Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳೆಯರಿಗಾಗಿ ಆಯಾ ತಾಲ್ಲೂಕಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಏರ್ಪಡಿಸಲಾಗಿದೆ.ಆಸಕ್ತವುಳ್ಳ ಕ್ರೀಡಾಪಟುಗಳು ತಮ್ಮ ತಾಲೂಕುಗಳಲ್ಲಿ ನಡೆಸುವ ತಾಲೂಕ ಮಟ್ಟದ ಅಥ್ಲೆಟಿಕ್, ವಾಲಿಬಾಲ್, ಪುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗ ಕ್ರೀಡಾಪಟುಗಳು ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದಾಗಿದೆ.ತಾಲ್ಲೂಕ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಧಾರ ಕಾರ್ಡನ್ನು ಕಡ್ಡಾಯವಾಗಿ ತರುವುದು. ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಕ್ರೀಡಾಪಟುಗಳು ಮಾತ್ರ ಅರ್ಹರಿರುತ್ತಾರೆ ಹಾಗೂ ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆರಕ್ಷಣಾಪಡೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಿರುವುದಿಲ್ಲ.ಸೆ.೨೦ರಂದು ಸಿಂದಗಿಯ ತಾಲೂಕು ಕ್ರೀಡಾಂಗಣ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ದೇವರ ಹಿಪ್ಪರಗಿ ತಾಲೂಕಿನ ಜಗದಂಬ ಪ್ರೌಢ ಶಾಲೆ ಹಿಟ್ಟಿನಹಳ್ಳಿ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ಆಲಮೇಲ ತಾಲೂಕಿನ ಮಲಘಾಣದ ಸರಕಾರಿ ಪ್ರೌಢ ಶಾಲೆ, ಎನ್…
ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ೨೪,೦೦೦ ರೂ. ಸ್ಕಾಲರ್ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿದ್ದು, ಈ ವ್ಯಾಟ್ಸಾಫ್ ಸಂದೇಶ ಜನರನ್ನು ಗೊಂದಲಕ್ಕೀಡು ಮಾಡಿದ್ದು, ಈ ತಪ್ಪು ಸಂದೇಶ ನೋಡಿದ ಜನರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಕ್ಕಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸೇರಿ ಎಲ್ಲಾ ಕಡೆ ಜನ ಅಲೆದಾಡುತ್ತಿದ್ದಾರೆ. ಮಕ್ಕಳ ರಕ್ಷಣಾ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನ ಬಂದು ವಿಚಾರಿಸುತ್ತಿರುವುದು ಮತ್ತು ಅನೇಕರು ಫೋನ್ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕರು ಇಂತಹ ಸಂದೇಶಗಳಿಗೆ ಮೋಸ ಹೋಗಬಾರದು.ಪ್ರಾಯೋಜಕತ್ವ ಯೋಜನೆ : ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಯುವಂತೆ ಬೆಂಬಲ ನೀಡುವುದು ಪ್ರಾಯೋಜಕತ್ವ ಯೋಜನೆ ಮುಖ್ಯ…
ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಶ್ರೀ ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಪ್ರೌಢ ಶಾಲಾ ವಿಧ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಬೋಧಕರಿಗೆ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯು ಸೆ.20 ರಂದು ಶುಕ್ರವಾರ ಶಾಂತವೀರ ಪ್ರೌಢ ಶಾಲೆ ಬಬಲೇಶ್ವರದಲ್ಲಿ ಜರುಗುವದು ಎಂದು ಉಮಾದೇವಿ ಸೊನ್ನದ ಉಪನಿರ್ದೇಶಕರು(ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಅವರು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಎಲ್‌ಡಿಇ ಬಾಲಕೀಯರ ಪ್ರೌಢಶಾಲೆ ವಿಜಯಪುರ ಇವರ ಸಹಯೋಗದಲ್ಲಿ ನಡೆದ ತಾಲೂಕಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಿಡಿಜೆ ಪ್ರೌಢಶಾಲೆ “ಬ” ವಿಜಯಪುರ ವಿದ್ಯಾರ್ಥಿಗಳಾದ ಕು. ಅಪೂರ್ವ ಬಿರಾದಾರ, ಪಲ್ಲವಿ ಶಿವಪೂರ ಪ್ರಥಮ/ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದೈಹಿಕ ಶಿಕ್ಷಕ ಎ.ಎಂ. ಮಾಂಗ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಬಿಡಿಈ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಆರ್.ಪಿ. ಚಿಕ್ಕಲಕಿ, ಮುಖ್ಯಾಧ್ಯಾಪಕಿಯರಾದ ಕೆ.ಎಂ. ಸೀತಿಮನಿ, ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.
