Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಶ್ರೀ ಶಿವಾಜಿ ಮಹಾರಾಜ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಜಾನನ ಮಹಾಮಂಡಳದ ಗಣೇಶ ಉತ್ಸವ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಯು ರವಿವಾರ ವೈಭವದಿಂದ ನಡೆಯಿತು.ಈ ಬಾರಿ ಸರಳ ರೀತಿಯ ಮೆರವಣಿಗೆ ನಡೆಸಲಾಗಿತ್ತಾದರೂ ಅನೇಕ ರೀತಿಯ ಕಲಾ ತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದ್ದವು. ಗಜಾನನ ಮಹಾಮಂಡಳ ವತಿಯಿಂದ ಬೃಹತ್ ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು, ಸಾಂಕೇತಿಕವಾಗಿ ಮಣ್ಣಿನ ಗಣೇಶನ ಉತ್ಸವ ಮೂರ್ತಿಯನ್ನು ಶ್ರದ್ಧಾ-ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.ವಿಜಯಪುರದ ಶ್ರೀ ಶಿವಾಜಿ ವೃತ್ತದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ ಮಹಾಮಂಟಪದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತು.ವಿವಿಧ ಪುಷ್ಪಗಳಿಂದ ಸಾಲಂಕೃತ ರಥದಲ್ಲಿ ಗಣೇಶನ ಉತ್ಸವ ಮೂರ್ತಿಯನ್ನು ಇರಿಸಲಾಗಿತ್ತು. ಕಹಳೆ, ಕರಡಿ ಮಜಲು, ನವಿಲು ಕುಣಿತ, ಡೊಳ್ಳು ಹೀಗೆ ನಾನಾ ವೈದ್ಯ ವೈಭವಗಳ ಸದ್ದು ಮುಗಿಲು ಮುಟ್ಟಿತ್ತು. ಯುವಕರು ಭಕ್ತಿಯ ಹರ್ಷೋದ್ಘಾರದ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು.ಶ್ರೀ ಶಿವಾಜಿ ಮಹಾರಾಜರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ತಾಜ್ ಬಾವಡಿ ತಲುಪಿತು. ಅಲ್ಲಿ…

Read More

ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 18ನೇ ವಾರ್ಷಿಕ ಸಾಮಾನ್ಯ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಡಳಿತ ಮಂಡಳಿ, ಗ್ರಾಹಕರ ಸಹಕಾರ, ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ 2023-24ನೇ ಸಾಲಿನಲ್ಲಿ ರೂ.18.81 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ 18 ಪರ್ಸೆಂಟೆಜ್ ಡಿವಿಡೆಂಡ್ ನೀಡಲಾಗುವುದೆಂದು ಘೋಷಿಸಿದರು.2024-25ನೇ ಸಾಲಿಗೆ ನಮ್ಮ ಸೌಹಾರ್ದ ರೂ.5,000 ಕೋಟಿ ಬಂಡವಾಳದ ಗುರಿ ಹೊಂದಲಾಗಿದ್ದು, ಪ್ರಸ್ತುತ 49 ಕೋಟಿ ಶೇರು ಬಂಡವಾಳ, 3,453 ಕೋಟಿ ದುಡಿಯುವ ಬಂಡವಾಳ, 3,248 ಕೋಟಿ ಠೇವಣಿಗಳು, 2,051 ಕೋಟಿ ಸಾಲ ಮುಂಗಡ, 57 ಕೋಟಿ ಕಾಯ್ದಿಟ್ಟ ನಿಧಿ, 42 ಕೋಟಿ ನಿಶ್ಚಿತ ಆಸ್ತಿಗಳು, ರೂ.432…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚೇತನ ಫೌಂಡೇಶನ್ ಹಾಗೂ ಕರ್ನಾಟಕ ಸೋಷಿಯಲ್ ಕ್ಲಬ್, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಸಂಭಾಗಣದಲ್ಲಿ ಜರುಗಿದ “ಸಾಧಕರ ಸಮಾಗಮ” ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ಡಾ. ಸಿದ್ದು ಸಾವಳಸಂಗ ಇವರಿಗೆ, ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ 2024 ನೇ ಸಾಲಿನ “ಡಾ. ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ” ಯನ್ನು ಪ್ರದಾನ ಮಾಡಿ ಗೌರವಿಸಲಾಯಿತುಕಾರ್ಯಕ್ರಮದಲ್ಲಿ ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಕಾರ್ಯಕ್ರಮದ ಅಧ್ಯಕ್ಷ ಸುರೇಶ ಕೋರಕಪ್ಪ, ಉದ್ಘಾಟಕ ಶ್ರೀಕಾಂತ ಚಿಮಲ್, ಮುಖ್ಯ ಅತಿಥಿ ಡಾ. ಮಹೇಶ ರುದ್ರಕರ ಹಾಗೂ ಹಲವಾರು ಶಿಕ್ಷಕರು ಹಾಜರಿದ್ದರು.

