Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್‌ಐಆರ್ ಬಗ್ಗೆ ಜನರಿಗೆ ಮನವರಿಕೆ ಮಾಡಿ :ಸಂಸದ ಜಿಗಜಿಣಗಿ

ಮೊಹರಂ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಿ :ಪಿಎಸೈ ಉಪ್ಪಾರ

ಯೋಗದಿಂದ ರೋಗನಿರೋಧಕ ಶಕ್ತಿ ವೃದ್ಧಿ :ವಿಜಯಲಕ್ಷ್ಮಿ ಗಿರಗಾವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಗಣಿ ಗೊಬ್ಬರ ಬಳಕೆಗೆ ಮುಂದಾದ ರೈತರು
(ರಾಜ್ಯ ) ಜಿಲ್ಲೆ

ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಗಣಿ ಗೊಬ್ಬರ ಬಳಕೆಗೆ ಮುಂದಾದ ರೈತರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ – ಫಲವತ್ತತೆ ಹಾಳಾಗುವುದರ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದನ್ನು ಮನಗಂಡಿರುವ ರೈತರು, ಈಗ ಮಣ್ಣಿನ ಫಲವತ್ತತೆ ಹೆಚ್ಚಿಸುವ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಒದಗಿಸುವ ಸಗಣಿ ಗೊಬ್ಬರ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.
ಪ್ರತಿ ವರ್ಷ ರೈತರು ಯುಗಾದಿ ನಂತರ ಹೊಲಗಳನ್ನು ಹಸನು ಮಾಡಿ ಸಗಣಿ ಗೊಬ್ಬರ ಹಾಕುವುದು ವಾಡಿಕೆ. ಅದರಂತೆ ಸಧ್ಯ ಯುಗಾದಿ ಹಬ್ಬ ಮುಗಿದಿರುವುದರಿಂದ ರೈತರು ಹೊಲಗಳಿಗೆ ಸಗಣಿ ಗೊಬ್ಬರ ಹಾಕಿ, ಬಿತ್ತನೆಗೆ ಅಣಿ ಮಾಡಿ ಮಳೆಗಾಗಿ ಕಾಯುತ್ತಾರೆ.
ಹಿಂದೆ ಊರುಗಳಲ್ಲಿ ತಿಪ್ಪೆಗಳು ಇರುತ್ತಿದ್ದವು. ರೈತರು ಜಾನುವಾರುಗಳ ಸಗಣಿ, ಮೂತ್ರ ಸೇರಿದಂತೆ ಮತ್ತಿತರ ಕಸ-ಕಡ್ಡಿಗಳನ್ನು ಪ್ರತಿನಿತ್ಯ ತಿಪ್ಪೆಗೆ ಹಾಕುತ್ತಿದ್ದರು. ತಿಪ್ಪೆಯಲ್ಲಿನ ತ್ಯಾಜ್ಯವನ್ನು ರೈತನ ಮಿತ್ರ ಎಂದೇ ಹೇಳಲಾಗುವ ಎರೆ ಹುಳುಗಳು ತಿಂದು ಉತ್ತಮವಾದ ಗೊಬ್ಬರವನ್ನು ತಯಾರಿಸುತ್ತಿದ್ದವು. ಹೀಗೆ ತಯಾರಾದ ಗೊಬ್ಬರವನ್ನು ಪ್ರತಿ ವರ್ಷ ರೈತರು ಹೊಲಗಳಿಗೆ ಹಾಕುತ್ತಿದ್ದರು. ಇಂಥ ಗೊಬ್ಬರ ಭೂಮಿಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತಿತ್ತು.
ಬಹಳಷ್ಟು ಜನರು ತಮ್ಮ ಮನೆಗಳಲ್ಲಿದ ದನಕರುಗಳ ಸಾಕಾಣಿಕೆ ಕಡಿಮೆ ಯಾಗಿರುವುದರಿಂದ ತಿಪ್ಪೆಗಳು ಕಡಿಮೆಯಾಗಿವೆ. ಹೀಗಾಗಿ ಸಗಣಿ ಗೊಬ್ಬರಕ್ಕೆ ಬೇಡಿಕೆ ಬಂದಿದ್ದು, ಅದರ ಬೆಲೆ ಗಗನಕ್ಕೇರಿದೆ. ಮೊದಲು ಒಂದು ಟ್ರ್ಯಾಕ್ಟರ್ ಸಗಣಿ ಗೊಬ್ಬರಕ್ಕೆ 1 ಸಾವಿರ ದಿಂದ ₹1,500 ಇತ್ತು. ಈಗ, ₹3 ಸಾವಿರದಿಂದ ₹3.500 ವರೆಗೆ ಮಾರಾಟವಾಗುತ್ತಿದೆ.

