Author: editor.udayarashmi@gmail.com

ವಿಜಯಪುರ: ತಾಳ್ಮೆಯ ಕೊರತೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಮನೊರೋಗ ತಜ್ಞ ಡಾ. ಸಂತೋಷ ರಾಮದುರ್ಗ ಹೇಳಿದ್ದಾರೆ.ಮಂಗಳವಾರ ವಿಶ್ವ ಆತ್ಮಹತ್ಯೆ ತಡೆ ದಿನ ಮತ್ತು ಅದರ ಉಪಚಾರ ದಿನದ ಅಂಗವಾಗಿ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಕಾಲೇಜಿನ ಯುವಕ ಮತ್ತು ಯುವತಿಯರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಳ್ಮೆಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಯಾವ ವ್ಯಕ್ತಿ ಆತ್ಮಹತ್ಯೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುತ್ತಾನೋ ಅಂಥವರ ಬಗ್ಗೆ ನಾವು ತೀವ್ರ ನಿಗಾ ವಹಿಸಬೇಕು. ಅಲ್ಲದೇ, ಅವರಿಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು,ಡಾ. ಗೌತಮಿ ಮಾತನಾಡಿ, ವಿಶ್ವಾದ್ಯಂತ ಪ್ರತಿವರ್ಷ ಸುಮಾರು ಏಳು ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರಲ್ಲಿ 1.60 ಲಕ್ಷ ಜನ ಭಾರತದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.…

Read More

ದೇವರಹಿಪ್ಪರಗಿ: ಎತ್ತಿನಗಾಡಿ (ಚಕ್ಕಡಿ)ಗೆ ಕಟ್ಟಿದ್ದ ಎತ್ತುಗಳು ಬೆದರಿ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಪಡಗಾನೂರ ಗ್ರಾಮದಲ್ಲಿ ಜರುಗಿದೆ.ತಾಲ್ಲೂಕಿನ ಪಡಗಾನೂರ ಗ್ರಾಮದ ಯಮನಪ್ಪ ವಡ್ಡೋಡಗಿ ಎಂಬುವವರಿಗೆ ಸೇರಿದ ಅಂದಾಜು ೧.೫೦ ಲಕ್ಷ.ರೂ ಮೌಲ್ಯದ ಎರಡು ಎತ್ತುಗಳನ್ನು ಎತ್ತಿನಗಾಡಿಗೆ ಕಟ್ಟಿ ಅವುಗಳಿಗೆ ಮೇವು ತರಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ಬೆದರಿದ ಎತ್ತುಗಳು ಕಟ್ಟಿದ್ದ ಗಾಡಿಯ ಸಮೇತ ಸಮೀಪದ ಭಾವಿಗೆ ಬಿದ್ದಿವೆ.ಬಹುತೇಕ ತುಂಬಿದ್ದ ಭಾವಿಯಲ್ಲಿ ಎತ್ತುಗಳು ಈಜಬಹುದಾಗಿದ್ದರೂ ಗಾಡಿಗೆ ಕಟ್ಟಿದ್ದ ಕಾರಣ ಈಜಲಾಗದೇ ಅಸುನೀಗಿವೆ.ಘಟನಾ ಸ್ಥಳಕ್ಕೆ ಪಶು ವೈದ್ಯಕೀಯ ಆಸ್ಪತ್ರೆಯ ತಾಲ್ಲೂಕು ಸಹಾಯಕ ನಿರ್ದೇಶಕ ಭೀಮಾಶಂಕರ ಕನ್ನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಸಿಂದಗಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ಬಾಲಕಿಯರ ಖೋಖೋ ದ್ವಿತೀಯ, ಬಾಲಕರ ಹಾಗೂ ಬಾಲಕಿಯರ ಟೆನಿಕ್ವಾಯಿಟ್ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ೩೦ ಜನ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಸಾಧನೆಗೆ ಮಾರ್ಗದರ್ಶನ ನೀಡಿದ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಸುನೀಲ ಪಾಟೀಲ, ಎನ್.ಬಿ.ಪೂಜಾರಿ, ಪ್ರಸನ್ನ ಜೋಗೂರ, ಎಸ್.ಎಸ್.ತಾಳಿಕೋಟಿ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಶಿವರಾಜ ಕುಂದಗೋಳ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ಸ್ನೇಹಾ ಕುಲಕರ್ಣಿ, ಸ್ನೇಹಾ ಧರಿ, ಲಕ್ಷ್ಮೀ ಕನ್ನೊಳ್ಳಿ, ಎಸ್.ಎಸ್.ಹೂಗಾರ, ರಾಹುಲ…

