ಛಾಯಾಗ್ರಾಹಕರ ನೋಂದಣಿ ಮತ್ತು ಮಾಹಿತಿ ಶಿಬಿರದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ನೂತನವಾಗಿ ಅಸಂಘಟಿತ ಕಾರ್ಮಿಕರಾಗಿ ಸೇರ್ಪಡೆಗೊಂಡ ಛಾಯಾಗ್ರಾಹಕರಿಗೆ ಮಂಗಳವಾರ ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನೋಂದಣಿ ಮತ್ತು ಮಾಹಿತಿ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ನೂತನವಾಗಿ ೧೮ ಅಸಂಘಟಿತ ಕಾರ್ಮಿಕರ ಜೊತೆಯಲ್ಲಿ ಛಾಯಾಗ್ರಾಹಕರನ್ನು ಸೇರ್ಪಡೆ ಮಾಡಲಾಗಿದೆ. ಕಾರಣ ಛಾಯಾಗ್ರಾಹಕರು ಈ ಯೋಜನೆಯ ಪ್ರಯೋಜನ ಪಡೆಯಲು ಎಲ್ಲರೂ ಕಡ್ಡಾಯವಾಗಿ ನೋದಣಿ ಮಾಡಬೇಕು ಬಹುಮುಖ್ಯವಾಗಿ ಈ ನೋಂದಣಿ ಕಾರ್ಯ ಯಶಸ್ವಿಯಾಗಲು ಎಲ್ಲರು ಸಂಘಟಿತರಾಗಲು ಜಿಲ್ಲಾ ಛಾಯಾಗ್ರಾಕರ ಸಂಘದ ಸದಸ್ಯರಾಗಬೇಕು. ಕರ್ನಾಟಕ ಛಾಯಾಗ್ರಹಕ ಸಂಘದ ಅಧ್ಯಕ್ಷರು ಮತು ಎಲ್ಲ ಜಿಲ್ಲಾ ಸಂಘದ ಮನವಿಯ ಹಿನ್ನಲೆಯಲ್ಲಿ ಮಾನ್ಯ ಕಾರ್ಮಿಕ ಸಚಿವ ಸಂತೋಷ ಲಾಡ ಅವರು ಆಸಕ್ತಿಯಿಂದ ಛಾಯಾಗ್ರಾಹಕರನ್ನು ಕಾರ್ಮಿಕರ ಇಲಾಖೆಯಲ್ಲಿ ಸೇರ್ಪಡೆಮಾಡಿದ್ದಾರೆ. ಸಂಘ ಮತ್ತು ಸಂಘಟನೆಯ ಬಲದಿಂದ ಎಲ್ಲರೂ ಈ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇದರ ಜೊತೆಯಲ್ಲಿ ಇಲಾಖೆಯ ಎಲ್ಲ ಯೋಜನೆಗಳ ಲಾಭ ಪಡೆಯಬೇಕೆಂದರು.
