ದೇವರಹಿಪ್ಪರಗಿ: ಎತ್ತಿನಗಾಡಿ (ಚಕ್ಕಡಿ)ಗೆ ಕಟ್ಟಿದ್ದ ಎತ್ತುಗಳು ಬೆದರಿ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಪಡಗಾನೂರ ಗ್ರಾಮದಲ್ಲಿ ಜರುಗಿದೆ.
ತಾಲ್ಲೂಕಿನ ಪಡಗಾನೂರ ಗ್ರಾಮದ ಯಮನಪ್ಪ ವಡ್ಡೋಡಗಿ ಎಂಬುವವರಿಗೆ ಸೇರಿದ ಅಂದಾಜು ೧.೫೦ ಲಕ್ಷ.ರೂ ಮೌಲ್ಯದ ಎರಡು ಎತ್ತುಗಳನ್ನು ಎತ್ತಿನಗಾಡಿಗೆ ಕಟ್ಟಿ ಅವುಗಳಿಗೆ ಮೇವು ತರಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ಬೆದರಿದ ಎತ್ತುಗಳು ಕಟ್ಟಿದ್ದ ಗಾಡಿಯ ಸಮೇತ ಸಮೀಪದ ಭಾವಿಗೆ ಬಿದ್ದಿವೆ.
ಬಹುತೇಕ ತುಂಬಿದ್ದ ಭಾವಿಯಲ್ಲಿ ಎತ್ತುಗಳು ಈಜಬಹುದಾಗಿದ್ದರೂ ಗಾಡಿಗೆ ಕಟ್ಟಿದ್ದ ಕಾರಣ ಈಜಲಾಗದೇ ಅಸುನೀಗಿವೆ.
ಘಟನಾ ಸ್ಥಳಕ್ಕೆ ಪಶು ವೈದ್ಯಕೀಯ ಆಸ್ಪತ್ರೆಯ ತಾಲ್ಲೂಕು ಸಹಾಯಕ ನಿರ್ದೇಶಕ ಭೀಮಾಶಂಕರ ಕನ್ನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

