Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ೨೦೨೬-೨೭ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.೫,೦೦೦ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.೨೦೨೫-೨೬ನೇ ಸಾಲಿನಲ್ಲಿ ಯೋಜನೆಯ ಸೌಲಭ್ಯ ಪಡೆದ ನೇಕಾರರಲ್ಲಿ ಪ್ರಸ್ತುತ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಪಿಎಂಜೆಜೆಬಿವೈ ಅಥವಾ ಪಿಎಂಎಸ್‌ಬಿವೈ ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರುವ ಅರ್ಹ ನೇಕಾರರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕಳೆದ ಸಾಲಿನಲ್ಲಿ ನೋಂದಣಿ ಮಾಡಿಸದ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರೂ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ ೨೨ ಕೊನೆಯ ದಿನವಾಗಿದೆ.ಹೊಸ ಅರ್ಜಿದಾರರು ನಿಗದಿತ ಅರ್ಜಿ ನಮೂನೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ ಸಮ್ಮಾನ್ ಐಡಿ ಅಥವಾ ಪೆಹಚಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ನೇಕಾರರ ಗುರುತಿನ ಚೀಟಿ, ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವುದಕ್ಕೆ ಸಮರ್ಥನೆಯಾಗಿ ಭಾವಚಿತ್ರ ಹಾಗೂ ಪಿಎಂಜೆಜೆಬಿವೈ-ಪಿಎAಎಸ್‌ಬಿವೈ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು.ಅರ್ಹ ನೇಕಾರರು ತಮ್ಮ ವಿವರಗಳನ್ನು ಸ್ಥಳೀಯ…
ಶಾಲೆಗೆ ಬೇಳೆ ಎಣ್ಣೆ ಪೂರೈಕೆಯೂ ಇಲ್ಲ | ಮೊಟ್ಟೆಗಳ ಖರೀದಿ ವೆಚ್ಚದಲ್ಲಿ ಭಾರಿ ಏರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ವಿತರಿಸುವ ಮೊಟ್ಟೆಗಳ ಖರೀದಿ ವೆಚ್ಚದಲ್ಲಿ ಭಾರಿ ಏರಿಕೆಯಾಗಿದ್ದು ಹೆಚ್ಚುವರಿ ದರ ಅನ್ವಯ ಶಾಲೆಗೆ ಹಣ ಬಿಡುಗಡೆ ಮಾಡಬೇಕೆಂದು ವಿಜಯಪುರ ನಗರವಲಯ ಶಿಕ್ಷಕ ಸಂಘದ ಅಧ್ಯಕ್ಷ ಜುಬೇರ ಎಸ್. ಕೆರೂರ ಅವರು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕ ಎಸ್.ಎಂ. ಕುಂಬಾರ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಜುಬೇರ ಕೇರೂರ, ಪ್ರಸ್ತುತ ದೈನಂದಿನ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ₹ 8 ಇದೆ. ಸರ್ಕಾರ ಪ್ರತಿ ಮೊಟ್ಟೆಗೆ ₹ 6 ಮಾತ್ರ ಅನುದಾನ ಮಾತ್ರ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ₹ 2 ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಅದಕ್ಕೆ ಸ್ಪಂದಿಸಬೇಕಾಗಿದ್ದ ಆರೋಗ್ಯ ಇಲಾಖೆಯ ಜಿಲ್ಲಾಧಿಕಾರಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆ ತೋರಿದ್ದು, ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿ ಚಿದಾನಂದ ಗುರುಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಗುರುವಾರ ನಗರದಲ್ಲಿರುವ ತಾಲೂಕು ಆಡಳಿತ ಸೌಧದ ಕಂದಾಯ ಉಪವಿಭಾಗ ಕಾರ್ಯಾಲಯದಲ್ಲಿ ನಗರದ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕಾರ್ಯತರು ತಾಲೂಕು ಸರಕಾರಿ ಆಸ್ಪತ್ರೆಯ ಬಗ್ಗೆ ನಿರ್ಲಕ್ಷ್ಯ ಮತ್ತು ಗರ್ಭಿಣಿಯರಿಗೆ ನಿಷ್ಕಾಳಜಿ ಹೊಂದಿರುವ ಆರೋಗ್ಯ ಜಿಲ್ಲಾಧಿಕಾರಿ ಮೇಲೆ ಜರೂರು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮುಖಂಡ ಅಯೂಬ್ ನಾಟೀಕಾರ, ನ್ಯಾಯವಾದಿ ವಿಕಾಸ ಹೊಸಮನಿ ಮಾತನಾಡಿ, ತಾಲ್ಲೂಕಿನಲ್ಲಿ ಗರ್ಭಿಣಿ ಮಹಿಳೆಯರು ಬಾಣಂತನ ಹಾಗೂ ಇತರೆ ತುರ್ತು ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ಆಗಮಿಸಿದಾಗ ಅಗತ್ಯವಾದ ಸ್ತ್ರೀರೋಗ ತಜ್ಞ (Gynecologist) ವೈದ್ಯರು ಲಭ್ಯವಿಲ್ಲದಿರುವುದು ಅತ್ಯಂತ ಆತಂಕಕಾರಿ ಹಾಗೂ ಆಡಳಿತಾತ್ಮಕ ವೈಫಲ್ಯದ ಸಂಗತಿಯಾಗಿದೆ. ಗರ್ಭಿಣಿ ಮಹಿಳೆಯರ ಆರೋಗ್ಯ ಮತ್ತು ಜೀವ…
ಕಾಂಗ್ರೆಸ್ ಮುಖಂಡ ಎಚ್ ಸಿ ನರಸಿಂಹಮೂರ್ತಿ ಸವಾಲು ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕಿನ ಬನವಾಡಿ ಗ್ರಾಮದಲ್ಲಿ ಒಂದೇ ಒಂದಿಂಚು ಭೂಮಿ ನನ್ನ ಹೆಸರಿನಲ್ಲಿ ಇದ್ದರೆ, ಇದೆ ಎಂದು ಸಾಬೀತು ಮಾಡಿದರೆ ನಾನು ದೇಶ ಬಿಟ್ಟು ಹೋಗುತ್ತೇನೆ. ಅಲ್ಲದೆ ಆ ಗ್ರಾಮದ ನಿಂಗರಾಜಮ್ಮ ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಆರೋಪ ಸಾಬೀತರಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ನರಸಿಂಹ ಮೂರ್ತಿ ಸವಾಲು ಹಾಕಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನರಸಿಂಹಮೂರ್ತಿ, ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಬನವಾಡಿ ಗ್ರಾಮದ ನಿಂಗರಾಜಮ್ಮ, ಶಿವಯ್ಯ ಹಾಗೂ ಚೆನ್ನ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ನನ್ನ ಏಳಿಗೆ ಸಹಿಸಲಾಗದೆ, ರಾಜಕೀಯವಾಗಿ ಮುಗಿಸಲು ಕೆಲವರು ನಿಂಗರಾಜಮ್ಮ ಅವರನ್ನು ಮುಂದೆಬಿಟ್ಟು ಮಾಡುತ್ತಿರುವ ಷಡ್ಯಂತ್ರ. ನಾನು ಇರೋದು ಹೆಚ್ ಡಿ ಕೋಟೆ ಕೋಟೆಯಲ್ಲಿ, ಆದರೆ ನಾನೊಬ್ಬ ದಲಿತ ಸಮುದಾಯದ ಮುಖಂಡರಾಗಿರುವ ಹಿನ್ನೆಲೆ ನಮ್ಮ ಸಮಾಜದ ಆಗುಹೋಗುಗಳ ಬಗ್ಗೆಆಯಾ…
