ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಅರುಣ ಚಂ. ಇನಾಮದಾರ ಅವರು ಅಮೇರಿಕದಲ್ಲಿ ನಡೆಯಲಿರುವ ಅಮೇರಿಕನ್ ಅಕ್ಯಾಡೆಮಿ ಆಫ್ ಡರ್ಮೆಟಾಲಾಜಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮೇರಿಕದಲ್ಲಿರುವ ಡೆನವರ್ ನಲ್ಲಿ ಈ ಸಮ್ಮೇಳನ ಮಾರ್ಚ 26 ರಿಂದ ಮಾರ್ಚ್31ರ ವರೆಗೆ ಆರು ದಿನಗಳ ಕಾಲ ನಡೆಯಲಿದೆ.
ಇದೇ ವೇಳೆ, ಮಾರ್ಚ್ 25ರಂದು ಚಿಕ್ಯಾಗೋದ ಪ್ರತಿಷ್ಠಿತ ಇಲಿನಾಯಿಸ ವಿಶ್ವವಿದ್ಯಾಲಯದಲ್ಲಿ ಚಿಕ್ಕ ಮಕ್ಕಳಲ್ಲಿ ಚರ್ಮ ರೋಗ ವಿಷಯ ಕುರಿತು ಇನಾಮದಾರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಇಲಿನಾಯಿಸ ವಿವಿಯ ಅಸೋಶಿಯೇಟ್ ಡೀನ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ವಿವಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

