ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳೆಯರಿಗಾಗಿ ಆಯಾ ತಾಲ್ಲೂಕಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಏರ್ಪಡಿಸಲಾಗಿದೆ.
ಆಸಕ್ತವುಳ್ಳ ಕ್ರೀಡಾಪಟುಗಳು ತಮ್ಮ ತಾಲೂಕುಗಳಲ್ಲಿ ನಡೆಸುವ ತಾಲೂಕ ಮಟ್ಟದ ಅಥ್ಲೆಟಿಕ್, ವಾಲಿಬಾಲ್, ಪುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗ ಕ್ರೀಡಾಪಟುಗಳು ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದಾಗಿದೆ.
ತಾಲ್ಲೂಕ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಧಾರ ಕಾರ್ಡನ್ನು ಕಡ್ಡಾಯವಾಗಿ ತರುವುದು. ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಕ್ರೀಡಾಪಟುಗಳು ಮಾತ್ರ ಅರ್ಹರಿರುತ್ತಾರೆ ಹಾಗೂ ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆರಕ್ಷಣಾಪಡೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಿರುವುದಿಲ್ಲ.
ಸೆ.೨೦ರಂದು ಸಿಂದಗಿಯ ತಾಲೂಕು ಕ್ರೀಡಾಂಗಣ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ದೇವರ ಹಿಪ್ಪರಗಿ ತಾಲೂಕಿನ ಜಗದಂಬ ಪ್ರೌಢ ಶಾಲೆ ಹಿಟ್ಟಿನಹಳ್ಳಿ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ಆಲಮೇಲ ತಾಲೂಕಿನ ಮಲಘಾಣದ ಸರಕಾರಿ ಪ್ರೌಢ ಶಾಲೆ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭,ಸೆ.೨೧ ರಂದು ಇಂಡಿ ತಾಲೂಕಿನ ತಾಲೂಕೂ ಕ್ರೀಡಾಂಗಣದಲ್ಲಿ, ಎಚ್.ಕೆ.ಮಲಗೊಂಡ ,ಮೊ:೯೬೩೨೩೧೫೪೯೨, ಹಾಗೂ ಸಿ ಎಸ್ ವಾಲಿಕಾರ್ ಮೋ ೯೮೮೦೧೪೬೨೧೯ ಸೆ.೨೧ ರಂದು ತಾಳಿಕೋಟೆಯ ಎಸ್.ಕೆ ಪಿಯು ಕಾಲೇಜಿನಲ್ಲಿ ಸುರೇಶ ಆಲೂರ ಬಿ ವಾವ್ ಕವಡಿ ೭೦೨೬೩೬೯೮೦೫ ಮೊ:೮೯೧೮೦೬೮೫೨ ಸೆ.೨೨ ರಂದು ಕೋಲಾರ ತಾಲೂಕಿನ ಮಾಡರ್ನ ಪ್ರಾಥಮಿಕ ಶಾಲೆ (ಎಂ.ಪಿ.ಎಸ್) ಕೋಲಾರದಲ್ಲಿ ನಡೆಯುತ್ತಿದ್ದು, ಎಸ್ ಎಸ್ ಅಟಿ ೯೬೬೩೨೯೭೬೫೪ ಮೊ: ೭೦೨೬೩೬೯೮೦೫ ಸಂಯೋಜಕರನ್ನು ಸಂಪರ್ಕಿಸಬಹುದು.
ಸೆ. ೨೩ರಂದು ಮುದ್ದೇಬಿಹಾಳದ ಎಂ.ಜಿ.ವಿ.ಸಿ ಪದವಿ ಪೂರ್ವ ಕಾಲೇಜ, ಸುರೇಶ ಆಲೂರ ಮೊ:೮೯೭೧೮೦೬೮೫೨, ಸೆ.೨೩ರಂದು ಚಡಚಣದಲ್ಲಿ ಸಂಗಮೇಶ್ವರ ಕಾಲೇಜ, ಮಲ್ಲಿಕಾರ್ಜುನ ವಡ್ಡರ ಮೊ: ೯೭೩೧೫೭೩೧೦೯ / ೯೩೫೩೮೧೩೯೨೭, ಸೆ.೨೩ರಂದು ಬಸವನ ಬಾಗೇವಾಡಿಯ ಎಸ್.ಬಿ.ಪದವಿಪೂರ್ವ ಕಾಲೇಜು ಮೈದಾನ, ಎಸ್.ಎಸ್.ಅವಟಿ ಮೊ: ೯೬೬೩೨೯೭೬೫೪, ಸೆ.೨೩ ರಂದು ನಿಡಗುಂದಿ ತಾಲೂಕಿನ ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸ್ಮಾರಕ ಪ್ರೌಢ ಶಾಲೆ, ಎಸ್.ಎಸ್.ಅವಟಿ ಮೊ: ೯೬೬೩೨೯೭೬೫೪, ಸೆ.೨೩ ರಂದು ವಿಜಯಪುರ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣ, ರಾಜು ಚವ್ಹಾಣ,ಮೊ: ೭೦೧೯೧೬೭೨೪೩ ಹಾಗೂ ಸಿ.ಎಂ.ಕೋರೆ ಮೊ: ೯೯೭೨೬೧೩೦೩೭, ಸೆ.೨೩ ರಂದು ಬಬಲೇಶ್ವರ ಶಾಂತವೀರ ಪ್ರೌಢ ಶಾಲೆ, ಸಿ.ಎಂ.ಕೋರೆ ಮೊ: ೯೯೭೨೬೧೩೦೩೭, ಸೆ.೨೩ ರಂದು ತಿಕೋಟಾ ದುರ್ಗಾದೇವಿ ಪ್ರೌಢಶಾಲೆ ಸೋಮದೇವರ ಹಟ್ಟಿ, ಸಿ.ಎಂ.ಕೋರೆ ಮೊ: ೯೯೭೨೬೧೩೦೩೭ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾ ಮಟ್ಟದಲ್ಲಿ ನಡೆಯುವ ದಸರಾ ಕ್ರೀಡಾಕೂಟವು ಸೆ.೨೪ ರಿಂದ ಸೆ.೨೫ರವರೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜಶೇಖರ ದೈವಾಡಿ ಮೊ: ೭೦೧೯೦೦೮೪೪೩ ಇವರೂ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