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನಡಹಳ್ಳಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ನೇತೃತ್ವದಲ್ಲಿ ಇದೇ ದಿ. ೩೦ ರಂದು ತಾಳಿಕೋಟೆ ತಾಲೂಕಿನ ಮೂಕೀಹಾಳ ಗ್ರಾಂ ಪಂಚಾಯ್ತಿ ಎದುರು ಸಾವಿರಾರು ರೈತರೊಂದಿಗೆ ಪಂಚಾಯ್ತಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ಹೇಳಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ೨೦೧೯ರಿಂದ ಇಲ್ಲಿಯವರೆಗೆ ಮೂಕೀಹಾಳ ಗ್ರಾಪಂ ವ್ಯಾಪ್ತಿಯ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆಯ ಇನ್ಸೂರೇನ್ಸ್ ತುಂಬುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಕೂಡಾ ರೈತರ ಬೆಳೆಗಳು ಹಾಳಾಗಿ ಹೋಗಿದ್ದರೂ ಇನ್ಸೂರೇನ್ಸ್ ಕಂಪನಿಯಿಂದ ಹಣ ರೈತರಿಗೆ ಜಮೆಯಾಗಿಲ್ಲಾ ಇದಕ್ಕೆ ಮುಖ್ಯ ಕಾರಣವೇನೆಂಬುದು ಬೇಕಾಗಿದೆ. ಬೆಳೆ ಹಾನಿ ವರದಿ ಸಲ್ಲಿಸಬೇಕಾದ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಕೃಷಿ ಇಲಾಖಾ ಅಧಿಕಾರಿಗಳು ಗ್ರಾಮಾಡಳಿತ ಅಧಿಕಾರಿಗಳು ಇನ್ಸೂರೇನ್ಸ್…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮತಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮತ್ತೊಂದೆಡೆಗೆ ತೆರಳಬಾರದು ಎಂಬ ದಿಸೆಯಲ್ಲಿ ಗ್ರಾಮಸ್ಥರೆಲ್ಲರು ಸೇರಿಕೊಂಡು ಪ್ರೌಢಶಾಲಾ ನಿರ್ಮಾಣಕ್ಕೆ ಹೊಸ ಜಮೀನು ಖರೀದಿ ಮಾಡಲು ಮುಂದಾಗಿದ್ದು, ಅದರ ಖರೀದಿಗಾಗಿ ಸಿಂದಗಿಯ ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ರೂ.೫ಲಕ್ಷ, ಹಾಗೂ ಸಚಿವ ಡಾ.ಎಂ.ಬಿ.ಪಾಟೀಲ ಅವರು ನೀಡಿದ ರೂ.೫ಲಕ್ಷ ಚೆಕ್‌ನ್ನು ಗ್ರಾಮಸ್ಥರಿಗೆ ಶಾಸಕ ಅಶೋಕ ಮನಗೂಳಿ ಹಸ್ತಾಂತರಿಸಿದರು.ಸಿಂದಗಿ ನಗರದ ಶಾಸಕರ ಕಾರ್ಯಾಲಯದಲ್ಲಿ ಬಮ್ಮನಳ್ಳಿ ಗ್ರಾಮದ ಶಾಲೆಯ ಭೂಮಿ ಖರೀದಿಗೆ ರೂ.೧೦ಲಕ್ಷಗಳ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಈ ಹಿಂದೆ ನೂತನ ಗ್ರಾಪಂ ಕಟ್ಟಡದ ಲೋಕಾರ್ಪಣೆ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲರು ಹಾಗೂ ನಾನು ತಲಾ ೫ಲಕ್ಷದಂತೆ ಶಾಲಾ ನಿರ್ಮಾಣಕ್ಕಾಗಿ ಜಮೀನು ಖರೀದಿಗಾಗಿ ನೀಡುವುದಾಗಿ ಭರವಸೆ ನೀಡಿದ್ದೇವು. ಅದರಂತೆ ರೂ.೧೦ಲಕ್ಷ ಚೆಕ್ಕನ್ನು ಹಸ್ತಾಂತರ ಮಾಡಲಾಗಿದೆ. ಈ ಪಬ್ಲಿಕ್ ಶಾಲೆ ಮಂಜೂರು ಮಾಡುವ ಮೂಲಕ ರೂ.೪ಕೋಟಿ ಮಂಜೂರು ಮಾಡಿಸಲಾಗಿದೆ ಎಂದರು.ಈ ವೇಳೆ ಗ್ರಾಮದ ಪ್ರಮುಖರಾದ ಬಿ.ಎಚ್.ಬಿರಾದಾರ ಮಾತನಾಡಿ, ಕಳೆದ ೧೮ವರ್ಷಗಳಿಂದ ಶಾಲೆಗಾಗಿ…