Read More

ಪತ್ರಕರ್ತರಿಗೆ ಸಮರ್ಪಿಸಿದ ಕಾರ್ಯಕ್ರಮ | ಸಸಿಗಳನ್ನು ನೆಡುವಿಕೆ | ಮಾನವ ಸರಪಳಿ ನಿರ್ಮಾಣ ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದು ಭಾರತ. ಈ ಸದ್ಯ ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಭಾರತ ದೇಶವಾಗಿದೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ತಾಲ್ಲೂಕಿನ ಜೇವೂರ ಗ್ರಾಮದ ಅರಣ್ಯ ಇಲಾಖೆಯ ವನ್ಯಧಾಮದಲ್ಲಿ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಅದಲ್ಲದೆ ‌ಇಡೀ ಕಾರ್ಯಕ್ರಮವನ್ನು ಪತ್ರಕರ್ತರಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು.ಈ ವೇಳೆ ಪತ್ರಕರ್ತರಾದ ಉಮೇಶ್ ಕೊಳೆಕರ, ಶಂಕರ್ ಜಮಾದಾರ ಮಾತನಾಡಿ, ಪ್ರಜ್ಞಾವಂತ ಜನರು ಅನ್ಯಾಯದ ವಿರುದ್ಧ ಮೌನ ತಾಳಬಾರದು. ಪ್ರಶ್ನೆ ಮಾಡುವ ಶಿಕ್ಷಣ ಶಕ್ತಿ ಹೊಂದಬೇಕು.ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿ, ಅವರ ತಿಳಿವನ್ನು ಹರಳುಗಟ್ಟಿಸಿ ಪ್ರಜಾಪ್ರಭುತ್ವಕ್ಕೆ ಒಂದು…

Read More

ತನಿಷ್ಕಾ ಆಭರಣ ಮಳಿಗೆಯಿಂದ ಆದರ್ಶ ಶಿಕ್ಷಕರಿಗೆ ಸನ್ಮಾನ | ಡಿಡಿಪಿಐ ನಾಗೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಬ್ಬ ಶಿಕ್ಷಕ ದೇಶದ ರಾಷ್ಟ್ರಪತಿ ಆಗಬಹುದು ಎಂಬುದನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಪಾತ್ರ ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಡಿಪಿಐ ಎಂ.ಎಚ್.ನಾಗೂರ ಹೇಳಿದರು.ರವಿವಾರದಂದು ಟಾಟಾ ಸಮೂಹ ಸಂಸ್ಥೆಯ ಸಂತೋಷ ಸಮೂಹ ಸಂಸ್ಥೆ ಹಾಗೂ ತನಿಸ್ಕಾ ಆಭರಣ ಮಳಿಗೆಯ ವತಿಯಿಂದ ಹಮ್ಮಿಕೊಂಡಿದ್ದ “ಆದರ್ಶ ಶಿಕ್ಷಕರು”ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಣ ಕೇವಲ ವ್ಯಕ್ತಿಯನ್ನು ಪರಿವರ್ತನೆ ಮಾಡುವುದು ಮಾತ್ರವಲ್ಲದೇ, ರಾಷ್ಟ್ರ ನಿರ್ಮಾಣದಲ್ಲಿಯೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಗುರುವಿನ ಬಗ್ಗೆ ಹೆಚ್ಚಿನ ಗೌರವವಿದೆ. ಗುರುವಿನ ಬೋಧನೆ, ಮೌಲ್ಯಗಳು, ಸಂಸ್ಕಾರ ಹಾಗೂ ಜೀವನ ಪದ್ಧತಿ ಅನೇಕ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳು ಮತ್ತು ಸಮಾಜ ಶಿಕ್ಷಕರಿಗೆ ಗುರುವಿನ ಸ್ಥಾನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆ ೨೦೨೧-೨೨ನೇ ಸಾಲಿನ ಅಡಿ ಪೂರ್ಣಗೊಂಡ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂಸದರಾದ ರಮೇಶ್ ಜಿಗಜಿಣಗಿ ಅವರು ಭಾಗವಹಿಸಿ ಫಲಾನುಭವಿಯಾದ ಗಂಗಾ ಚನ್ನಪ್ಪ ಬಗಲಿ ಯವರಿಗೆ “ಕೀ ” ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಎ.ಬಿ.ಅಲ್ಲಾಪುರ ಟಿಎನ್‌ಓಗಳಾದ ಪಿ. ಡಿ. ಗುಡದಿನ್ನಿ,ಕಲ್ಯಾಣಶೆಟ್ಟಿ, ಪಿಡಿಓ ರಾಜಶೇಖರ್ ಬಿರಾದಾರ್, ಹಿಟ್ನಳ್ಳಿ ಭಾಗವಹಿಸಿದ್ದರು.

Read More

ಪ್ರಜಾಪ್ರಭುತ್ವ ದಿನ | ಬೃಹತ್ ಮಾನವ ಸರಪಳಿ ರಚನೆ | ಡಿಸಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ರಾಯಚೂರು ಗಡಿಯಿಂದ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಆಲಮಟ್ಟಿಯವರೆಗಿನ ಸುಮಾರು ೬೨ ಕಿ.ಮೀ.ವರೆಗೆ ಮಾನವ ಸರಪಳಿ ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರನಿಂದ ಚಾಮರಾಜನಗರವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು ೨೫ ಲಕ್ಷ ಮಂದಿ ಕೈ ಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ರಚನೆ ಹಿನ್ನಲೆಯಲ್ಲಿ ಇಂದು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮಲ್ಲಿ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ವಿವಿಧೆತೆಯಲ್ಲಿ ಏಕತೆ ತೋರುವ ಹೆಮ್ಮೆಯ ರಾಷ್ಟ್ರ. ಭಾರತವು ಅತ್ಯಂತ ಯಶಸ್ವಿನ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶವಾಗಿದೆ. ಸಂವಿಧಾನ ಪ್ರತಿಯೊಬ್ಬರಿಗೆ ಸಮಾನ ಅವಕಾಶ ನೀಡಿದ್ದು, ಸಂವಿಧಾನದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾನವ ಸರಪಳಿಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಮಾನವ ಸರಪಳಿ ಕಾರ್ಯಕ್ರಮಕ್ಕಾಗಿ ನೂಡಲ್, ಸೆಕ್ಟರ್ ಹಾಗೂ ರೂಟ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ನೇಮಿತ ಅಧಿಕಾರಿಗಳು ತಮ್ಮ ಬಾಗಗಳಲ್ಲಿ ಮಾನವ ಸರಪಳಿ ನಿರ್ಮಿಸುವಲ್ಲಿ ಶ್ರಮಿಸಿದ್ದರು. ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ತಮ್ಮ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗಿದ್ದರು. ಪೊಲೀಸರು ಬಿಗಿ ಬಂದೋಬಸ್ತ ವಹಿಸಿದ್ದರು. ಮಾನವ ಸರಪಳಿ ನಿರ್ಮಿಸಲು ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು. ಪಟ್ಟಣದಲ್ಲಿ ಕೆಲ ಶಾಲೆಗಳ ವಿದ್ಯಾರ್ಥಿಗಳು ೭:೩೦ ಕ್ಕೆ ಆಗಮಿಸಿದ್ದರು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಉಪಹಾರ ವ್ಯವಸ್ಥೆ ಇಲ್ಲದೇ ಗೋಳಾಡಿದ ಪ್ರಸಂಗಗಳು ಕಂಡು ಬಂದವು. ಅಲ್ಲಲ್ಲಿ ವಿದ್ಯಾರ್ಥಿಗಳು ತಲೆತಿರುಗಿ ಬಿದ್ದರೆ ಆಸ್ಪತ್ರಗೆ ಹೊತ್ತೊಯ್ಯಲು ವಾಹನಗಳಿಲ್ಲದೇ ಪರದಾಡಿದರು. ಶಾಲಾ ಶಿಕ್ಷಕರು ಬೈಕ್ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು. ಇಲ್ಲಿನ ಅಧಿಕಾರಿಗಳು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ವಿದ್ಯಾರ್ಥಿಗಳಿಗೆ ತೊಂದರೆಯುಂಟು ಮಾಡಿದ್ದು ಮುಂದೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಗೇಟ್ ಬಳಿ ನಿರ್ಮಿಸಲಾದ ರೋಡ್ ಬ್ರೇಕರ್‌ಗಳು ಅವೈಜ್ಞಾನಿಕವಾಗಿವೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ನಂದಿಕೇಶ್ವಮಠ ಮನವಿ ಮಾಕೊಂಡಿದ್ದಾರೆ.ಈ ಕುರಿತು ’ಉದಯರಶ್ಮಿ’ ಯೊಂದಿಗೆ ಮಾತನಾಡಿದ ಅವರು ಈ ಪ್ರದೇಶ ಅಪಘಾತ ವಲಯವಾಗಿದ್ದು ರೋಡ್ ಬ್ರೇಕರ್ ಅಳವಡಿಸಲು ಹಲವು ಬಾರಿ ಹೋರಾಟ ಮಾಡಿದ್ದೇವೆ. ಸಧ್ಯಕ್ಕೇನೋ ರೋಡ್‌ಬ್ರೇಕರ್ ಅಳವಡಿಸಲಾಗಿದೆ ಆದರೆ ಈ ಬ್ರೇಕರ್ ಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇವುಗಳ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬ್ರೇಕರ್‌ಗಳು ಪಾದಾಚಾರಿಗಳು ರಸ್ತೆ ದಾಟಲು ಅನುಕೂಲವಾಗಿಲ್ಲ. ಬದಲಾಗಿ ಇನ್ನಷ್ಟು ಸಮಸ್ಯೆ ತಂದೊಡ್ಡಿವೆ. ಕಾರಣ ಕೂಡಲೇ ಈ ಬ್ರೇಕರ್‌ಗಳನ್ನು ತೆರವುಗೊಳಿಸಿ ಇನ್ನಷ್ಟು ಮುಂಭಾಗದಲ್ಲಿ ಹಾಕಬೇಕು. ಇಲ್ಲವೇ ರಸ್ತೆಯ ಎರಡೂ ಬದಿಗಳಲ್ಲಿ ಹೊಸ ಬ್ರೇಕರ್‌ಗಳನ್ನು ಅಳವಡಿಸಿ ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಹೋರಾಟಗಾರರಾದ ನಾಗೇಂದ್ರ ಶಿವಶಿಂಪಿ ಮತ್ತು ರಫೀಕ ಬೀಳಗಿ ಮಾತನಾಡಿ ಈ ಬ್ರೇಕರ್‌ಗಳನ್ನು ಅಳವಡಿಸುವಾಗ ಅಧಿಕಾರಿಗಳು ಯಾವುದೇ ಮುಂದಾಲೋಚನೆ ಮಾಡದ ಕಾರಣ ಈ ಬ್ರೇಕರ್‌ಗಳು ಉಪಯೋಗಕ್ಕೆ ಬಾರದಂತಾಗಿವೆ. ಪಾದಾಚಾರಿಗಳು ರಸ್ತೆ ದಾಟಬೇಕಾದರೆ…

Read More

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17.. ಲೇಖಕರು- ವಿವೇಕಾನಂದ. ಎಚ್ .ಕೆ, ಬೆಂಗಳೂರು ಉದಯರಶ್ಮಿ ದಿನಪತ್ರಿಕೆ ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ..ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ..ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು….1) ಮಲೆನಾಡು ಕರ್ನಾಟಕ2) ಮೈಸೂರು ಕರ್ನಾಟಕ3) ಕರಾವಳಿ ಕರ್ನಾಟಕ4) ಕಿತ್ತೂರು (ಮುಂಬಯಿ) ಕರ್ನಾಟಕ5) ಕಲ್ಯಾಣ (ಹೈದರಾಬಾದ್) ಕರ್ನಾಟಕ.ಗಾಳಿ ನೀರು ಆಹಾರ ಶಿಕ್ಷಣ ಆರೋಗ್ಯ ಸಾರಿಗೆ ಸಂಪರ್ಕ ರಸ್ತೆ ಮನೆ ಪ್ರಾಕೃತಿಕ ವಾತಾವರಣ ತಲಾ ಆದಾಯ ಕೈಗಾರಿಕೆ ಹೀಗೆ ಕೆಲವು ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಭೌತಿಕವಾಗಿ ಇಡೀ ಕರ್ನಾಟಕವನ್ನು ಪಾದಯಾತ್ರೆ ಮೂಲಕ ಸಂಚರಿಸಿದ ಅನುಭವದ ಆಧಾರದ ಹೇಳುವುದಾದರೆ ಮೇಲೆ ಹೇಳಿರುವ…

Read More