ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬಿ.ಎಲ್. ಡಿ. ಇ. ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಸೈಬರ್ ಸೆಕ್ಯೂರಿಟಿ ವಿಷಯದ 2025-26 ನೇ ಸಾಲಿನ ಪರೀಕ್ಷೆಯಲ್ಲಿ ಮುಕ್ತೇಶ ವಾಲಿಕಾರ, ಪವನಕುಮಾರ ಬೋಸ್ಲೆ, ಪ್ರಮೋದ ಹೂಗಾರ, ವೀರೇಶ ಹಿರೇಮಠ, ಸಂಗಮೇಶ ವಳಸಂಗ, ಆದರ್ಶ ಗಗನಮಾಲಿ, ಅಕ್ಷತಾ ಅವಟಿ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಸಾಧನೆಗೈಯುವುದರ ಮೂಲಕ ವಿಭಾಗಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಶೇ.೯೫ ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಅಪ್ಸನಾ ಬೇವನೂರು, ಸುಮಿತ ಹಿರೇ ನಾಯಕ, ಐಶ್ವರ್ಯ ಅವಟಿ, ಗುರುಪ್ರಸಾದ ಮಠಪತಿ,
ಐಶ್ವರ್ಯ ಜೇವೂರೆ,
ಸುಮನ ವನರಾಶಿ, ಸುನೀತಾ ವನರಾಶಿ, ರೋಹಿಣಿ ಜಾಧವ, ಮಯೂರಿ ಜೇವೂರೆ, ಅಬ್ದುಲ್ ಬಾಗವಾನ್ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ, ಸೈಬರ್ ಸೆಕ್ಯೂರಿಟಿ ವಿಷಯ ಉಪನ್ಯಾಸಕ ದೇವರಾಜ ಪಾಟೀಲ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