Read More

ನೂತನ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ರಾಜಣ್ಣ ನಾರಾಯಣಕರ ಅವಿರೋಧ ಆಯ್ಕೆ | ಸಿಂದಗಿ: ತೀವ್ರ ಕುತೂಹಲ ಕೆರಳಿದ್ದ ಸಿಂದಗಿ ಪುರಸಭೆಯ ಎರಡನೆಯ ಅವಧಿಗೆ ಒಟ್ಟು ೨೩ ಸದಸ್ಯರಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ಜರುಗಿತು. ಪುರಸಭೆಯ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ೧೪ನೇ ವಾರ್ಡ್ ಸದಸ್ಯ ಶಾಂತವೀರ ಸಿದ್ದಪ್ಪ ಬಿರಾದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮತ್ತು ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ೧೮ನೇ ವಾರ್ಡ್ ಸದಸ್ಯ ರಾಜಣ್ಣ ಧರ್ಮಣ್ಣ ನಾರಾಯಣಕರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು ೨೩ ಜನ ಸದಸ್ಯರು ಅದರಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಜನ ಸದಸ್ಯರು ಮಾತ್ರ ಹಾಜರಿದ್ದು, ೫ ಜನ ಸದಸ್ಯರು ಗೈರಾಗಿದ್ದರು. ಕೋರಂ ಭರ್ತಿಗೆ ೯ ಜನ ಸದಸ್ಯರು ಇರಬೇಕು ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಸದಸ್ಯರಿರುವ ಕಾರಣ ಚುನಾವಣೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ…

Read More

ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿದ ಸಂಸದ ರಮೇಶ ಜಿಗಜಿಣಗಿ ಮಾಹಿತಿ ಇಂಡಿ: ನಾನು ಪ್ರಚಾರಪ್ರೀಯನಲ್ಲ. ಸದ್ದಿಲ್ಲದೆ ಅಭಿವೃಧ್ಧಿ ಕೆಲಸ ಮಾಡಿ ಮುಗಿಸಿ ತೃಪ್ತಿಪಡುವುದು ನನ್ನ ಸ್ವಭಾವವಾಗಿದೆ. ಕಳೆದ ೧೦ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ೧ ಲಕ್ಷ ೧೦ ಸಾವಿರ ಕೋಟಿ ರೂ, ಗಳ ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಸೋಮವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ೯೮೪ ಕೋಟಿ ರೂ, ಗಳ ೫೪೮-ಬಿ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ನನ್ನ ೫೦ ವರ್ಷಗಳ ರಾಜಕೀಯ ಜೀವನಕ್ಕೆ ಇಂಡಿ ಜನತೆ ಜೀವ ತುಂಬಿದ್ದಾರೆ. ಅವರ ಋಣ ಮುಟ್ಟಿಸುವದಕ್ಕಾಗಿ ನನ್ನ ಜೀವ ಒತ್ತೇ ಇಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.ಇಂಡಿ ಕಾಲುವೆಯ ರಿಪೇರಿಗಾಗಿ ೨೭೦೦ ಕೋಟಿ ರೂ, ಗಳ ಅನುದಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.ಇಂದು ಭೂಮಿಪೂಜೆ ನಡೆದ ಈ ೯೮೪ ಕೋಟಿ ರೂ, ಗಳ…

