ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಎಲ್‌ಡಿಇ ಬಾಲಕೀಯರ ಪ್ರೌಢಶಾಲೆ ವಿಜಯಪುರ ಇವರ ಸಹಯೋಗದಲ್ಲಿ ನಡೆದ ತಾಲೂಕಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಿಡಿಜೆ ಪ್ರೌಢಶಾಲೆ “ಬ” ವಿಜಯಪುರ ವಿದ್ಯಾರ್ಥಿಗಳಾದ ಕು. ಅಪೂರ್ವ ಬಿರಾದಾರ, ಪಲ್ಲವಿ ಶಿವಪೂರ ಪ್ರಥಮ/ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೈಹಿಕ ಶಿಕ್ಷಕ ಎ.ಎಂ. ಮಾಂಗ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಬಿಡಿಈ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಆರ್.ಪಿ. ಚಿಕ್ಕಲಕಿ, ಮುಖ್ಯಾಧ್ಯಾಪಕಿಯರಾದ ಕೆ.ಎಂ. ಸೀತಿಮನಿ, ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

