ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಶಿರಗೂರ ಗ್ರಾಮದ ರೈತರ ಜಮೀನಿನಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಕಂಬ ಜೋತು ಬಿದ್ದಿರುವದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಅನೇಕ ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವದೇ ಕ್ರಮ ಕೈಕೊಳ್ಳದಿರುವದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಯೊಬ್ಬರ ಜಮೀನಿನಲ್ಲಿ ಕಂಬ ಎರಡು ಕಡೆಯಿಂದ ವಾಲಿ ನಿಂತಿವೆ. ಮೇಲಿನ ವಿದ್ಯುತ್ ತಂತಿಗಳು ಕೂಡ ಅಸ್ಥಿರವಾಗಿದ್ದು ಅಪಾಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಪರಿಸ್ಥಿತಿಯಲ್ಲಿ ರೈತರು ತಮ್ಮ ದಿನ ನಿತ್ಯದ ಕೃಷಿ ಕಾರ್ಯ ಚಟುವಟಿಕೆಗಳನ್ನು ಭಯ ಭಿತಿಯಿಂದಲೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವಿದ್ಯುತ ಕಂಬಗಳು ಮಳೆ ಗಾಳಿ ಬಿಸಿದಾಗ ಇನ್ನಷ್ಟು ಜಾರುವ ಪರಿಸ್ಥಿತಿಯಲ್ಲಿದ್ದು ಯಾವದೇ ಪರಿಸ್ಥಿತಿಯಲ್ಲಿ ನೆಲಕ್ಕುರುಳುವ ಸಾದ್ಯತೆ ಹೆಚ್ಚಾಗಿದೆ. ಗಾಳಿಯ ರಭಸಕ್ಕೆ ವಿದ್ಯುತ್ ತಂತಿಗಳು ಪರಸ್ಪರ ಒಂದಕ್ಕೊಂದು ತಗುಲಿ ಬೆಂಕಿಯ ಕಿಡಿಗಳು ಹಾರುತ್ತಿದ್ದು ಬೆಳೆಗಳಿಗೆ ಅಪಾಯ ಎದುರಾಗಿದೆ.
ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ.
“ರೈತರ ಹೊಲದಲ್ಲಿ ಅಷ್ಟೆ ಅಲ್ಲ, ರಸ್ತೆ ಮೇಲಿನ ತಂತಿಗಳು ಜೋತು ಬಿದ್ದಿವೆ. ಅನೇಕ ಬಾರಿ ವಿದ್ಯುತ್ ಇಲಾಖೆಗೆ ಮನವಿ ಮಾಡಿದ್ದೇವೆ. ಯಾವದೇ ಕ್ರಮ ಕೈಕೊಂಡಿಲ್ಲ.”
– ಅರ್ಜುನ ಪೂಜಾರಿ
ಸ್ಥಳೀಯ ರೈತ
“ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಒಂದು ವಾರದಲ್ಲಿ ಸೂಕ್ತ ಕ್ರಮ ಕೈಕೊಳ್ಳುತ್ತೇವೆ.”
– ಸಂಗಮನಾಥ ಮೆಡೆಗಾರ
ಎಇಇ ಹೆಸ್ಕಾಂ, ಇಂಡಿ

