ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಸಮೀಪದ ಬಿರಾಳ ಹಿಸ್ಸಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ 4 ದಿನ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀಶೈಲ ಪೂಜಾರಿ, ಪ್ರಮುಖರಾದ ಗುರಣ್ಣಗೌಡ ಪೊಲೀಸ್ ಪಾಟೀಲ, SDMC ಅಧ್ಯಕರಾದ ಶಿವಶರಣಪ್ಪ ಇಂಗಳಗಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಯಡ್ರಾಮಿ ತಾಲೂಕಾ ಅಧ್ಯಕ್ಷ ಹುಸೇನ ಭಾಷಾ ನೀರಲಗಿ, ಗುಂಡಪ್ಪ ಹಳ್ಳದಮನಿ, ಮರಲಿಂಗಪ್ಪ ಗುಡ್ಡ್ಯಾಳ, ಶಿಕ್ಷಕಿಯರಾದ ಸುನೀತಾ ಅಂಬೂರೆ, ಶಾಲಾ ಅಡುಗೆ ಸಿಬ್ಬಂದಿ ಹಾಗೂ ಮಳ್ಳಿ ಸಿ ಆರ್ ಪಿ ಪ್ರಶಾಂತ ಕುನ್ನೂರ ಇತರರಿದ್ದರು.

