Author: editor.udayarashmi@gmail.com

ಸಿದ್ದರಾಮಯ್ಯ ಕಲ್ಲುಬಂಡೆಯಂತೆ ಗಟ್ಟಿ | ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ | ಸಚಿವ ಪರಮೇಶ್ವರ್ ಸ್ಪಷ್ಟನೆ ಬೆಂಗಳೂರು: ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ಅಂತಹ ಮಾತುಕತೆಯಾಗಲೀ, ಒತ್ತಡವಾಗಲೀ ಇಲ್ಲ. ಪಕ್ಷದ ಹೈಕಮಾಂಡ್ ಕೂಡ ಸಿಎಂಗೆ ಬೆಂಬಲ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು.ಕೆಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರೆಲ್ಲ ಸಿಎಂ ಜೊತೆಗಿದ್ದಾರೆ ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ. ಕಾನೂನು ಹೋರಾಟಕ್ಕೆ ಅವಕಾಶವಿರುವುದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಯಾವುದೇ ಕಡತ ಅಥವಾ ದಾಖಲೆಗಳಿಗೆ ಸಹಿ ಹಾಕಿಲ್ಲ, ಯಾವುದೇ ಅಧಿಕಾರವನ್ನೂ ದುರುಪಯೋಗಪಡಿಸಿಕೊಂಡಿಲ್ಲ. ಇದನ್ನು ಆಧರಿಸಿಯೇ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶ ನಮ್ಮ ಪರವಾಗಿ ಬಂದಿಲ್ಲ. ನಾವು ಆದೇಶವನ್ನು ಗೌರವಿಸುತ್ತೇವೆ. ಆದರೆ, ನಮಗೆ ನ್ಯಾಯ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಇಲ್ಲಿನ ತಹಶೀಲ್ದಾರ ಕಚೇರಿಯ ಎದುರು ಅನಿರ್ದಿಷ್ಠಾವಧಿ ಮುಷ್ಕರವನ್ನು ಪ್ರಾರಂಭಿಸಿದರು.ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದು ಅವುಗಳ ಜವಾಬ್ದಾರಿಯನ್ನು ನಮ್ಮ ಮೇಲೆ ಹೇರುತ್ತವೆ. ಆದರೆ ಅವುಗಳಿಗೆ ಬೇಕಾಗಿರುವ ಕನಿಷ್ಟ ಮೂಲಭೂತ ಸೌಕರ್ಯಗಳನ್ನೂ ಇಲ್ಲಿಯವರೆಗೆ ಯಾವ ಸರ್ಕಾರಗಳೂ ಮಾಡಿಲ್ಲ. ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಹುಟ್ಟಿದಾಗಿನಿಂದಲೂ ನಮ್ಮ ಬಗ್ಗೆ ಯಾವ ಸರ್ಕಾರಗಳೂ ಯೋಚಿಸಿಲ್ಲ. ಇಲಾಖೆಯಲ್ಲಿ ಮತ್ತು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುವ ಬದಲಾವಣೆಗಳಿಗೆ ನಮ್ಮ ಬೆಂಬಲ ಇದೆ. ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇಸಲು ಮುಂದಾಗಬೇಕು. ಕಡೆಗಣಿಸಿದಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ದಿನನಿತ್ಯ ನಾವು ಕುಟುಂಬದ ಜೊತೆ ಒಂದು ನಿಮಿಷದ ನೆಮ್ಮದಿಯ ಬದುಕನ್ನೂ ಕಳೆಯುವಷ್ಟು ಸಮಯ ನಮಗಿಲ್ಲ. ಅಷ್ಟೊಂದು ಒತ್ತಡ ನಮ್ಮಮೇಲೆ…

