Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ವಿಜಯಪುರದಲ್ಲಿ ಸೆ.29 ಭಾನುವಾರದಂದು ಜರುಗುವ ಗ್ರಾಮ ಆಡಳಿತ ಅಧಿಕಾರಿ, ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವ ನಿಡಗುಂದಿ ತಾಲೂಕಿನ ಪರೀಕ್ಷಾರ್ಥಿಗಳಿಗೆ ವಿಜಯಪುರಕ್ಕೆ ಹೋಗಲು ತೊಂದರೆಯಾಗದಂತೆ ಪಟ್ಟಣದ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ಸುಗಳನ್ನು ಒದಗಿಸಬೇಕೆಂದು ಆಗ್ರಹಿಸಿ ನವ ನಿಡಗುಂದಿ ಜನಾಭಿಪ್ರಾಯ ವೇದಿಕೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಡಗುಂದಿ ನಿಯಂತ್ರಕ ಎಚ್.ಕೆ.ಕಟ್ಟಿಮನಿ ಅವರಿಗೆ ಬುದವಾರ ಮನವಿ ಸಲ್ಲಿಸಲಾಯಿತು.ಈ ಸಮಯದಲ್ಲಿ ಎಸ್ ಎಸ್ ಕೋತಿನ, ವಿಜಯ್ ಕಟ್ಟಿಮಠ, ಬಸಲಿಂಗಪ್ಪ ಕುಂಬಾರ, ವಿಜಯ್ ಕುಮಾರ ಚಿನಿವಾಲರ, ಸಂತೋಷ್ ಕಡಿ, ಆನಂದ್ ಬೋವಿವಡ್ಡರ, ಸಿದ್ದು ಚಲವಾದಿ, ಹನುಮಂತ್ ಭಜಂತ್ರಿ, ಗಂಗಾರಾಮ್ ಬಂಡಿವಡ್ಡರ, ಮುತ್ತುರಾಜ್ ಚಲವಾದಿ, ಶಾಂತಪ್ಪ ಹಡಪದ ಸೇರಿದಂತೆ ಅನೇಕರಿದ್ದರು.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸೆ.19 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಗಣೇಶ ವಿಸರ್ಜನೆಯ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಜರತ ಟಿಪ್ಪುಸುಲ್ತಾನ ಶಹೀದ ರವರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ಮುಸ್ಲಿಂ ಹಾಗೂ ದಲಿತ ಮುಖಂಡರು ಬುಧವಾರ ಪೊಲೀಸ್ ಠಾಣೆಗೆ ತೆರಳಿ ಪಿಎಸ್ಐ ಅಮೋಜ್ ಕಾಂಬ್ಳೆ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಿದರು.ಪದೇ ಪದೇ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೀಯಾಳಿಸುವುದು, ಪ್ರಚೋದನಕಾರಿ ಭಾಷಣ ಮಾಡಿ, ಕೋಮು ಸಾಮರಸ್ಯಕ್ಕೆ ದಕ್ಕೆ ತರುವ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ, ವಿಫಲವಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರ್ತನೆ ಖಂಡನೀಯ ಎಂದವರು, ಕೂಡಲೇ ಅವರ ಮೇಲೆ ದೂರ ದಾಖಲಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.ಇದೇ ವೇಳೆ ಪ್ರಮುಖರಾದ ಅಬ್ದುಲ್ ರಜಾಕ್ ಸಾಸನೂರ್, ನಿಂಗಣ್ಣ ಗೋನಾಳ, ಹಮೀದ್ ಹುಣಚ್ಯಾಳ, ಬಂದೇನವಾಜ್ ನಾಲತವಾಡ, ಇಲಿಯಾಸ್ ಪಟೇಲ್ ಬಳಗಾನೂರ, ಬಾಬಾ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನಮ್ಮ ಅಧಿಕಾರದ ಅವಧಿಯಲ್ಲಿ ಪಟ್ಟಣದ ಉದ್ಯಾನವನಗಳ ಅಭಿವೃದ್ಧಿಗೆ ಹಾಗೂ ಪಟ್ಟಣದ ಕೆರೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ಪುರಸಭೆಯ ನೂತನ ಅಧ್ಯಕ್ಷ ಮಹಿಬೂಬ ಗೊಳಸಂಗಿ ಹೇಳಿದರು.