ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಜಾಲಗೇರಿಯ ಹನುಮಾನ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಇನ್ನರ್ ವ್ಹೀಲ್ ಕ್ಲಬ್ ಆಪ್ ವಿಜಯಪುರ ವುಯ್ ಕೇರ್ ( Inner wheel of Bijapur we care) ಸಂಸ್ಥೆಯಿಂದ ಮಕ್ಕಳಿಗೆ ಕಬ್ಬಿಣದ ಡೆಸ್ಕ, ಕುಡಿಯುವ ನೀರಿನ ಪಿಲ್ಟರ್,ನೋಟಬುಕ್, ಪೆನ್ನು ಹಾಗೂ ಕ್ರೀಡಾ ಸಾಮಗ್ರಿ ಸೇರಿ ರೂ.10 ಸಾವಿರ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಡಾ. ರೇಣುಕಾ ಪಾಟೀಲ್, ಡಾ. ಅಶ್ವೀನಿ ಹಿರೇಮಠ, ಡಾ. ಮಹಾನಂದಾ ಚಂದರಗಿ, ಡಾ.ರಾಜಶ್ರೀ ಅಕ್ಕಿ, ಡಾ.ನಳಿನಿ ಬಾಗಲಕೋಟಕರ ಅವರು ಶಾಲಾ ಮಕ್ಕಳಿಗೆ ಉತ್ತಮ ಆರೋಗ್ಯದ ಕುರಿತು ಸಲಹೆ ನೀಡಿದರು. ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಒಳ್ಳೆಯ ಆಹಾರ ಸೇವನೆ ಮಾಡಬೇಕು. ಸ್ವಚ್ಚತೆಯಿಂದ ಇರಬೇಕು. ಮೊಬೈಲಗಳಿಂದ ಮಕ್ಕಳು ದೂರವಿರಬೇಕು ಎಂದು ಸಲಹೆ ನೀಡಿದರು.
ಸಿಆರ್ಪಿ ಶರಣಬಸಪ್ಪ ರೆಡ್ಡಿ, ಆರ್.ಡಿ.ಶಿಂಧೆ, ವಿ.ಎನ್.ಕಪಟಕರ, ಶಾಲಾ ಮಕ್ಕಳು ಇದ್ದರು.