ಈ ಯೊಜನೆಗೆ ನೊಂದಣಿ ಮಾಡಿಸಲು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ರವರು ಎಲ್ಲ ಛಾಯಾಗ್ರಾಹಕ ಸದಸ್ಯರನ್ನು ಸೇರಿಸಿ ಈ ನೊಂದಣಿ ಶಿಬಿರ ಆಯೋಜನೆ ಮಾಡಿದ್ದಾರೆ. ಅವರಿಗೆ ಇಲಾಖೆಯಿಂದ ಕೃತಜ್ಞತೆ ಸಲ್ಲಿಸುತ್ತ ಜಿಲ್ಲೆಯಲ್ಲಿ ಅತಿ ಹೆಚ್ಚಿನ ನೋಂದಣಿ ನಿಮ್ಮ ಸಂಘದಿಂದಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಎರಡನೇ ವೃತ್ತದ ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಜಗದೇವಿ ಸಜ್ಜನ ಮಾತನಾಡಿ, ಈ ಯೋಜನೆಯ ಪ್ರಯೋಜನೆಯನ್ನು ಛಾಯಾಗ್ರಾಹಕರು ತೆಗೆದುಕೊಳ್ಳಬೇಕು. ಅದಕ್ಕೆ ಇಲಾಖೆಯಿಂದ ಛಾಯಾಗ್ರಾಹಕರ ಸಂಘಕ್ಕೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗುವುದು. ಜಿಲ್ಲೆಯ ಎಲ್ಲ ಛಾಯಾಗ್ರಾಹಕರು ಇ-ಶ್ರಮ್ ಹಾಗೂ ಕಾರ್ಮಿಕರ ಇಲಾಖೆಯಲ್ಲಿ ನೋದಾಯಿಸಿ ಗುರುತಿನ ಚೀಟಿ ಪಡೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ವಹಿಸಿ ಮಾತನಾಡುತ್ತ, ಎಲ್ಲ ಜಿಲ್ಲೆಯ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಒತ್ತಾಯಕ್ಕೆ ಮತ್ತು ಕಾರ್ಮಿಕ ಸಚಿವರ ಆಸಕ್ತಿಯಿಂದ ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರು ಎಂದು ಸೇರ್ಪಡೆಗೊಳಿಸಿದ್ದಾರೆ. ಎಲ್ಲರೂ ಛಾಯಾಗ್ರಾಹಕರ ಸಂಘದಲ್ಲಿ ಸದಸ್ಯರಾಗಿ ಇಲಾಖೆಯ ಪ್ರಯೋಜನ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರ ಒಂದನೇ ವೃತ್ತದ ಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ, ಅನೀಲ ರಾಠೋಡ, ಇಂಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಿದ್ದು ಕುದುರಿ, ಜಿಲ್ಲಾ ಸಂಘದ ಖಜಾಂಚಿ ಸುರೇಶ ರಾಠೋಡ ಇದ್ದರು.
ನೊಂದಣಿ ಶಿಬಿರದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ್ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ್ ಕುಂಬಾರ, ಛಾಯಾಗ್ರಾಹಕರಾ ಗೌಡಪ್ಪಗೌಡ ಬಿರಾದಾರ, ಸುಗುರೇಶ ಗುಲ್ಫಿ, ಅನಂತ ಭೋಸಲೆ, ಸುಭಾಶ ಪವಾರ, ಸದಾಶಿವ ಘೋರ್ಪಡೆ, ಗಣೇಶ ಶಿಂದೆ, ಸುನೀಲಗೌಡ ಬಿರಾದಾರ, ಚಂದ್ರಕಾಂತ ವಡ್ಡರ, ಪ್ರಭಾಕರ ಅರಕೇರಿ, ಶಶಿ ಕುಂಬಾರ, ವಿಜಯ ಮೈದರಗಿ, ಸಂಜು ಕಾಜಗಾರ, ವಿಠ್ಠಲ ಗುಜ್ಜರ, ಸಿದ್ದು, ಅಶೋಕ, ಕಿರಣ ನೇನೆ, ಚಂದ್ರು ಕಬಾಡೆ, ರೋಹಿತ ಬಳಿಗಾರ, ಮಲ್ಲಿಕಾರ್ಜುನ ಚಕ್ರವರ್ತಿ, ವಿನೋದ ವಡ್ಡರ, ಶ್ರೀಕಾಂತ ವಡ್ಡರ, ದೇಸು ಚವ್ಹಾಣ, ಪ್ರವೀಣ ಮಠ, ಮಹಾಂತೇಶ ಹುಣಸಗಿ, ಸಂತೋಷ ಕಾಳೆ, ಸಹಿತ ಛಾಯಾಗ್ರಾಹಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ನಿರೂಪಣೆಯನ್ನು ಶಿವಕುಮಾರ ನೆರವೇರಿಸಿದರು.