ಪಟ್ಟಣದ ಹುಡ್ಕೊ ಬಡಾವಣೆಯ ಉದ್ಯಾನವನದಲ್ಲಿ ಪುರಸಭೆ, ಅರಣ್ಯ ಇಲಾಖೆ ಹಾಗೂ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಸ್ವಚ್ಚತಾ ಹಿ ಸೇವಾ” ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪಟ್ಟಣದ ಜೀವನಾಡಿಯಾಗಿರುವ ಕೆರೆಯ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನಾವು ಕ್ರಿಯಾ ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ ಶಾಸಕರು ಸಹ ಒಪ್ಪಿಗೆ ನೀಡಿದ್ದಾರೆ. ಹಸಿರು ತೋರಣ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸದಸ್ಯರ ಸಲಹೆ ಪಡೆದು ಕೆರೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಪುರಸಭೆ ನೂತನ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿ, ಪಟ್ಟಣದ ಸ್ವಚ್ಛತೆ ಬಗ್ಗೆ ಜನರು ಪ್ರಜ್ಞಾವಂತರಾಗಿ ಕೆಲಸ ಮಾಡಬೇಕು. ತ್ಯಾಜ್ಯ ಮುಕ್ತ ಪಟ್ಟಣ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ನಾವು ನಡೆಯುವ ಮಾರ್ಗ ಮತ್ತು ಮನಸ್ಸುಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಾಲಟ್ಟಿ, ಕೊಟ್ಯಾಳ ಹಾಗೂ ಬಬಲೇಶ್ವರ ತಾಲೂಕಿನ ದಾಶ್ಯಾಳ, ಸಾರವಾಡ, ಹೊನಗನಹಳ್ಳಿ ಮತ್ತು ತೊನಶ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದರು.ಮಳೆಯಿಂದ ಹಾನಿಯಾಗಿರುವ ಬೆಳೆ ಸರಿಯಾಗಿ ನಿಯಮಾನುಸಾರ ಸಮೀಕ್ಷೆ ಕೈಗೊಳ್ಳಲು ತಿಳಿಸಿದರು. ಸಮೀಕ್ಷಾ ಕಾರ್ಯಕ್ಕೆ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆಗಳ ಜೊತೆಗೆ ಹಾನಿಗೊಳಗಾದ ಮನೆಗಳ ಕುರಿತು ಹಾಗೂ ಇತರೆ ಅಂಶಗಳ ಕುರಿತು ಸಹ ಸಮೀಕ್ಷೆ ನಡೆಸಲು ಸೂಚನೆ ನೀಡಿದರು.ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ , ತಿಕೋಟಾ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಬಬಲೇಶ್ವರ ಕಾರ್ಯನಿರ್ವಾಹಕ ಅಧಿಕಾರಿ ವ್ಹಿ.ಎಸ್.ಹಿರೇಮಠ ಸೇರಿದಂತೆ ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಳೆ ಹಾನಿ ಪ್ರದೇಶಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ನಡೆಸಿ, ವಾರ್ಡ್ ೬ರ ಕೆ.ಸಿ.