Read More

ಚಡಚಣ: ತಾಲೂಕಿನ ನಿವರಗಿ ಗ್ರಾಮದ ಶಿಕ್ಷಕರಾದ ಧರೇಪ್ಪ. ಅಡವೇಪ್ಪ. ಪೂಜಾರಿ ಅವರು ಲೋಣಿ(ಬಿ.ಕೆ) ಗ್ರಾಮದ ಶ್ರೀ ರುದ್ರೇಶ್ವರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಭಾಗದ ಶಿಕ್ಷಕರಾಗಿ ಕಳೆದ ಐದು ವರ್ಷಗಳಿಂದ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿರುವದನ್ನು ಗುರುತಿಸಿ, ಇವರನ್ನು ‘ಚಡಚಣ ತಾಲೂಕು ಮಟ್ಟದ ಶಿಕ್ಷಕರತ್ನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.ಚಡಚಣ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇವರ ವತಿಯಿಂದ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೆ.29 ರ ಭಾನುವಾರದಂದು ಜರುಗುವ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ’ ಸಮಾರಂಭದಲ್ಲಿ ‘ಶಿಕ್ಷಕ ಧರೇಪ್ಪ ಪೂಜಾರಿ’ ಇವರನ್ನು ‘ಶಿಕ್ಷಕ ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಿ, ಗೌರವಿಸಲಾಗುವುದು ಎಂದು ಚಡಚಣ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಂಕರ ಹಾವಿನಾಳ ತಿಳಿಸಿದ್ದಾರೆ.

