ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚೇತನ ಫೌಂಡೇಶನ್ ಹಾಗೂ ಕರ್ನಾಟಕ ಸೋಷಿಯಲ್ ಕ್ಲಬ್, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಸಂಭಾಗಣದಲ್ಲಿ ಜರುಗಿದ “ಸಾಧಕರ ಸಮಾಗಮ” ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ಡಾ. ಸಿದ್ದು ಸಾವಳಸಂಗ ಇವರಿಗೆ, ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ 2024 ನೇ ಸಾಲಿನ “ಡಾ. ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ” ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಕಾರ್ಯಕ್ರಮದ ಅಧ್ಯಕ್ಷ ಸುರೇಶ ಕೋರಕಪ್ಪ, ಉದ್ಘಾಟಕ ಶ್ರೀಕಾಂತ ಚಿಮಲ್, ಮುಖ್ಯ ಅತಿಥಿ ಡಾ. ಮಹೇಶ ರುದ್ರಕರ ಹಾಗೂ ಹಲವಾರು ಶಿಕ್ಷಕರು ಹಾಜರಿದ್ದರು.