ಲೇಖನ- ರಶ್ಮಿ ಕೆ. ವಿಶ್ವನಾಥ್,ಮೈಸೂರು ಉದಯರಶ್ಮಿ ದಿನಪತ್ರಿಕೆ ‘ಅಂದ, ಆರೋಗ್ಯ ಎರಡರಲ್ಲಿ ಯಾವುದು ಬೇಕು?’ ಎಂದು ಯಾರಾದರು ಬುದ್ಧಿವಂತರನ್ನ ಕೇಳಿದರೆ. ‘ಆನಂದ ಬೇಕು’ ಎನ್ನುತ್ತಾರೆ.’ಕವಿರತ್ನ ಕಾಳಿದಾಸನ ಎದುರಿಗೆ ಸರಸ್ವತಿ ಪ್ರತ್ಯಕ್ಷಳಾಗಿ ಹಾಲು & ಮೊಸರು ಎರಡು ಬಟ್ಟಲನ್ನು ಅವನ ಎದುರಿಗೆ ಹಿಡಿದು, “ಯಾವುದು ಬೇಕೋ ಆರಿಸಿಕೊ” ಎಂದು ಹೇಳಿದಾಗ. ಕಾಳಿದಾಸ ಎರಡನ್ನು ಒಟ್ಟಿಗೆ ತೆಗೆದುಕೊಂಡು ಕುಡಿದುಬಿಟ್ಟ’ ಎಂಬುದೊಂದು ಕಥೆ ಇದೆಯಲ್ಲ ಹಾಗೆ..ಅಂದದಿಂದ ಆರೋಗ್ಯದಿಂದ ಎರಡರಿಂದಲೂ ಆನಂದ ಸಿಗುತ್ತೆ ಎಂದಮೇಲೆ ‘ಆನಂದವನ್ನ’ ಕೇಳುವುದೇ ಜಾಣತನ ಅಲ್ವೇ?ಆದರೆ ಅದು ಸಾಧ್ಯವೆ..?ಸಾಧ್ಯವಿತ್ತು. ಮೊದಲಿಗೆ. ಇವಾಗ.. ಸ್ವಲ್ಪ ಎಂದು ಹೇಳಲಾಗುವುದಿಲ್ಲ. ಜಾಸ್ತಿಯೇ ಕಷ್ಟ.ನಮ್ಮ ಭಾರತಿಯರಿಗೆ ಚರ್ಮದ ಬಣ್ಣ ಬಿಳಿ ಇರಬೇಕು, ಕೂದಲ ಬಣ್ಣ ಕಪ್ಪುಇರಬೇಕು ಎಂಬುದಷ್ಟೇ ಬಯಕೆ.ಅಂದುಕೊಂಡಂಗೆ ಆಗಿಬಿಟ್ಟರೆ ಅದರ ಜಾಯಮಾನಕ್ಕೆ ಅವಮಾನ. ಹಾಗಾಗಿ ಈವಾಗಿನ ದಿನಗಳಲ್ಲಿ ಅದು ಉಲ್ಟಾನೇ ಆಗ್ತಾಹೋಗ್ತಾ ಇದೆ.ಅದಕ್ಕಾಗಿ ನಾವುಗಳು ನಾಯಿಬಾಲಕ್ಕೆ ದಬ್ಬೆ ಕಟ್ಟುವ ಕೆಲಸ ಮಾಡ್ತಾ ಇದ್ದೇವೆ.ಬಿಳಿಯದಾಗುತ್ತಾ ಬರುವ ಕೂದಲಿಗೆ ಕಪ್ಪುಬಣ್ಣ ಬಳಿಯೋದು, ಕಪ್ಪಗಾಗುವ ಮುಖಕ್ಕೆ ಬಿಳಿಗಾಗೊ ಕ್ರೀಮು ಬಳಿಯೋದು. ಈ…
ಲೇಖನ- ಡಾ.ಶಶಿಕಾಂತ.ಪಟ್ಟಣಪೂನಾ – ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಜಗವು ಕಂಡ ಮೊದಲ ಬಂಡಾಯ ಸಾಹಿತ್ಯ ವಿದ್ರೋಹಿ ಸಾಹಿತ್ಯ ದೇಸಿ ಸಾಹಿತ್ಯವೇ ಶರಣ ಸಾಹಿತ್ಯ ವಚನ ಸಾಹಿತ್ಯ.”ಆರು ಮುನಿದು ನಮ್ಮನೇನು ಮಾಡುವರು?ಊರು ಮುನಿದು ನಮ್ಮನೆಂತು ಮಾಡುವರು?ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯನ್ನಿಕ್ಕಬೇಡ,ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೇ?ನಮಗೆ ನಮ್ಮ ಕೂಡಲಸಂಗಯ್ಯನುಳ್ಳನಕ್ಕ.”ಶರಣರ ಕ್ರಾಂತಿ ರಸಿಯಾ , ಫ್ರೆಂಚ್ ಕ್ರಾಂತಿಗಿಂತ ಭಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ .ಒಬ್ಬ ಸಮಾಜವಾದಿ ಚಿಂತಕ ಬಿ ಎನ್ಹೇ ರಾಯ್ ಅವರು ಹೇಳಿದಂತೆ -“Karl Marx has taught us the dignity of labor but Basavanna has taught us dignity and divinity of labor ” ,-ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣ ಹೊಸ ಚೇತನ ನೀಡಿದರು. ಬತ್ತಿ…