Read More

ಹೊರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಾಂಗೊಳಿಸಲು ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಖಾಯಂಮತಿಗಾಗಿ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಬೇಕೆಂದು ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷö್ಮಣ ಹಂದ್ರಾಳ ಮಾತನಾಡಿ, ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳಲ್ಲಿ. ಗುತ್ತಿಗೆ, ಹೊರ ಗುತ್ತಿಗೆ, ಆಧಾರಿತ ನೇರ ಪಾವತಿ ಪೌರಕಾರ್ಮಿಕರು, ಲೋಡರ್, ಕಸದ ಮತ್ತು ಇತರ ವಾಹನ ಚಾಲಕರು, ಸಹಾಯಕರು, ಕ್ಲಿನರ್ ಗಳು, ಸ್ಯಾನಿಟರಿ ಸುಪರವೈಜರ್‌ಗಳು, ಪಾರ್ಕ, ಸ್ಮಶಾನ, ಯು.ಜಿ.ಡಿ, ಘನತಾಜ್ಯ ವೀಲೆವಾರಿ, ಯು.ಜಿ.ಡಿ. ನೀರು ಸಂಸ್ಕರಣಾ ಕಾರ್ಮಿಕರು, ಕಳೆದ ೧೫-೨೦ ವರ್ಷಗಳಿಂದ ನಿರಂತರವಾಗಿ ನಾಗರಿಕರಿಗೆ ಅಗತ್ಯವಾದ ಸ್ವಚ್ಚತೆ ಯು.ಜಿ.ಡಿ. ನಿರ್ವಾಹಣೆ ವಿಭಾಗದಲ್ಲಿ ನಿರಂತರ ದುಡಿಯುತ್ತಿರುವ ಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಮುನ್ಸಿಪಲ್ ಕಾರ್ಮಿಕರು ಕಾಯಂಗೊಳಿಸುವ ನೇರ ಪಾವತಿ ಅಡಿಯಲ್ಲಿ ದುಡಿಯುತ್ತಿರುವ ೨೪…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದರಬಾರ ಸಂಸ್ಥೆಯ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು, ಡಿ.ಕೆ.ಎಸ್ ಎಜುಕೇಷನ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ನಗರದ ಜೆ.ಎಂ ರಸ್ತೆಯಲ್ಲಿರುವ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ ೪ರಂದು ಉದ್ಯೋಗಮೇಳ ಆಯೋಜಿಸಲಾಗಿದೆ.ವಿವಿಧ ಎಂಎನ್‌ಸಿ ಕಂಪನಿಗಳು ಹಾಗೂ ಸ್ಥಳೀಯ ಖಾಸಗಿ ಕಂಪನಿಗಳ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಆಸಕ್ತರು ತಮ್ಮ ಶಾಲಾ ದಾಖಲಾತಿಗಳ ಸಹಿತ ಕನಿಷ್ಠ ೫ ಸೆಟ್ ಬಯೋಡೇಟಾ ಮತ್ತು ಆಧಾರ ಕಾರ್ಡನೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗೆ ಖುದ್ದಾಗಿ ಅಥವಾ ಪೋನ್ ಮೂಲಕ(ಮೊ.೯೪೮೦೩೧೦೮೩೭, ೯೯೪೫೦೦೦೭೯೩) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣ ಸ್ವಚ್ಚತೆ ಕಾಪಾಡಿ ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಮಹಾನಗರಪಾಲಿಕೆ ಉಪ ಮೇಯರ್ ದಿನೇಶ್ ಹಳ್ಳಿ ಹೇಳಿದರು.ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಸಂದೇಶದಡಿಯಲ್ಲಿ ಸೆ.೨೭ರ ನಡೆಯುವ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ವಿಜಯಪುರ ಹೊಟೇಲ್ ಅಸೋಸಿಯೇಷನ್, ಸಜ್ಜನ ಪದವಿಪೂರ್ವ ಮಹಾವಿದ್ಯಾಲಯ, ಪೋಟೋಗ್ರಾಪರ್ ಅಸೋಶಿಯೇಷನ್ ಹಾಗೂ ಮ್ಯಾನ್ಯುಮೆಂಟಲ್ ಹೇರಿಟೆಜ್ ಸಿಟಿ ಅವರ ಸಹಯೋಗದಲ್ಲಿ ಗುರುವಾರ ಗೋಳಗುಮ್ಮಟದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ, ಇಗ್ನೋ ಪ್ರಾದೇಶಿಕ ನಿರ್ದೇಶಕರು, ಗೋಳಗುಮ್ಮಟದ ಸಹಾಯಕ ಸಂರಕ್ಷಾಣಾಧಿಕಾರಿ ವಿಜಯಕುಮಾರ, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರು, ರಮೇಶ ಚವ್ಹಾಣ, ಜಗದೇವಿ ಕೆಂಬಾವಿ, ಬುಡ್ಡಾಸಾಬ್ ಕುಡುಪಲಿ, ಅನಿಲಕುಮಾರ ಬಣಜಿಗೇರ ಸೇರಿದಂತೆ ಪ್ರವಾಸಿ ಮಿತ್ರ, ಎಎಸ್‌ಐ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಬಸನಗೌಡ ಮಾಲಿ ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ರೂಪಾಬಾಯಿ ವಾಲು ಚವ್ಹಾಣ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಶಶಿಕಲಾ ಪಾದಗಟ್ಟಿ ಘೋಷಣೆ ಮಾಡಿದರು.ಈ ಹಿಂದಿನ ಅಧ್ಯಕ್ಷೆ ರಾಜಿನಾಮೆ ನೀಡಿದ ಪ್ರಯುಕ್ತ ಗುರುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಮಾಲಿ ಪಾಟೀಲ ಮತ್ತು ಕಂಟೆಪ್ಪ ಪೂಜಾರಿ ಚೊಣ್ಣಿ, ಈ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರೆ ಆಗಿದ್ದರಿಂದ ಬಹಳ ತುರುಸಿನ ಜಿದ್ದಾ ಜಿದ್ದಿ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಒಂದೇ ಪಕ್ಷದ ಎರಡು ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ಒಟ್ಟು ಚಲಾವಣೆಗೊಂಡ 19 ಮತಗಳು ಪೈಕಿ ಬಸನಗೌಡ ಮಾಲಿ ಪಾಟೀಲ ಹನ್ನೊಂದು ಮತಗಳನ್ನು ಪಡೆದರೆ, ಕಂಟೆಪ್ಪ ಪೂಜಾರಿ ಚೋಣ್ಣಿ ಎಂಟು ಮತಗಳನ್ನು ಪಡೆದರು. ಮೂರು ಮತಗಳ ಅಂತರದಿಂದ ಬಸನಗೌಡ ಪಾಟೀಲ ಜಯ ಗಳಿಸಿದರು.ಪರಿಶಿಷ್ಟ ಜಾತಿಗೆ (ಮಹಿಳೆ) ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ರೂಪಾಬಾಯಿ ಚೌವ್ಹಾಣ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಹಲವು ಒತ್ತಡಗಳ ಮಧ್ಯೆ ಸಾರ್ವಜನಿಕರ ಸೇವೆ ಮಾಡುವದರಿಂದ ನೌಕರರ ನೆಮ್ಮದಿ ಹಾಳಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹೇಳಿದರು.ಬಬಲೇಶ್ವರ ಪಟ್ಟಣದ ತಹಶಿಲ್ದಾರ ಕಛೇರಿ ಎದುರು ಗುರುವಾರ ತಾಲ್ಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.ಕಡಿಮೆ ಸೌಲಭ್ಯ ