ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆ ೨೦೨೧-೨೨ನೇ ಸಾಲಿನ ಅಡಿ ಪೂರ್ಣಗೊಂಡ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂಸದರಾದ ರಮೇಶ್ ಜಿಗಜಿಣಗಿ ಅವರು ಭಾಗವಹಿಸಿ ಫಲಾನುಭವಿಯಾದ ಗಂಗಾ ಚನ್ನಪ್ಪ ಬಗಲಿ ಯವರಿಗೆ “ಕೀ ” ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಎ.ಬಿ.ಅಲ್ಲಾಪುರ ಟಿಎನ್‌ಓಗಳಾದ ಪಿ. ಡಿ. ಗುಡದಿನ್ನಿ,ಕಲ್ಯಾಣಶೆಟ್ಟಿ, ಪಿಡಿಓ ರಾಜಶೇಖರ್ ಬಿರಾದಾರ್, ಹಿಟ್ನಳ್ಳಿ ಭಾಗವಹಿಸಿದ್ದರು.