Read More

ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ಇಂಡಿ: ಪಟ್ಟಣದ ಸ್ಟ್ರೀಟ್ ಲೈಟ್, ಯಜೆಡಿ, ಟ್ರಾಫಿಕ್, ಅರ್ಹ ಪಡಿತರ ಚೀಟಿ ಯೋಜನೆ, ಗ್ರಾಮೀಣ ಭಾಗದ ಕೆಟ್ಟ ರಸ್ತೆಗಳು, ಸರಕಾರಿ ಶಾಲೆಗಳ ಕಟ್ಟಡ ಸೋರಿಕೆ ಮತ್ತು ದುರಸ್ತಿ ಹಾಗೂ ತಾಲ್ಲೂಕಿನಲ್ಲಿ ಸಂಚರಿಸುವ ಸರಕಾರಿ ಬಸ್ಸುಗಳ ಸ್ಥಿತಿಗತಿ, ಅಕಾಲಿಕ ಮಳೆಯಿಂದ ಹಾನಿಯಾದ ಕೃಷಿ ತೋಟಗಾರಿಕೆ ಹಾಗೂ ಗ್ಯಾರೆಂಟಿ ಯೋಜನೆ ಸೇರಿದಂತೆ ಆಲಿಸಿ, ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಖಡಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಅಲ್ಲದೆ ರೈತರ ಆತ್ಮಹತ್ಯ, ಜಾನುವಾರುಗಳ ಮರಣ ಪ್ರಕರಣಗಳಿಗೆ ೧೫ ದಿನದಲ್ಲಿ ಪರಿಹಾರ ನೀಡಬೇಕು. ಆರು ತಿಂಗಳುಗಳ ಕಾಲ ಪರಿಹಾರ ನೀಡದಿದ್ದರೆ ಆ ಕುಟುಂಬದ ಪಾಡೇನಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.ತಾಲೂಕಿನಲ್ಲಿ ೭೧೮೭೬ ಮಹಿಳೆಯರು ಪ್ರತಿ ತಿಂಗಳು ರೂ ೨೦೦೦ ಹಣ ಪಡೆಯುತ್ತಿದ್ದು ಪ್ರತಿ ತಿಂಗಳು ಆ ಹಣ ಒಟ್ಟು ೧೪ ಕೋಟಿ ವಿತರಣೆಯಾಗುತ್ತಿದ್ದು ಈ…

Read More

ದೇವರಹಿಪ್ಪರಗಿ: ಕೋರವಾರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆಯಿಂದ ಸಾರ್ವಜನಿಕರು ಬೇಸತ್ತಿದ್ದು, ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಆದರೂ ನೀಡಿ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.ಸೋಮವಾರ ಕೋರವಾರ ಗ್ರಾಮದ ಹೆಸ್ಕಾಂ ಕಚೇರಿಗೆ ಆಗಮಿಸಿದ ನೂರಾರು ರೈತರು ಹೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಹಲವಾರು ದಿನಗಳಿಂದ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ಸಾಕಾಗಿ ಹೋಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಹಿಟ್ಟಿನ ಗಿರಣಿ ಸೇರಿದಂತೆ ಗುಡಿಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನಕ್ಕೆ ನೂರಾರು ಸಲ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಮನೆಯಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಹೋಗುತ್ತಿವೆ. ಇನ್ನು ಜಮೀನುಗಳಲ್ಲಿ ನೀರು ಹರಿಸಲು ಸಹ ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಮರಗುವಂತಾಗಿದೆ. ಹಲವಾರು ಬಾರಿ ಮನವಿ ಮಾಡಿದರೂ ಕೇವಲ ಹಾರಿಕೆ…

