ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳಲ್ಲಿನ ನೈತಿಕತೆ ಶಿಸ್ತು ಸಾಮಾಜಿಕ ಸೇವೆಗೆ ಮೂಲಪ್ರೇರಣೆಯಾಗುತ್ತದೆ, ಆ ಮೂಲಕ ಉತ್ತಮ ನಾಗರಿಕತ್ವ ಗುಣ ಬರುತ್ತದೆ ಎಂದು ರಾಂಪೂರಮಠದ ನಿತ್ಯಾನಂದ ಮಹಾರಾಜರು ಹೇಳಿದರು.
ಅವರು ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್‌ಎಸ್ ಘಟಕವು ಹಮ್ಮಿಕೊಂಡಿದ್ದ ದತ್ತುಗ್ರಾಮ ರಾಂಪೂರದಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ರಾಷ್ಟ್ರೀಯತೆ ಸಂಕಲ್ಪ ಭಾವನೆ ಬೆಳಸುವದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಹಳೆಮನಿ ಹೇಳಿದರು.
ಪ್ರಾಮಾಣಿಕತನ ನಿಷ್ಠೆ ಮತ್ತು ಕಾಯಕ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಬರಬೇಕು ಆ ಉದ್ದೇಶವನ್ನಿಟ್ಟುಕೊಂಡು ಶಿಬಿರ ಆಯೋಜಿಸಲಾಗಿದೆ ಎಂದು ಎನ್ ಎಸ್ ಎಸ್ ಘಟಕದ ಸಂಯೊಜಕ ಡಾ. ಯಮನಪ್ಪ ಕೆಳಗೇರಿ ಪ್ರಸ್ತಾವಿಕ ಮಾತುಗಳಲ್ಲಿ ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡಿದರು. ಘಟಕ ೨ರ ಸಂಯೋನಾಧಿಕಾರಿ ಪ್ರೊ.ರಾಜೇಸಾಬ ಶಿಬಿರದ ಉದ್ದೇಶಗಳನ್ನು ತಿಳಿಸಿದರು.
ಅನೀಲ ಕುರಬತಳ್ಳಿ ಸ್ವಾಗತಿಸಿದರು. ಆಕಾಶ ಹೆಗಡೆ ವಂದಿಸಿದರು. ಐಶ್ವರ್ಯ ದೇವರಮನಿ ನಿರೂಪಿಸಿದರು.