ನಗರ, ಡಿಸಿಸಿ ಬ್ಯಾಂಕ್ ಹತ್ತಿರ ಬಬಲೇಶ್ವರ ನಾಕಾ ಹತ್ತಿರದ ಬಾಗವಾನ ಕಾಲೋನಿ, ಪ್ರೇಮ ನಗರ, ನವಭಾಗ ರಸ್ತೆಯ ಕೋಟೆ ಗೋಡೆ ಹತ್ತಿರ, ಜುಮ್ಮಾ ಮಸಜೀದ್, ವಾರ್ಡ್ ನಂ೧೪ ರ ಅಪ್ಸರಾ ಥೇಟರ್ ಹತ್ತಿರ ಸಂಚರಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭ ಜಿಲ್ಲಾಧಿಕಾರಿ ಟಿ.ಭೂಬಾಲನ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸಿ.ಬಿ.ಚಿಕ್ಕಲಕಿ ಸೇರಿದಂತೆ ಅಧಿಕಾರಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಳೆನೀರು ನಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ಕಸ, ತಾಜ್ಯಗಳನ್ನು ತೆಗೆದು ರಾಜಕಾಲುವೆಗಳನ್ನು ಸ್ವಚ್ಚವಾಗಿಡಬೇಕು. ಒತ್ತುವರಿಯಾಗಿರುವ ರಾಜಕಾಲುವೆ, ಅತಿಕ್ರಮಣವನ್ನು ೧೫ ದಿನಗಳ ಕಾಲಮಿತಿಯಲ್ಲಿ ತೆರವುಗೊಳಿಸಲು ಕ್ರಮವಹಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಆದ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚಿಸಿದರು.ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆಹಾನಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರನ್ನೊಳಗೊಂಡ ಕಾರ್ಯಪಡೆ ರಚಿಸಿಕೊಂಡು ಆಗಾಗ ಸಭೆ ನಡೆಸಬೇಕು ಎಂದು ಹೇಳಿದರು.ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.ಮಳೆಯಿಂದ ಹಾನಿಯಾದ ರಸ್ತೆ, ವಿದ್ಯುತ್ ಕಂಬ ಮಾಹಿತಿ ಸಂಗ್ರಹಿಸುವಂತೆಯೂ, ಮಳೆ ಸಂದರ್ಭದಲ್ಲಿ ಯಾವುದೇ ಅಪಾಯಗಳು ಉಂಟಾಗದಂತೆ ವಿದ್ಯುತ್ ಕಡಿತಗೊಳಿಸಬೇಕು ಎಂದು ಹೇಳಿದರು.ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ,…
ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಸಮೀಪದ ಬಿರಾಳ ಹಿಸ್ಸಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ 4 ದಿನ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀಶೈಲ ಪೂಜಾರಿ, ಪ್ರಮುಖರಾದ ಗುರಣ್ಣಗೌಡ ಪೊಲೀಸ್ ಪಾಟೀಲ, SDMC ಅಧ್ಯಕರಾದ ಶಿವಶರಣಪ್ಪ ಇಂಗಳಗಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಯಡ್ರಾಮಿ ತಾಲೂಕಾ ಅಧ್ಯಕ್ಷ ಹುಸೇನ ಭಾಷಾ ನೀರಲಗಿ, ಗುಂಡಪ್ಪ ಹಳ್ಳದಮನಿ, ಮರಲಿಂಗಪ್ಪ ಗುಡ್ಡ್ಯಾಳ, ಶಿಕ್ಷಕಿಯರಾದ ಸುನೀತಾ ಅಂಬೂರೆ, ಶಾಲಾ ಅಡುಗೆ ಸಿಬ್ಬಂದಿ ಹಾಗೂ ಮಳ್ಳಿ ಸಿ ಆರ್ ಪಿ ಪ್ರಶಾಂತ ಕುನ್ನೂರ ಇತರರಿದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು ಅಡಿಯಲ್ಲಿ ಜರುಗಿದ “ಡಿಜಿ ಇಮೇಜ್ ೨೦೨೪”ರ ವಸ್ತು ಪ್ರದರ್ಶನದಲ್ಲಿ ದೇವರಹಿಪ್ಪರಗಿ ತಾಲ್ಲೂಕಿನ ಉತ್ತಮ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಸುನೀಲ ಚವ್ಹಾಣ ಇವರನ್ನು “ಛಾಯಾಶ್ರೀ” ಗೌರವ ನೀಡಿ ಸನ್ಮಾನಿಸಲಾಯಿತು.