ಅಮ್ಮ ಎನ್ನುವ ಪದದಲ್ಲಿ ಅಘಾದ ಶಕ್ತಿ ಇದೆ :ಸಾಸನೂರ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಅಮ್ಮಾ ಎಂದು ಕರೆಸಿಕೊಳ್ಳುವ ತಾಯಿಯು ತನ್ನ ಎಲ್ಲ ಮಕ್ಕಳಿಗೆ ಸಂಸ್ಕಾರಯುತ ಬಧುಕನ್ನು ರೂಪಿಸುವಂತಹ ಕೆಲಸ ಮಾಡುತ್ತಾಳೆ ಅಂತಹ ಅಮ್ಮಾ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ ಫೌಂಡೇಶನ್ ಇತರರಿಗೆ ಮಾದರಿಯಾಗಿ ಬೆಳೆಯಲಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ಮಂಗಳವಾರ ನೂತನವಾಗಿ ಆರಂಭವಾದ ಅಮ್ಮಾ ಫೌಂಡೇಶನ್ (ರಿ) ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಅಮ್ಮಾ ಎಂಬ ಪದವು ಜಗತ್ತನ್ನೇ ಗೆಲ್ಲಿಸುವಂತಹ ಶಕ್ತಿ ಅದರಲ್ಲಿದೆ ಮಕ್ಕಳಿಗೆ ತಾಯಿಯಾಗಿ ಮೊದಲನೇ ಗುರುವಾಗಿ ಸಂಸ್ಕಾರ ಜೊತೆಗೆ ಶಿಕ್ಷಣ ಕಲಿಸಿ ದೇಶಕ್ಕೆ ಒಳ್ಳೆಯ ಪ್ರಜೆಯನ್ನು ನೀಡುವಂತಹ ಕೆಲಸ ಮಾಡುತ್ತಾಳೆ ಅಂತಹ ತಾಯಿ ಸ್ವರೂಪದ ಹೆಸರಿನಿಂದ ನಮ್ಮ ದೇಶಕ್ಕೂ ಕೂಡಾ ಭಾರತಾಂಭೆ ಹೆಸರಿನಿಂದ ಕರೆಯುತ್ತೇವೆ. ಸದಾ ಒಳ್ಳೆಯ ವಿಚಾರಗಳೊಂದಿಗೆ ತಮ್ಮ ಮಕ್ಕಳು ಹೀಗೆ ಬೆಳೆಯಬೇಕೆಂಬ ಆಲೋಚನೆಯೊಂದಿಗೆ ಸಮಾಜಕ್ಕೆ ಕೊಡುಗೆಯಾಗಿ ನೀಡುವ ತಾಯಿಯ…
ಉದಯರಶ್ಮಿ ದಿನಪತ್ರಿಕೆ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಈಶಾ ಫೌಂಡೇಷನ್ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಈಶಾ ಫೌಂಡೇಷನ್ ನ ಯೋಗ ಸಾಧಕರು ಯೋಗದ ಮಹತ್ವದ ಜೊತೆಗೆ ಯೋಗ ಸಾಧನೆಯಿಂದಾಗುವ ಲಾಭಗಳನ್ನು ಮನದಟ್ಟಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಧ್ಯಾನ ಮಾಡುವ ವಿಧಾನ ಹಾಗೂ ಧ್ಯಾನದ ಮೂಲಭೂತ ತತ್ವಗಳನ್ನು ತಿಳಿಸುವುದರೊಂದಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟರು.ವಿದ್ಯಾರ್ಥಿ ಜೀವನದಲ್ಲಿ ಚೇತೋಹಾರಿ ಬದಲಾವಣೆ ಕಆಣಬೇಕಾದರೆ ಅದು ಯೋಗದಿಂದ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಜೊತೆಗೆ ಏಕಾಗ್ರತೆಯನ್ನು ಕಂಡುಕೊಳ್ಳುವುದಕ್ಕೆ ಯೋಗವು ರಾಮಬಾಣವಾಗಿ ಕಾರ್ಯ ಮಾಡುತ್ತದೆ. ಹೀಗಾಗಿ ದಿನಕ್ಕೆ ಒಂದಷ್ಟು ಸಮಯವನ್ನು ಯೋಗಕ್ಕೆ ಮೀಸಲಾಗಿಟ್ಟರೆ ಬದುಕಿನಕಲ್ಲಿ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು.ಹಲವಾರು ಆಸಗಳನ್ನು ಮಾಡುವುದರಿಂದ ಆಗುವ ಲಾಭಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.ಕಾರ್ಯಕ್ರಮದಲ್ಲಿ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು…
