Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕೆಮಿಕಲ್ ಮಿಶ್ರಿತ ಹಾಲು ತಡೆಗಟ್ಟಲು ಅಪ್ಪು ಪಟ್ಟಣಶೆಟ್ಟಿ ಆಗ್ರಹ

ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿ; ಶೋಷಿತರ ಪರ ಧ್ವನಿ ಎತ್ತಿ

ಹದಗೆಟ್ಟ ಗುಂದವಾನ–ಶೀಗಣಾಪುರ ರಸ್ತೆ ದುರಸ್ತಿ ಯಾವಾಗ?

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಾವುಗಳ ಬಗ್ಗೆ ಇರುವ ಮೂಢ ನಂಬಿಕೆ ತೊರೆದು ಅವುಗಳನ್ನು ರಕ್ಷಿಸಿ
(ರಾಜ್ಯ ) ಜಿಲ್ಲೆ

ಹಾವುಗಳ ಬಗ್ಗೆ ಇರುವ ಮೂಢ ನಂಬಿಕೆ ತೊರೆದು ಅವುಗಳನ್ನು ರಕ್ಷಿಸಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ದಲ್ಲಿ ವಿಶ್ವ ಹಾವುಗಳ ದಿನವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ವಿದ್ಯಾರ್ಥಿಗಳಿಗೆ ಹಾವುಗಳ ಕುರಿತು ಜಾಗೃತಿ ಮತ್ತು ಹಾವು ರಕ್ಷಕರಿಗೆ ಸ್ನೇಕ್ ಕ್ಯಾಚಿಂಗ್ ಕಿಟ್ ಹಾಗೂ ಆರೋಗ್ಯ ಕಾರ್ಡ್ ವಿತರಿಸುವ ಮೂಲಕ ವಿಶ್ವ ಹಾವುಗಳ ದಿನವನ್ನು ನಗರದಲ್ಲಿ ವಿನೂತನ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗುರುವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ವಿಜಯಪುರ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಾವುಗಳ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ತೊರೆದು ಅವುಗಳನ್ನು ರಕ್ಷಿಸುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಕಾಡು ಪ್ರಾಣಿಗಳು ಹಾಗೂ ವನ್ಯಜೀವಿಗಳೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅವುಗಳ ಸ್ವಾಭಾವಿಕ ವಾಸಸ್ಥಳವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮತ್ತು ವನ್ಯಜೀವಿ ಖ್ಯಾತ ಛಾಯಾಗ್ರಾಹಕ ಧ್ರುವ ಎಂ. ಪಾಟೀಲ ಮಾತನಾಡಿ, ಹಾವುಗಳ ನಾನಾ ಪ್ರಭೇದಗಳು, ಅವುಗಳ ಪರಿಸರದಲ್ಲಿನ ಪಾತ್ರ, ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಹಾವುಗಳ ಮಹತ್ವ ಹಾಗೂ ಹಾವುಗಳ ಬಗ್ಗೆ ಜನರಲ್ಲಿ ಮೂಡಿಸಬೇಕಿರುವ ವೈಜ್ಞಾನಿಕ ಅರಿವಿನ ಕುರಿತು ಮಾಹಿತಿ ನೀಡಿದರು.
ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಡಾ. ಅಶೋಕ್ ಬಿ. ಎನ್. ಮತ್ತು ಬಾಗಲಕೋಟೆ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಬಸನಗೌಡ ಬಗಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ಬಿ.ಎಲ್.ಡಿ.ಇ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜೀವ ಬೆಂಟೂರ, ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಪಿ., ವಿಜಯಪುರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಅರಣ್ಯಾಧಿಕಾರಿ ಧನರಾಜ ಮಜಗೊಂಡ, ಡಾ. ಮುರುಗೇಶ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೆಮಿಕಲ್ ಮಿಶ್ರಿತ ಹಾಲು ತಡೆಗಟ್ಟಲು ಅಪ್ಪು ಪಟ್ಟಣಶೆಟ್ಟಿ ಆಗ್ರಹ

ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿ; ಶೋಷಿತರ ಪರ ಧ್ವನಿ ಎತ್ತಿ

ಹದಗೆಟ್ಟ ಗುಂದವಾನ–ಶೀಗಣಾಪುರ ರಸ್ತೆ ದುರಸ್ತಿ ಯಾವಾಗ?

ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನಕ್ಕೆ ತೀರ್ಮಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕೆಮಿಕಲ್ ಮಿಶ್ರಿತ ಹಾಲು ತಡೆಗಟ್ಟಲು ಅಪ್ಪು ಪಟ್ಟಣಶೆಟ್ಟಿ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿ; ಶೋಷಿತರ ಪರ ಧ್ವನಿ ಎತ್ತಿ
    In (ರಾಜ್ಯ ) ಜಿಲ್ಲೆ
  • ಹದಗೆಟ್ಟ ಗುಂದವಾನ–ಶೀಗಣಾಪುರ ರಸ್ತೆ ದುರಸ್ತಿ ಯಾವಾಗ?
    In (ರಾಜ್ಯ ) ಜಿಲ್ಲೆ
  • ಹಾವುಗಳ ಬಗ್ಗೆ ಇರುವ ಮೂಢ ನಂಬಿಕೆ ತೊರೆದು ಅವುಗಳನ್ನು ರಕ್ಷಿಸಿ
    In (ರಾಜ್ಯ ) ಜಿಲ್ಲೆ
  • ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನಕ್ಕೆ ತೀರ್ಮಾನ
    In (ರಾಜ್ಯ ) ಜಿಲ್ಲೆ
  • ಯುವಕರು ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ಸಮಸ್ಯೆಗಳ ಕುರಿತು ಸದಾ ಜಾಗರೂಕರಾಗಿರೋಣ
    In ವಿಶೇಷ ಲೇಖನ
  • ಪ್ರಕೃತಿಯಿಂದ ನಾವು
    In ವಿಶೇಷ ಲೇಖನ
  • ಜುಲೈ 19 ರಂದು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 16, 2026
    In ಆರೋಗ್ಯ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.