ಸಾವಯವ ಗೊಬ್ಬರ ಬಳಕೆಯಾಗಲಿ

ರೈತರು ಸಾವಯವ ಹಾಗೂ ಸಗಣಿ ಗೊಬ್ಬರ ಬಳಸುವುದರಿಂದ ಭೂಮಿಯಲ್ಲಿ ಲಘು ಪೋಷಕಾಂಶಗಳು ಹೆಚ್ಚಾಗಿ, ಭೂಮಿಯ ಫಲವತ್ತತೆ ಜಾಸ್ತಿಯಾಗುತ್ತದೆ. ಜತೆಗೆ ಭೂಮಿಯಲ್ಲಿ ಹೆಚ್ಚು ನೀರು ಇಂಗಿಸುವ ಕೆಲಸ ಮಾಡುತ್ತದೆ. ಹೀಗಾಗಿ ರೈತರು ಹೆಚ್ಚಾಗಿ ಸಾವಯವ ಹಾಗೂ ಸಗಣಿ ಗೊಬ್ಬರ ಬಳಸಬೇಕು ಎಂದು ಜಮಖಂಡಿ ತಾಲ್ಲೂಕು ಸಾವಳಗಿ ವಲಯ ಕೃಷಿ ಅಧಿಕಾರಿ ರವೀಂದ್ರ ತುಳಸಿಗೇರಿ ಸಲಹೆ ನೀಡಿದರು.

“ಹಿಂದಕ ಹಳ್ಳ್ಯಾಗ ಎಲ್ಲಾರ ಮನ್ಯಾಗ ಸಾಮಾನ್ಯವಾಗಿ ಮೂರು ನಾಲ್ಕು ದನಕರುಗಳು ಇರತ್ತಿದ್ದವು. ಮನ್ಯಾಗ 8-10 ಎತ್ತು. ದನಕರಗಳು ಇರತಿದ್ದು, ಆದ್ರ ಈಗ ಎಲ್ಲಾರೂ ದನಕರ ಸಾಕೋದ ಬಿಟ್ಟಾರ. ಹಿಂಗಾಗಿ ತಿಪ್ಪಿನೂ ಇಲ್ಲ ಸಗಣಿ ಗೊಬ್ಬರನೂ ಇಲ್ಲರೀ.”

– ಸುರೇಶ ದಾನಗೌಡ
ಚಿಕ್ಕಪಡಸಲಗಿ ಗ್ರಾಮದ ಪ್ರಗತಿಪರ ರೈತ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್‌ಐಆರ್ ಬಗ್ಗೆ ಜನರಿಗೆ ಮನವರಿಕೆ ಮಾಡಿ :ಸಂಸದ ಜಿಗಜಿಣಗಿ

ಮೊಹರಂ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಿ :ಪಿಎಸೈ ಉಪ್ಪಾರ

ಯೋಗದಿಂದ ರೋಗನಿರೋಧಕ ಶಕ್ತಿ ವೃದ್ಧಿ :ವಿಜಯಲಕ್ಷ್ಮಿ ಗಿರಗಾವಿ

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್‌ಐಆರ್ ಬಗ್ಗೆ ಜನರಿಗೆ ಮನವರಿಕೆ ಮಾಡಿ :ಸಂಸದ ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ಮೊಹರಂ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಿ :ಪಿಎಸೈ ಉಪ್ಪಾರ
    In (ರಾಜ್ಯ ) ಜಿಲ್ಲೆ
  • ಯೋಗದಿಂದ ರೋಗನಿರೋಧಕ ಶಕ್ತಿ ವೃದ್ಧಿ :ವಿಜಯಲಕ್ಷ್ಮಿ ಗಿರಗಾವಿ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಸದ್ದಿಲ್ಲದೆ ಜಲಯೋಗದ ಸಾಧನೆ ಗೈದ ಪತ್ರಕರ್ತ ಸುನೀಲ ಗೋಡೆನ್ನವರ
    In (ರಾಜ್ಯ ) ಜಿಲ್ಲೆ
  • ಯೋಗದಿಂದ ರೋಗ ದೂರ
    In ವಿಶೇಷ ಲೇಖನ
  • ನೆನಪಿನ ಗೂಡಲಿ ಒಲವಿನ ಬೆಳಕು
    In ವಿಶೇಷ ಲೇಖನ
  • ಅಪ್ಪನೆಂದರೆ ಆಲದ ಮರ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 20, 2026
    In ದಿನಪತ್ರಿಕೆ
  • ಆಲಮಟ್ಟಿ ನೀರಿನ ಹಕ್ಕಿಗಾಗಿ ಹೋರಾಟ ತೀವ್ರ :ಸಂಸದರಿಗೆ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.