ಲೇಖನ- ಸಾವಿತ್ರಿ ಸಿದ್ದರಾಮುತುಮಕೂರು
ಉದಯರಶ್ಮಿ ದಿನಪತ್ರಿಕೆ
“ಮಾನವನ ಜೀವನಕ್ಕೆ ದೇವರು ನೀಡಿದ ಅತ್ಯಮೂಲ್ಯ ಕೊಡುಗೆ ಈ ಪ್ರಕೃತಿ. ಮನುಷ್ಯನ ಬದುಕಿಗೆ ಪರಿಸರವೇ ಜೀವಾಳ. ಮನುಜನಿಗೆ ಉಸಿರಾಡಲು ಗಾಳಿ ಕೊಟ್ಟು
ಸಲಹುತ್ತಲೇ ಬರುತ್ತಿದೆ. ಆದರೆ ಮಾನವ ಈಗೀಗ ಪರಿಸರವನ್ನೇ ಹಣದ ಆಸೆ ಹೀನ ಕೃತ್ಯಗಳಿಂದ ದುರುಪಯೋಗ ಪಡಿಸಿಕೊಂಡು ಪ್ರಕೃತಿಯನ್ನೇ ನಾಶ ಪಡಿಸುತ್ತಾ ತನ್ನ ಅಳಿವಿಗೆ ತಾನೇ ಕಾರಣವಾಗುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಅತೀ ಕಷ್ಟ ಎದುರಾಗುವ ಸಂದರ್ಭ ಒದಗುತ್ತದೆ.
ಮಾನವನ ದುರಾಸೆಯ ಚಟುವಟಿಕೆಗಳಿಂದಾಗಿ ಭೂಮಿಯು ಮಲಿನಗೊಳ್ಳುತ್ತಾ ಜಾಗತಿಕ ತಾಪಮಾನವು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂಧನಗಳ ಬಳಕೆ, ಕೈಗಾರೀಕರಣ, ಅರಣ್ಯನಾಶ
ಇಂಧನಗಳ ಬಳಕೆ, ಕೈಗಾರೀಕರಣ, ಅರಣ್ಯನಾಶ ಇವುಗಳೇ ಜಾಗತಿಕ ತಾಪಮಾನಕ್ಕೆ ಮುಖ್ಯ ಕಾರಣಗಳಾಗಿವೆ. ಎಣಿಸುತ್ತಾ ಹೋದರೆ ಇನ್ನು ಬಹಳಷ್ಚಿವೆ.
ಇವುಗಳನ್ನು ತಡೆಯ ಬೇಕಾದದ್ದು ಮಾನವರಾದ ನಮ್ಮ ಕರ್ತವ್ಯವೇ ಆಗಿದೆ. ಪರಿಸರದ ಮೌಲ್ಯವನ್ನು ಅರಿತು, ಈಗಲಾದರೂ ಜಾಗೃತಗೊಳ್ಳಬೇಕಿದೆ.
ಜಾಗತಿಕ ತಾಪಮಾನವನ್ನು ಇನ್ನು ಮುಂದೆಯಾದರೂ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ. ಅವುಗಳೇನೆಂದರೆ
ಪ್ಲಾಸ್ಟಿಕ್ ಬಳಕೆ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ ಹೋಗಬಹುದು, ಅವುಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸುವ ಕಾರ್ಯ ಮಾಡಬಹುದು.
ಪೆಟ್ರೋಲ್, ಡೀಸೆಲ್
ಇಂಧನಗಳಾದ ಪೆಟ್ರೋಲ್, ಡೀಸೆಲ್
ಇವುಗಳ ಬಳಕೆ ಕಡಿಮೆ ಮಾಡಬೇಕು. ಬದಲಾಗಿ ಸೈಕಲ್, ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಬಳಸಬಹುದು. ಇಂಧನಗಳ ಬದಲು ಸೌರಶಕ್ತಿ, ಪವನ ಶಕ್ತಿ ಇವುಗಳನ್ನು ಬಳಸಬಹುದು. ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಅತೀ ಮುಖ್ಯ
ಅಂಶವೆಂದರೆ ಪ್ರಕೃತಿಯ ನಾಶವನ್ನು ತಡೆಯುವುದು. ಪರಿಸರವನ್ನು ಪ್ರೀತಿಸುವುದು. ಗಿಡಮರಗಳನ್ನು ಬೆಳೆಸಿ ಪೋಷಿಸುತ್ತಾ ಸಾಗುವುದು.
ವಸ್ತುಗಳ ಮರುಬಳಕೆ
ವಸ್ತುಗಳ ಮರುಬಳಕೆ ಮಾಡುತ್ತಾ ತ್ಯಾಜ್ಯ ವಸ್ತುಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.
ವಿದ್ಯುತ್ ಉಳಿತಾಯ
ವಿದ್ಯುತ್ ಉಳಿತಾಯ ನೀರನ್ನು ಪೋಲಾಗದಂತೆ ಮಿತವಾಗಿ ಬಳಸುವುದು.ಹಿತ ಮಿತ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು.
ಒಟ್ಟಾರೆ ಪ್ರಕೃತಿ ನೀಡುತ್ತಿರುವ ಕೊಡುಗೆಗಳನ್ನು ದುರ್ಬಳಕೆ ಮಾಡದೆ ಸಕಾರಣಗಳಿಗೆ ಬಳಸಿಕೊಂಡರೆ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಬಹುದು..