ಘಟನೆಗೆ ಗ್ರಾಮದ ಮಹಿಳೆಯರ ಖಂಡನೆ | ದೌರ್ಜನ್ಯಕ್ಕೀಡಾದ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ (ದೇವರಹಿಪ್ಪರಗಿ): ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿ ಕಳೆದ ಎರಡು ವರ್ಷಗಳಿಂದ ಪಂಚಾಯಿತಿ ಎಲ್ಲ ವ್ಯವಹಾರಗಳಲ್ಲಿ ದಬ್ಬಾಳಿಕೆ ಮಾಡುವುದರ ಜೊತೆಗೆ ಪಂಚಾಯಿತಿ ಮಹಿಳಾ ಸಿಬ್ಬಂದಿಯನ್ನು ಗ್ರಾಮಸ್ಥರ ಮುಂದೆ ಚಪ್ಪಲಿಯಿಂದ ಹೊಡೆದು ಗಾಯಗೊಳಿಸುವುದರ ಮೂಲಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ.ತಾಲ್ಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ಜರುಗಿದ್ದು ಘಟನೆಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿಯ ಹಸ್ತಕ್ಷೇಪವೇ ಪ್ರಮುಖ ಕಾರಣವೆಂದು ತಿಳಿದುಬಂದಿದೆ.ಗ್ರಾಮದ ಪಂಚಾಯಿತಿ ಚುನಾವಣೆಯ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳೆರಡರಲ್ಲಿ ಮಹಿಳೆಯರೇ ಇದ್ದು, ಆದರೆ ಕಾರ್ಯಭಾರವೆಲ್ಲಾ ಅವರ ಪತಿಯಂದಿರದೇ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಪಂಚಾಯಿತಿ ಅಡಿಟ್ ಕಾರ್ಯಗಳಿಗಾಗಿ ಮಹಿಳಾ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಬಂದಿದ್ದು ಕೆಲವು ವಿಚಾರಗಳ ಮಾಹಿತಿಗಾಗಿ ಸ್ಥಳೀಯ ಮಹಿಳಾ ಸಿಬ್ಬಂದಿಯೊಂದಿಗೆ ಚರ್ಚಿಸಲು ಆರಂಭಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪಾಧ್ಯಕ್ಷೆಯ ಪತಿ ಸಂದಿಮನಿ ಆಡಿಟ್ ಹಾಗೂ ಪಿಡಿಓ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ವಿಶ್ವಕರ್ಮರ ಜಯಂತ್ಯೋತ್ಸವವನ್ನು ಸರಳ ಹಾಗು ಸುಂದರವಾಗಿ ಆಚರಿಸಲಾಯಿತು.ಈ ವೇಳೆ ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರಾದ ಕಿರಣ ಕಡಿ, ಶಿವಶಂಕರಯ್ಯ ಹಿರೇಮಠ, ಲೋಹಿತ ಜೈನಾಪೂರ, ಆರ್.ಜೆ.ಸಾಗರ, ಎಸ್.ಎಸ್.ಹಂಜಗಿ, ಮಂಜುನಾಥ ಪಡದಾಳಿ, ವರ್ಷಾ ಹುನಗುಂದ, ಗುರುಬಾಯಿ ತಂಗಡಗಿ, ಶಾಹಿನ ನಾಲತವಾಡ, ಅನ್ನಪೂರ್ಣ ಹೊಸಮನಿ, ಮೀನಾಕ್ಷಿ ಗಣಾಚಾರಿ, ಸುವರ್ಣ ಗಂಜಿಹಾಳ, ರಾಧಾ ಕೋಲಕಾರ, ನೇತ್ರಾ ವಡವಡಗಿ, ಭಾಗ್ಯ ಸಿದ್ದಾಪೂರ ಸೇರಿದಂತೆ ಇತರರು ಹಾಜರಿದ್ದರು