ದೇವರಹಿಪ್ಪರಗಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಥಮ ಸಭೆ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿತು.ಸಭೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಕುರಿತು ಚರ್ಚೆ ಆರಂಭಗೊಂಡಿತು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಸಾಹೇಬಗೌಡ ಬಿರಾದಾರ ಹಾಗೂ ಉಪಾಧ್ಯಕ್ಷ ರೆಹಮಾನ ಕಣಕಾಲ ಮಾತನಾಡಿ, ಹಲವಾರು ಕಡೆ ಗೃಹಲಕ್ಷ್ಮಿ ಯೋಜನೆಯ ಹಣ ಸೂಕ್ತ ರೀತಿಯಲ್ಲಿ ಜಮೆಯಾಗುತ್ತಿಲ್ಲ. ಶಕ್ತಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಬಸ್ಸುಗಳನ್ನು ಸಿಂದಗಿ ದೇವರಹಿಪ್ಪರಗಿ ವಿಜಯಪುರ ಮಾರ್ಗಗಳ ಮಧ್ಯ ಓಡಿಸಬೇಕು. ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಮಾಡುವವರು ಹಣ ಪಡೆದು ಪಾವತಿ ಮಾಡುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿ ಬಯೋಮೆಟ್ರಿಕ್ ಮಾಡಿಕೊಂಡು ನಂತರ ಪಡಿತರ ವಿತರಣೆ ಮಾಡುತ್ತಿದ್ದಾರೆ. ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಯುವ ನಿಧಿ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಜಾಲಗೇರಿಯ ಹನುಮಾನ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಇನ್ನರ್ ವ್ಹೀಲ್ ಕ್ಲಬ್ ಆಪ್ ವಿಜಯಪುರ ವುಯ್ ಕೇರ್ ( Inner wheel of Bijapur we care) ಸಂಸ್ಥೆಯಿಂದ ಮಕ್ಕಳಿಗೆ ಕಬ್ಬಿಣದ ಡೆಸ್ಕ, ಕುಡಿಯುವ ನೀರಿನ ಪಿಲ್ಟರ್,ನೋಟಬುಕ್, ಪೆನ್ನು ಹಾಗೂ ಕ್ರೀಡಾ ಸಾಮಗ್ರಿ ಸೇರಿ ರೂ.10 ಸಾವಿರ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆಯಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥೆಯ ಡಾ. ರೇಣುಕಾ ಪಾಟೀಲ್, ಡಾ. ಅಶ್ವೀನಿ ಹಿರೇಮಠ, ಡಾ. ಮಹಾನಂದಾ ಚಂದರಗಿ, ಡಾ.ರಾಜಶ್ರೀ ಅಕ್ಕಿ, ಡಾ.ನಳಿನಿ ಬಾಗಲಕೋಟಕರ ಅವರು ಶಾಲಾ ಮಕ್ಕಳಿಗೆ ಉತ್ತಮ ಆರೋಗ್ಯದ ಕುರಿತು ಸಲಹೆ ನೀಡಿದರು. ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಒಳ್ಳೆಯ ಆಹಾರ ಸೇವನೆ ಮಾಡಬೇಕು. ಸ್ವಚ್ಚತೆಯಿಂದ ಇರಬೇಕು. ಮೊಬೈಲಗಳಿಂದ ಮಕ್ಕಳು ದೂರವಿರಬೇಕು ಎಂದು ಸಲಹೆ ನೀಡಿದರು.ಸಿಆರ್ಪಿ ಶರಣಬಸಪ್ಪ ರೆಡ್ಡಿ, ಆರ್.ಡಿ.ಶಿಂಧೆ, ವಿ.ಎನ್.ಕಪಟಕರ, ಶಾಲಾ ಮಕ್ಕಳು ಇದ್ದರು.
