ಕಾಮಗಾರಿ ಸ್ಥಳಾಂತರಿಸದಿದ್ದರೆ ಭೀಮರಾಜ ಸೇನೆಯ ರಾಜ್ಯ ಅಧ್ಯಕ್ಷ ಶಿವು ನಾಟೀಕಾರ, ಜಿಲ್ಲಾಧ್ಯಕ್ಷ ಶ್ರೀಕಾಂತ್ ಬಿಜಾಪುರ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಂಜಲಭಾವಿ ಮತ್ತು ಬಿ.ಬಿ. ಇಂಗಳಗಿ ಗ್ರಾಮಗಳ ಮಧ್ಯ ಇರುವ ನಾಯಿ ಹಳ್ಳಕ್ಕೆ ಬ್ರಿಜ್ ಕಮ್ ಬಾಂಧಾರವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ಭೀಮರಾಜ ಸೇನೆಯ ರಾಜ್ಯ ಅಧ್ಯಕ್ಷ ಶಿವು ನಾಟೀಕಾರ ಮತ್ತು ಜಿಲ್ಲಾಧ್ಯಕ್ಷ ಶ್ರೀಕಾಂತ್ ಬಿಜಾಪುರ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ನೂತನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಿಂಜಲಭಾವಿ ಮತ್ತು ಬಿ.ಬಿ. ಇಂಗಳಗಿ ಗ್ರಾಮಗಳ ಮಧ್ಯ ಇರುವ ನಾಯಿ ಹಳ್ಳಕ್ಕೆ ಬ್ರಿಜ್ ಕಾಮ್ ಬಾಂಧಾರವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿದ್ದು ಇದರಿಂದ ಕೃಷಿ ಕಾಮಗಾರಿಗಳಿಗಾಗಲಿ, ರೈತರಿಗಾಗಲಿ, ಜಾನುವಾರಗಳಿಗಾಗಲಿ ಅಥವಾ ಜನರಿಗಾಗಲಿ ಉಪಯೋಗವಾಗುವುದಿಲ್ಲ. ಕಾರಣ ಅಲ್ಲಿ ಸಾಕಷ್ಟು ನೀರಿನ ಹರವು ಇರುವುದಿಲ್ಲ. ಕೇವಲ ಕೆಲವೇ ಕೆಲವು ಪ್ರಭಾವಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ಕಾಮಕಾರಿಯಾಗಿದ್ದು ಇದನ್ನು ಕೂಡಲೆ ಸ್ಥಗಿತಗೊಳಿಸಿ, ಬಿಂಜಲಬಾವಿ, ಕೆಸರಟ್ಟಿ, ಅಂಬಳನೂರ ಈ ಮೂರು ಊರುಗಳ ಹಳ್ಳಗಳು ಸಂಧಿಸುವ ಜಾಗಕ್ಕೆ ಈ ಕಾಮಗಾರಿ ಸ್ಥಳಾಂತರಿಸಿದರೆ ಬಿಂಜಲಬಾವಿ ಕೆಸರಟ್ಟಿ, ಅಂಬಳನೂರ, ಬಿ.ಬಿ. ಇಂಗಳಗಿ ನಾಲ್ಕು ಊರುಗಳ ಗ್ರಾಮಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಮೂರು ಹಳ್ಳಗಳು ಕೂಡಿರುವ ಜಾಗದಲ್ಲಿ ಬ್ರಿಜ್ ಕಾಮ್ ಬ್ಯಾರೇಜ್ ಅನ್ನು ನಿರ್ಮಾಣ ಮಾಡಿದ್ದಾದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳಿಗೆ, ನಾಲ್ಕು ಹಳ್ಳಿಗಳ ಜನರಿಗೆ ನೀರಿನ ಅನುಕೂಲವಾಗುತ್ತಿದ್ದು ಇದರಿಂದ ಸಾರ್ವಜನಿಕವಾಗಿ ಅನುಕೂಲವಾಗುತ್ತದೆ. ಈ ನಾಯಿ ಹಳ್ಳಕ್ಕೆ ಮಾಡುತ್ತಿರುವ ಬ್ರಿಜ್ ಕಾಮ್ ಬ್ಯಾರೇಜ್ ಬಾಂಧಾರವು ಅದೊಂದು ಸಣ್ಣ ಹರಿವು ಇರುವುದರಿಂದ ಇಲ್ಲಿ ನೀರಿನ ಹರವು ಇರದೇ ಇರುವುದರಿಂದ ಯಾರಿಗೂ ಅನುಕೂಲವಾಗುವುದಿಲ್ಲ, ಆದ್ದರಿಂದ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಈ ವಿಷಯ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ್ ಅವರ ಗಮನಕ್ಕೂ ತಂದಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಮೇಲಾಧಿಕಾರಿಗಳ ಗಮನಕ್ಕೂ ತಂದು ಮನವಿ ಅರ್ಜಿಗಳನ್ನು ಕೊಟ್ಟಿದ್ದರೂ ಕೂಡ, ಇಲ್ಲಿಯವರೆಗೂ ಕಾಮಗಾರಿ ಸ್ಥಗಿತವಾಗಲಿ ಅಥವಾ ಸ್ಥಳಾಂತರವಾಗಲಿ ಆಗಿರುವುದಿಲ್ಲ. ಹೀಗಾಗಿ ಈ ಪತ್ರಿಕಾಗೋಷ್ಠಿ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ವಿವರಿಸಿದರು.
ಇನ್ನಾದರೂ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿ ಸೂಕ್ತವಾದ, ನಾಲ್ಕು ಊರಿನ ಜನರಿಗೆ ಅನುಕೂಲವಾಗುವ ಜಾಗಕ್ಕೆ ಕಾಮಗಾರಿಯನ್ನು ನಿರ್ಮಾಣ ಮಾಡದೆ, ಯಥಾ ಸ್ಥಿತಿಯಲ್ಲಿಯೇ ಕಾಮಗಾರಿ ಮುಂದುವರಿಸಿದ್ದೇಯಾದರೆ ಸಣ್ಣ ನೀರಾವರಿ ಇಲಾಖೆ ವಿಜಯಪುರ ವಿಭಾಗದ ಇಲಾಖೆ ಮುಂದೆ ರೈತರೊಂದಿಗೆ ಸೇರಿ ಹೋರಾಟವನ್ನು ಹಮ್ಮಿಕೋಳ್ಳಲಾಗುವುದು ಎಂದು ಭೀಮರಾಜ ಸೇನೆಯ ರಾಜ್ಯ ಅಧ್ಯಕ್ಷ ಶಿವು ನಾಟೀಕಾರ, ಜಿಲ್ಲಾಧ್ಯಕ್ಷ ಶ್ರೀಕಾಂತ್ ಬಿಜಾಪುರ ಹಾಗೂ ರುದ್ರಗೌಡ ಭಿಂಜಲಭಾವಿ ಎಚ್ಚರಿಕೆ ನೀಡಿದ್ದಾರೆ.