ಛಾಯಾಗ್ರಾಹಕರ ನೋಂದಣಿ ಮತ್ತು ಮಾಹಿತಿ ಶಿಬಿರದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ನೂತನವಾಗಿ ಅಸಂಘಟಿತ ಕಾರ್ಮಿಕರಾಗಿ ಸೇರ್ಪಡೆಗೊಂಡ ಛಾಯಾಗ್ರಾಹಕರಿಗೆ ಮಂಗಳವಾರ ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನೋಂದಣಿ ಮತ್ತು ಮಾಹಿತಿ ಶಿಬಿರ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ನೂತನವಾಗಿ ೧೮ ಅಸಂಘಟಿತ ಕಾರ್ಮಿಕರ ಜೊತೆಯಲ್ಲಿ ಛಾಯಾಗ್ರಾಹಕರನ್ನು ಸೇರ್ಪಡೆ ಮಾಡಲಾಗಿದೆ. ಕಾರಣ ಛಾಯಾಗ್ರಾಹಕರು ಈ ಯೋಜನೆಯ ಪ್ರಯೋಜನ ಪಡೆಯಲು ಎಲ್ಲರೂ ಕಡ್ಡಾಯವಾಗಿ ನೋದಣಿ ಮಾಡಬೇಕು ಬಹುಮುಖ್ಯವಾಗಿ ಈ ನೋಂದಣಿ ಕಾರ್ಯ ಯಶಸ್ವಿಯಾಗಲು ಎಲ್ಲರು ಸಂಘಟಿತರಾಗಲು ಜಿಲ್ಲಾ ಛಾಯಾಗ್ರಾಕರ ಸಂಘದ ಸದಸ್ಯರಾಗಬೇಕು. ಕರ್ನಾಟಕ ಛಾಯಾಗ್ರಹಕ ಸಂಘದ ಅಧ್ಯಕ್ಷರು ಮತು ಎಲ್ಲ ಜಿಲ್ಲಾ ಸಂಘದ ಮನವಿಯ ಹಿನ್ನಲೆಯಲ್ಲಿ ಮಾನ್ಯ ಕಾರ್ಮಿಕ ಸಚಿವ ಸಂತೋಷ ಲಾಡ ಅವರು ಆಸಕ್ತಿಯಿಂದ ಛಾಯಾಗ್ರಾಹಕರನ್ನು ಕಾರ್ಮಿಕರ ಇಲಾಖೆಯಲ್ಲಿ ಸೇರ್ಪಡೆಮಾಡಿದ್ದಾರೆ. ಸಂಘ ಮತ್ತು…
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) ಲೇಖಕರು- ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ. ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ. ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ ರೇಜಿಗೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಯಿಂದ ದೂರ ಇರುವವರು, ಬೇರೆ ಊರಿನಲ್ಲಿ ಕೆಲಸ ನಿರ್ವಹಿಸುವವರು ಪುಟ್ಟ ಬೀಜದ ಮೊಳಕೆಯಂತೆ ಹೊಸ ಆಸೆಯನ್ನು ಹೊತ್ತು ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಇಲ್ಲವೇ ವಾರಾಂತ್ಯಕ್ಕ್ಲೆ ಬಂದು ಮನೆಯವರೊಂದಿಗೆ ಕಾಲ ಕಳೆಯುವ ವಾಡಿಕೆ ಹಲವರದು. ಇದಕ್ಕೆ ಸಂತೋಷದಿಂದ ಕೈ ಜೋಡಿಸುವ ಜೋಡಿಗಳು ಜೊತೆ ಜೊತೆಯಲಿ ಕಾಲ ಕಳೆಯಬೇಕೆನ್ನುವ ಬಯಕೆ ಮನದಲ್ಲಿದ್ದರೂ ಒತ್ತಡದಿಂದಾಗಿ ಬಯಕೆ ಕೈಗೂಡುವುದು ಕಡಿಮೆಯೇ ಅನ್ನಿ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಾಗ್ದಾನದಂತೆ ಪರಿಸರ ಸ್ನೇಹಿ ಸುಂದರ ಗಣೇಶನ ವಿಗ್ರಹ ಪ್ರತಿಷ್ಠಾಪನೆ, ಹಿಂದೂ ಸಂಪ್ರದಾಯಿಕ ವಾದ್ಯಗಳ ಭವ್ಯ ಮೆರವಣಿಗೆ ಹಾಗೂ ಉತ್ತಮ ಅಲಂಕಾರ ಮಾಡಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮಂಡಳಿಗಳಿಗೆ ಬುಧವಾರ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷರಾದ ರಾಘವ್ ಅಣ್ಣಿಗೇರಿ ಅವರು ಬಹುಮಾನ ಮೊತ್ತ ವಿತರಿಸಿದರು.