ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸೆ.19 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಗಣೇಶ ವಿಸರ್ಜನೆಯ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಜರತ ಟಿಪ್ಪುಸುಲ್ತಾನ ಶಹೀದ ರವರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ಮುಸ್ಲಿಂ ಹಾಗೂ ದಲಿತ ಮುಖಂಡರು ಬುಧವಾರ ಪೊಲೀಸ್ ಠಾಣೆಗೆ ತೆರಳಿ ಪಿಎಸ್ಐ ಅಮೋಜ್ ಕಾಂಬ್ಳೆ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಿದರು.
ಪದೇ ಪದೇ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೀಯಾಳಿಸುವುದು, ಪ್ರಚೋದನಕಾರಿ ಭಾಷಣ ಮಾಡಿ, ಕೋಮು ಸಾಮರಸ್ಯಕ್ಕೆ ದಕ್ಕೆ ತರುವ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ, ವಿಫಲವಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರ್ತನೆ ಖಂಡನೀಯ ಎಂದವರು, ಕೂಡಲೇ ಅವರ ಮೇಲೆ ದೂರ ದಾಖಲಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಇದೇ ವೇಳೆ ಪ್ರಮುಖರಾದ ಅಬ್ದುಲ್ ರಜಾಕ್ ಸಾಸನೂರ್, ನಿಂಗಣ್ಣ ಗೋನಾಳ, ಹಮೀದ್ ಹುಣಚ್ಯಾಳ, ಬಂದೇನವಾಜ್ ನಾಲತವಾಡ, ಇಲಿಯಾಸ್ ಪಟೇಲ್ ಬಳಗಾನೂರ, ಬಾಬಾ ತಾಳಿಕೋಟಿ, ಅಲ್ಲಾಪಟೇಲ್ ಕಾಚೂರ್, ಸದ್ದಾಂ ಪಟ್ಟೆದಾರ, ಫಯಾಜ್, ರೌಫ್ ಸಾಸನೂರ್, ಆಸೀಫ್ ಕನ್ನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

