Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ
ವಿಶೇಷ ಲೇಖನ

ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)

ಲೇಖಕರು
– ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ. ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ. ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ ರೇಜಿಗೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮನೆಯಿಂದ ದೂರ ಇರುವವರು, ಬೇರೆ ಊರಿನಲ್ಲಿ ಕೆಲಸ ನಿರ್ವಹಿಸುವವರು ಪುಟ್ಟ ಬೀಜದ ಮೊಳಕೆಯಂತೆ ಹೊಸ ಆಸೆಯನ್ನು ಹೊತ್ತು ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಇಲ್ಲವೇ ವಾರಾಂತ್ಯಕ್ಕ್ಲೆ ಬಂದು ಮನೆಯವರೊಂದಿಗೆ ಕಾಲ ಕಳೆಯುವ ವಾಡಿಕೆ ಹಲವರದು. ಇದಕ್ಕೆ ಸಂತೋಷದಿಂದ ಕೈ ಜೋಡಿಸುವ ಜೋಡಿಗಳು ಜೊತೆ ಜೊತೆಯಲಿ ಕಾಲ ಕಳೆಯಬೇಕೆನ್ನುವ ಬಯಕೆ ಮನದಲ್ಲಿದ್ದರೂ ಒತ್ತಡದಿಂದಾಗಿ ಬಯಕೆ ಕೈಗೂಡುವುದು ಕಡಿಮೆಯೇ ಅನ್ನಿ.


ಕೈತುಂಬ ಹಣ ಎಣಿಸುವ ಹಲವಾರು ಜನರ ಬದುಕು ಭಿನ್ನವಾಗಿಲ್ಲ. ಆಹಾರ ಔಷಧ ವೈದ್ಯಕೀಯ ವ್ಯವಸ್ಥೆ ಹೀಗೆ ಏನೆಲ್ಲ ಸವಲತ್ತುಗಳನ್ನು ಪಡೆಯುವ ಜೀವಗಳಿಗೂ ಸಮಾಧಾನವಿಲ್ಲ. ರೋಗ ರುಜಿನ ತಗುಲದಂತೆ ಎಚ್ಚರವಹಿಸಿದರೂ ಕಾಯಿಲೆಗೆ ಬೀಳುವ ಪ್ರಸಂಗಗಳೇನೂ ಕಡಿಮೆಯಿಲ್ಲ. ಬೇಕಾದ ದಿನಸಿಗಳನ್ನು ಕೊಳ್ಳಲು ಅಂಗಡಿಗೆ ಹೋಗಬೇಕೆಂದಿಲ್ಲ. ವಸ್ತುಗಳು ಮನೆಯತ್ತ ರವಾನೆಯಾಗಿ ತಲುಪಿದ ಕೂಡಲೇ ಇತ್ತ ಅಂಗಡಿ ಮಾಲಿಕನ ಅಕೌಂಟುಗಳಿಗೆ ಕ್ಷಣಾರ್ಧದಲ್ಲಿ ಆನ್ ಲೈನ್ ಮೂಲಕ ಹಣ ಜಮೆ ಆಗುತ್ತದೆ. ದಿನಕ್ಕೆ ಅದೆಷ್ಟೋ ಜನರ ನಾಲಿಗೆ ರುಚಿ ತಣಿಸುವ ಹಸಿದ ಹೊಟ್ಟೆಗಳ ಬೆಂಕಿಯನ್ನು ಆರಿಸುವವರ ಖಾತೆಗಳಿಗೂ ಹಣ ಜಮೆಯಾಗುವ ಬಗೆ ಹೀಗೆಯೇ. ವಿನೂತನ ತಂತ್ರಜ್ಞಾನ ಬಹುತೇಕವಾಗಿ ಬಹುತೇಕರಿಗೆ ಬಹುಪಯೋಗಿಯೆನಿಸಿದರೂ ಎಷ್ಟೋ ಸಲ ದೊಡ್ಡ ಪಜೀತಿಯನ್ನು ತರುತ್ತದೆ ಎನ್ನುವುದೂ ಅಷ್ಟೇ ಸತ್ಯ. ಕೆಲವೊಮ್ಮೆಯಂತೂ ಸಣ್ಣಪುಟ್ಟ ವಿಷಯಗಳಿಗೆ ದೊಡ್ಡ ರಂಪಾಟ ಆಗುತ್ತದೆ.


