ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆ ಅಬಲೆಯಲ್ಲ ಸಬಲೆ, ಅವಳಿಗೆ ಸಮಾಜದಲ್ಲಿ ಪುರುಷರಷ್ಟೆ ಸರಿಸಮಾನವಾದ ಅವಕಾಶಗಳು ಮಹಿಳೆಗೆ ದೊರೆಯಬೇಕು ಎಂದು ಮಹಿಳಾ ವಿಶ್ವವಿಧ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ಪಾಟೀಲ ಹೇಳಿದರು.
ನಗರದ ನವರಸಪುರ ಬಡಾವಣೆಯ ಸಿದ್ಧಾರ್ಥ ಕಾಲೋನಿಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲಿಂಗ ತಾರತಮ್ಯ ಮಾಡದೆ ಅ ಮಹಿಳೆಯರಿಗೆ ಗೌರವ ಸಿಗಬೇಕು. ಮಹಿಳೆಯರಿಗೆ ಇರುವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು. ಮಹಿಳಾ ಹಕ್ಕುಗಳು ಮತ್ತು ಹಿಂಸಾಚಾರದ ವಿರುದ್ಧದ ಹೋರಾಟವನ್ನು ಬಲಪಡಿಸುವ ಅರಿವು ಮೂಡಿಸಬೇಕು ಎಂದರು.
ಹಾಸ್ಟೆಲ್ ವಾರ್ಡನ್ ಗೀತಾ ನಾಲತವಾಡ ಮಾತನಾಡಿ ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ತಾರತಮ್ಯದ ನಿರ್ಮೂಲನೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕಾರ್ಯವಾಗಬೇಕು ಎಂದರು.
ಭರತನಾಟ್ಯ ಕಲೆಯಲ್ಲಿ ವಿಶೇಷ ಸಾಧನೆ ಮಾಡಿ ಬಹುಮಾನ ಪಡೆದ ಸಾಧನಾ ಬಸವರಾಜ ಕೊಟ್ಯಾಳ ಬಾಲಕಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಮತಾ ನಾಯಕ ವಹಿಸಿದ್ದರು. ಕರುನಾ ಕುಲಕರ್ಣಿ , ಸುಮಂಗಲಾ ದೊಡಮನಿ, ಕಲೋನಿಯ ಎಲ್ಲ ಮಹಿಳೆಯರು ಭಾಗವಹಿಸಿದ್ದರು.
ಪ್ರಾರ್ಥನೆಯನ್ನು ಶಿಲ್ಪಾ ನಡಗಡ್ಡಿ, ಸ್ವಾಗತವನ್ನು ಪದ್ಮಾ ಕಟ್ಟಿಮನಿ, ನಿರೂಪಣೆ ಶಶಿಕಲಾ ಸಿದರೆಡ್ಟಿ, ವಂದನಾರ್ಪನೆಯನ್ನು ಅರುನಾ ಸಿನ್ನೂರ ನೆರವೇರಿಸಿದರು.

