ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ವಿಜಯಪುರದಲ್ಲಿ ಸೆ.29 ಭಾನುವಾರದಂದು ಜರುಗುವ ಗ್ರಾಮ ಆಡಳಿತ ಅಧಿಕಾರಿ, ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವ ನಿಡಗುಂದಿ ತಾಲೂಕಿನ ಪರೀಕ್ಷಾರ್ಥಿಗಳಿಗೆ ವಿಜಯಪುರಕ್ಕೆ ಹೋಗಲು ತೊಂದರೆಯಾಗದಂತೆ ಪಟ್ಟಣದ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ಸುಗಳನ್ನು ಒದಗಿಸಬೇಕೆಂದು ಆಗ್ರಹಿಸಿ ನವ ನಿಡಗುಂದಿ ಜನಾಭಿಪ್ರಾಯ ವೇದಿಕೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಡಗುಂದಿ ನಿಯಂತ್ರಕ ಎಚ್.ಕೆ.ಕಟ್ಟಿಮನಿ ಅವರಿಗೆ ಬುದವಾರ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಎಸ್ ಎಸ್ ಕೋತಿನ, ವಿಜಯ್ ಕಟ್ಟಿಮಠ, ಬಸಲಿಂಗಪ್ಪ ಕುಂಬಾರ, ವಿಜಯ್ ಕುಮಾರ ಚಿನಿವಾಲರ, ಸಂತೋಷ್ ಕಡಿ, ಆನಂದ್ ಬೋವಿವಡ್ಡರ, ಸಿದ್ದು ಚಲವಾದಿ, ಹನುಮಂತ್ ಭಜಂತ್ರಿ, ಗಂಗಾರಾಮ್ ಬಂಡಿವಡ್ಡರ, ಮುತ್ತುರಾಜ್ ಚಲವಾದಿ, ಶಾಂತಪ್ಪ ಹಡಪದ ಸೇರಿದಂತೆ ಅನೇಕರಿದ್ದರು.

