ವಿವಿಧ ಬೇಡಿಕೆಗಳ ಈಡೇರಿಕೆಗೆ ಟಿಪಿಜೆಪಿ ಪದಾಧಿಕಾರಿಗಳ ಧರಣಿ ಸತ್ಯಾಗ್ರಹ
ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ ೯ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಟಿಪಿಜೆಪಿ ಸಂಘಟನೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ ಮಾತನಾಡಿ, ಪಿಎಸಿಎಲ್, ಘರೀಮಾ, ಸಾಯಿ ಪ್ರಸಾದ, ಅಗ್ರಿ ಗೋಲ್ಡ್, ಸಮೃದ್ಧಿ ಜೀವನ, ೭ ಹಿಲ್ಸ್ , ಮೈತ್ರಿ, ಪ್ಯಾನ್ ಕಾರ್ಡ್ ಕ್ಲಬ್ಸ್ , ಹಿಂದೂಸ್ತಾನ ಇನ್ಪಾಟೆಕ್ಷರ್ ಲಿಮಿಟೆಡ್, ಪ್ಯೂಚರ್ ಮೇಕರ್ ಚಿಟ್ ಪಂಡ್ ಕಂಪನಿಗಳು ಸೇರಿದಂತೆ ಏಕಕಾಲದಲ್ಲಿ ೨೦೧೪ ರಲ್ಲಿ ಕೇಂದ್ರ ಸರ್ಕಾರ ಬಂದ್‌ಗೊಳಿಸಿದೆ. ಆದರೂ ಕಳೆದ ೧೦ ವರ್ಷ ಗತಿಸಿದರೂ, ಗ್ರಾಹಕರಿಗೆ ಹಣ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸಾಕಷ್ಟು ಕಂಪನಿಗಳ ಮಾಲಿಕರು ಸಾಕಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಮಾಲಿಕರ ಆಸ್ತಿಗಳನ್ನು ಮುಟ್ಟುಗೋಲನ್ನು ಹಾಕಿಕೊಂಡು ಗ್ರಾಹಕರಿಗೆ ಹಣ ಮರಳಿಸಿ ನ್ಯಾಯ ಒದಗಿಸಿಕೊಡಬೇಕು. ಕೇಂದ್ರ ಸರ್ಕಾರ ಬಡ್ಸ್ ಆ್ಯಕ್ಟ್ ೨೦೧೯ ರ ಪ್ರಕಾರ ಗ್ರಾಹಕರಿಗೆ ೧೮೦ ದಿನಗಳಲ್ಲಿ ಗ್ರಾಹಕರಿಗೆ ಪಾವತಿಸಬೇಕು ಎನ್ನುವ ನಿಯಮಿದ್ದರೂ ನಿಯಮವನ್ನುಗಾಳಿಗೆ ತೂರಿದ್ದಾರೆ. ಬಡ್ಸ್ ಆ್ಯಕ್ಟ್ ಸರ್ಕಾರ ಕೂಡಲೇ ಕಟ್ಟು ನಿಟ್ಟಾಗಿ ಜಾರಿಗೆ ಗೊಳಿಸಬೇಕು. ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ನಮಗೆ ನ್ಯಾಯ ಸಿಗುವವರೆಗೂ ಈ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಿರಂತರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಶರಣ ಬಿ. ಸಿನ್ನೂರ ಮಾತನಾಡಿ, ಉಪಾಧ್ಯಕ್ಷರಾದ ಸಿದ್ದಣ್ಣ ಹಡಲಗೇರಿ, ಕಾರ್ಯದರ್ಶಿ ರಾಜಶೇಖರ ಕೆ.ದೊಡಮನಿ, ತಾಲೂಕಾ ಮುಖಂಡರಾದ ಲಕ್ಷ್ಮೀ ಪಾಟೀಲ, ಲಾಲಸಾಬ ವಾಲಿಕಾರ, ಆರ್.ಪಿ.ಮಹೀಂದ್ರಕರ, ಎಲ್.ಬಿ.ಚವ್ಹಾಣ, ಬಾಬು ಪಟೇಲ ಬಿರಾದಾರ, ಆರ್.ಬಿ. ನಧಾಪ, ಗೌಡಪ್ಪಗೌಡ ಕಂಠಿ, ಮಂಜುಕುಮಾರ ಕಾಂಬಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