ಮೊದಲಿನಂತೆ ಒಕ್ಕಲುತನ ಮಾಡುವ ವ್ಯವಸ್ಥೆ ಈಗ ಬಹುತೇಕ ಕಡೆ ಮಾಯವಾಗಿದೆ. ಬೀಜ ಬಿತ್ತಬೇಕಿಲ್ಲ, ಕಳೆ ತೆಗೆಯಬೇಕಿಲ್ಲ, ಒಟ್ಟಾರೆ ಮಳೆ ಗಾಳಿ ಚಳಿಯೆನ್ನದೇ ಮೈ ಹಣ್ಣಾಗುವಂತೆ ರೈತೇಕಿ ಮಾಡುವ ದಿನಮಾನಗಳು ಈಗಿಲ್ಲ. ಏನೆಲ್ಲ ಇದ್ದರೂ ಸ್ವಾರ್ಥ ತುಂಬಿ ತುಳುಕುತ್ತಿದೆ. ಬಾಳೆಂಬ ಸಾಗರದಲ್ಲಿ ನೆಮ್ಮದಿ ಅನ್ನೋದು ತುಂಬಾ ದುಬಾರಿ ಆಗಿ ಬಿಟ್ಟಿದೆ. ಕೋಪ, ತಾಪ,ಸೇಡು, ದ್ವೇಷ ಎಲ್ಲೆಲ್ಲೂ ರಾರಾಜಿಸುತ್ತಿದೆ. ಒತ್ತಡವಿಲ್ಲದೇ ಜೀವನವೇ ಇಲ್ಲವೇನೋ ಅನ್ನುವಷ್ಟು ಒತ್ತಡ ತುಂಬಿ ತುಳುಕುತ್ತಿದೆ. ‘ಇತರರಿಗಾಗಿ ಬದುಕುವುದೇ ಜೀವನದ ನಿಜವಾದ ಸಾರ್ಥಕತೆ.’ ಎಂದಿದ್ದಾರೆ ಸ್ವಾಮೀ ವಿವೇಕಾನಂದರು. ಹೊಸ ತಂತ್ರಜ್ಞಾನ ಸೃಜನಶೀಲತೆಯನ್ನು ತೋರುತ್ತದೆ. ಒತ್ತಡ ಸುಂದರ ಭಾವನೆಗಳನ್ನು ಹತ್ತಿಕ್ಕುತ್ತದೆ. ಮನಸ್ಸು ನಿರ್ಮಲವಾಗಿದ್ದರೆ ಮಾತ್ರ ನೆಮ್ಮದಿ ಸಮಾಧಾನ, ಸಾರ್ಥಕತೆ ದಕ್ಕುತ್ತದೆ. ನಮ್ಮ ಹಿರಿಕರಂತೆ ಆರೋಗ್ಯಮಯ ಸಾರ್ಥಕ ಜೀವನ ಪಡೆಯಲು ಅತಿಯಾದ ಯಾಂತ್ರಿಕ ಜೀವನ ಮತ್ತು ಒತ್ತಡವನ್ನು ದೂರ ತಳ್ಳೋಣ. ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೋಣ. ಆದ ತಪ್ಪನ್ನು ತಿದ್ದಿಕೊಳ್ಳೋಣ. ತಪ್ಪನ್ನು ತಿದ್ದಿಕೊಳ್ಳುವುದು ಸಣ್ಣ ವಿಷಯವೇನೂ ಅಲ್ಲ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.