Read More

ಇಲ್ಲಿನ ಗಜಾನನ ಮಹಾಮಂಡಳಿಗೆ ಇಸ್ಲಾಂ ಧರ್ಮದ ಮಹಿಬೂಬ ಮಸಳಿ ಅಧ್ಯಕ್ಷರು! – ಗುರು ಹಿರೇಮಠ (ದೇವನಗಾಂವ)ಆಲಮೇಲ: ಪಟ್ಟಣದ ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ದತೆ ಭರ್ಜರಿಯಾಗಿ ನಡೆದಿದೆ.ಪುಣೆ ಮಾದರಿ, ಮೈಸೂರಿನ ದಸರಾ ಮಾದರಿಯಲ್ಲಿ ಭವ್ಯ ಮೆರವಣಿಗೆ, ಅಬ್ಬರದ ಡಿಜೆ ಸೌಂಡಗಳ ಸದ್ದು ಜೋರಾಗಲಿದೆ. ಕೋಲಾಟ ಝಾಂಜ್‌ಪತಾಕ ಹಲಗೆ ಮೇಳ, ಕೊಂಬು ವಾದನ ಹತ್ತಾರು ಜಾನಪದ ತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಲು ಅಣಿಯಾಗುತ್ತಿವೆ.ಇಲ್ಲಿಯ ಗಣೆಶ ವಿಸರ್ಜನೆ ಪ್ರಸಿದ್ದಿ ಪಡೆದಿದೆ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪದೇಶ, ರಾಜ್ಯದ ಕಲಬುರಗಿ ಬಾಗಲಕೋಟೆ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಮತ್ತು ಸುತ್ತ-ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಗಣೇಶೋತ್ಸವ ನೋಡಲು ಜನರು ಆಗಮಿಸುತ್ತಾರೆ. ಈಗಾಗಲೇ ಗಣೇಶ ವಿಸರ್ಜನೆಗೆ ಸಿದ್ದತೆಗಳು ನಡೆಯುತ್ತಿವೆ.ಇದೇ ಬುಧವಾರ ೫ನೇ ದಿನದ ಗಣಪತಿ ವಿಸರ್ಜನೆ ನಡೆಯುವುದರಿಂದ ಆಲಮೇಲದ ಅನೇಕ ಚೌಕ್ ದಿಂದ ಸ್ತಬ್ದ ಚಿತ್ರಗಳು ತಯಾರಿಯಾಗುತ್ತಿವೆ. ಸಂಜೆ ಹೊತ್ತಿಗೆ ಮೇರವಣಿಗೆ ಪ್ರಾರಂಭವಾಗಲಿದೆ.ಪಟ್ಟಣದ ೧೫ ಗಣೇಶ ಮಂಡಳಿಗಳಿಗೆ ಒಂದು ಗಜಾನನ ಮಹಾಮಂಡಳ ರಚನೆಯಾಗುತ್ತದೆ. ಈ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಟಿಪಿಜೆಪಿ ಪದಾಧಿಕಾರಿಗಳ ಧರಣಿ ಸತ್ಯಾಗ್ರಹ ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ ೯ನೇ ದಿನಕ್ಕೆ ಕಾಲಿಟ್ಟಿದೆ.ಈ ಸಂದರ್ಭದಲ್ಲಿ ಟಿಪಿಜೆಪಿ ಸಂಘಟನೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ ಮಾತನಾಡಿ, ಪಿಎಸಿಎಲ್, ಘರೀಮಾ, ಸಾಯಿ ಪ್ರಸಾದ, ಅಗ್ರಿ ಗೋಲ್ಡ್, ಸಮೃದ್ಧಿ ಜೀವನ, ೭ ಹಿಲ್ಸ್ , ಮೈತ್ರಿ, ಪ್ಯಾನ್ ಕಾರ್ಡ್ ಕ್ಲಬ್ಸ್ , ಹಿಂದೂಸ್ತಾನ ಇನ್ಪಾಟೆಕ್ಷರ್ ಲಿಮಿಟೆಡ್, ಪ್ಯೂಚರ್ ಮೇಕರ್ ಚಿಟ್ ಪಂಡ್ ಕಂಪನಿಗಳು ಸೇರಿದಂತೆ ಏಕಕಾಲದಲ್ಲಿ ೨೦೧೪ ರಲ್ಲಿ ಕೇಂದ್ರ ಸರ್ಕಾರ ಬಂದ್‌ಗೊಳಿಸಿದೆ. ಆದರೂ ಕಳೆದ ೧೦ ವರ್ಷ ಗತಿಸಿದರೂ, ಗ್ರಾಹಕರಿಗೆ ಹಣ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸಾಕಷ್ಟು ಕಂಪನಿಗಳ ಮಾಲಿಕರು ಸಾಕಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಮಾಲಿಕರ ಆಸ್ತಿಗಳನ್ನು ಮುಟ್ಟುಗೋಲನ್ನು ಹಾಕಿಕೊಂಡು ಗ್ರಾಹಕರಿಗೆ ಹಣ ಮರಳಿಸಿ ನ್ಯಾಯ ಒದಗಿಸಿಕೊಡಬೇಕು. ಕೇಂದ್ರ ಸರ್ಕಾರ ಬಡ್ಸ್ ಆ್ಯಕ್ಟ್…

Read More