕ್ರಮ ಏರ್ಪಡಾಗಿತ್ತು. ಮೊಬೈಲ್ ಮತಯಂತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳ ಹೆಸರು ಮತ್ತು ಭಾವಚಿತ್ರ ಸಹಿತ ಮತಯಂತ್ರದ ಸಹಾಯದಿಂದ ವಿದ್ಯಾರ್ಥಿಗಳು ಮೊಬೈಲಿನಲ್ಲಿ ಮತದಾನ ಮಾಡುವುದು ಮೊಬೈಲಿನಲ್ಲಿ ಮತ ಎಣಿಕೆ ಮಾಡಿದರೆ ಮಾಡಿದ್ದು ಶಿಕ್ಷಕರು ಮಕ್ಕಳಿಗೆ ಹೊಸ ಅನುಭವ ನೀಡಿತು. ಮನಸಾರೆ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿದ್ದು ಚುನಾವಣೆಯ ನೆನಪು ಮರುಕಳಿಸುವಂತೆ ಮಾಡಿತು.ವಿದ್ಯಾರ್ಥಿಗಳಿಗೆ ಮೊದಲು ಚುನಾವಣೆ ಜನ ಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ, ಮತಯಂತ್ರ ಮತದಾನ, ಮತಗಳ ಏಣಿಕೆ ತಿರಸ್ಕಾರವಾಗುವುದು, ಅದರ ಪದ್ಧತಿಗಳೇನು? ಮತ ಎಣಿಕೆ ಹಾಗೂ ಅಭ್ಯರ್ಥಿಗಳ ಘೋಷಣೆಗಳ ಕುರಿತು ಸವಿಸ್ತಾರವಾಗಿ ಶಾಲೆಯ ಮುಖ್ಯ ಗುರು ಪರಮೇಶ್ವರಯ್ಯ ಹಿರೇಮಠ್ ವಿವರಿಸಿದರು.ನಂತರ ಚುನಾವಣೆಗೆ ಶಾಲೆಯ ಶಿಕ್ಷಕ ವರ್ಗ ಸಿದ್ಧತೆ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ಎಸ್ ಎಸ್…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜನಾಗ್ರಹ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶವು ದಲಿತರ ಭೂಮಿ, ವಸತಿ, ಬ್ಯಾಕ್‌ಲಾಗ್ ಉದ್ಯೋಗ ನೇಮಕಾತಿ, ವಿಶೇಷ ಘಟಕ ಯೋಜನೆ ಏಕಗವಾಕ್ಷಿ ನೀತಿಗಾಗಿ ಹಕ್ಕೊತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜುಲೈ 3 ರಂದು ಬೃಹತ್ ಸಮಾವೇಶ ನಡೆಯಲಿದೆ. ಎಂದು ಬೆಳಗಾವ ವಿಭಾಗ ಸಂಚಾಲಕ ಸಂಜು ಕೆಂಬಾವಿ ಹೇಳಿದರು.ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಲಮೇಲ ತಾಲೂಕಿನ ನೂತನ ಸಂಘಟನೆ ಪ್ರಾರಂಭಿಸಿ, ಪದಾದಿಕಾರಿಗಳ ನೇಮಕ ಮಾಡಿ, ನಂತರ ಜುಲೈ 3 ರಂದು ನಡೆಯುವ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.ರಾಜ್ಯ ಸರ್ಕಾರ ದಲಿತರ ಅಭಿವೃದ್ಧಿಗೆ ಮಿಸಲಿರುವ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಹಣವನ್ನು ಗ್ಯಾರೇಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದು ಇದನ್ನು ವಿರೋಧಿ ಸರ್ಕಾರಕ್ಕೆ ಮನವರಿಕೆ ಮಾಡಿ ದಲಿತರಿಗೆ ಮಿಸಾಲಿರುವ ಹಣವನ್ನು ದಲಿತರಿಗಾಗಿಗೆಯೇ ಬಳಕೆ ಮಾಡುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಹಾಕ್ಕೋತ್ತಾಯ ಮಂಡಿಸಲಿದ್ದೇವೆ ಎಂದು ಹೇಳಿದರು.ದಲಿತ ಮುಖಂಡರಾದ ದತ್ತಾತ್ರೆಯ ಆಲಮೇಲ್ಕರ, ಸಂತೋಷ ಬಾಸ್ಕರ,…
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವಕನ ಅಪಹರಣ ಪ್ರಕರಣವನ್ನು ಪೊಲೀಸರು ಕೇವಲ ಎರಡು ದಿನಗಳಲ್ಲಿ ಭೇದಿಸಿ, ಅಪಹರಣಕ್ಕೊಳಗಾದ ಯುವಕನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮಂಗಳವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದರು.ಘಟನೆ ವಿವರ: ಜೂನ್ 19ರಂದು ಕಸ್ತೂರಿ ಕಾಲೋನಿಯ ನಿವಾಸಿ ಮಮ್ತಾಜ್ ಇಮಾಮಜಾಪರ್ ಚಪ್ಪರಬಂಧ ಅವರು ತಮ್ಮ ಪುತ್ರ ಸಾಹಿಲ್ ಇಮಾಮಜಾಪರ್ ಚಪ್ಪರಬಂಧ (22) ಅಪಹರಣಕ್ಕೊಳಗಾಗಿರುವ ಕುರಿತು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.ತನಿಖೆಯಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ, ಸಾಹಿಲ್ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಎರಡು ತಿಂಗಳ ಹಿಂದೆ ತನ್ನ ಕುಟುಂಬದ 2 ಎಕರೆ ಜಮೀನನ್ನು ₹26 ಲಕ್ಷಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲ್ಹಾರ ನಾಕಾ ಬಳಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಭಾರಿ ಪ್ರಮಾಣದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದರು.ಈ ಕಾರ್ಯಾಚರಣೆಯಲ್ಲಿ ಸುಮಾರು ₹1,02,79,560 ಮೌಲ್ಯದ ಮದ್ಯ, ಲಾರಿ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ತಮ್ಮ ನಿರ್ದೇಶನದಂತೆ ಅಕ್ರಮ ಮದ್ಯ ಮಾರಾಟ, ತಯಾರಿಕೆ ಹಾಗೂ ಸಾಗಾಟದ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದ್ದು, ಮಂಗಳವಾರ ಮುಂಜಾನೆ ಡಿಎಸ್ಪಿ ನಾಗರಾಜ್ ಜೆ. ಅವರು ರಾತ್ರಿ ಪೆಟ್ರೋಲಿಂಗ್ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದರು ಎಂದು ತಿಳಿಸಿದರು.ಪೊಲೀಸರು ಪರಿಶೀಲನೆ ನಡೆಸಿದಾಗ MH-09-CA-3662 ಸಂಖ್ಯೆಯ ಲಾರಿಯಲ್ಲಿ ತಾಡಪತ್ರಿ ಹಾಗೂ ಎರೆಹುಳು ಗೊಬ್ಬರದ ಚೀಲಗಳ ಕೆಳಗೆ ಮದ್ಯದ ಪೆಟ್ಟಿಗೆಗಳನ್ನು ಅಡಗಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.ಆರೋಪಿತರು ಗೋವಾದ ಪಣಜಿಯಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ…