ಈ ಬಾರಿಯ ಗಣೇಶ ಉತ್ಸವದಲ್ಲಿ ಪರಿಸರ ಸ್ನೇಹಿ ಫೈಬರ್ ನಲ್ಲಿ ಸುಂದರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಜೋರಾಪುರ ಪೇಟದ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಸಂಕಲ್ಪ ಸಿದ್ಧಿ ವಿನಾಯಕನ ಮೂರ್ತಿಗೆ ಹಾಗೂ ಅದೇ ಮಂಡಳಿಯ ಸದಸ್ಯರಿಂದ ಹಿಂದೂ ಸಂಪ್ರದಾಯದಂತೆ ವಾರಕರೀ ನೃತ್ಯ ಹಾಗೂ ತಾಷಾ, ಡೊಳ್ಳು ವಾದನಗಳ ಕಲೆಯನ್ನು ಅದ್ಭುತವಾಗಿ ವಿಜಯಪುರ ಜನತೆಗೆ ಮನಮುಟ್ಟುವ ಹಾಗೆ ನುಡಿಸಿ, ಮೆರವಣಿಗೆಯ ಉದ್ದಕ್ಕೂ ಭವ್ಯ ಪ್ರದರ್ಶನ ನೀಡಿದ ಹಿನ್ನೆಲೆ ರೂ.51,000 ಸಾವಿರ ಬಹುಮಾನವನ್ನು ನೀಡಿ ಗೌರವಿಸಲಾಯಿತು.ಉತ್ತಮ ಅಲಂಕಾರ ಮಾಡಿ ಗಣೇಶನನ್ನು…
ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಪಟ್ಟಣದ ವಾರ್ಡ್ ನಂಬರ್ 14-15ರ ಕಾಟಾಪುರ ರಸ್ತೆಯಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ನಿಡಗುಂದಿಯ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛತಾ ಹಿ ಸೇವಾ-2024 ಸ್ವಚ್ಛತೆಯ ಘೋಷವಾಕ್ಯದ ” ಏಕ್ ಪೇಡ ಮಾ ಕಾ ನಾಮ( ತಾಯಿಯ ಹೆಸರಲ್ಲಿ) ಗಿಡ ಹಚ್ಚುವ ಕಾರ್ಯಕ್ರಮವನ್ನು ಪಪಂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ವಾರ್ಡ್ ನಂ.14-15 ರ ಸದಸ್ಯ ಕರಿಯಪ್ಪ ಸಿಂದಗಿ ಸಸಿಗಳಿಗೆ ನೀರು ಉಳಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ವೀರೇಶ್ ಹಟ್ಟಿ ಅವರು, ಸಾರ್ವಜನಿಕರಿಗೆ ನಿಡಗುಂದಿ ಪಟ್ಟಣವನ್ನು ಸಾರ್ವಜನಿಕ ಸ್ಥಳಗಳನ್ನು ಹಸಿರಿಕರಣ ಗೊಳಿಸೋಣ, ನೆರಳಿಗಾಗಿ ಗಿಡ ನೆಡಿ’ “ಶುದ್ಧ ಗಾಳಿಗಾಗಿ ಮರ ರಕ್ಷಿಸಿ ಎಂಬುದಾಗಿ ಹೇಳಿದರು. ಅದರಂತೆ ಒಟ್ಟು 700 ಸಸಿಗಳನ್ನು ನೀಡಲಾಗುವುದು ಹಾಗೂ ಅವುಗಳಿಗೆ ತಂತಿ ಬೇಲಿಗಳನ್ನು ಹಾಕಲಾಗುವುದು ಸುಮಾರು 5,6, ದಿನಗಳವರೆಗೆ ಬೆಳಗಿನ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8.30 ಗಂಟೆವರೆಗೆ ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದು ಸಾರ್ವಜನಿಕರಿಗೆ…
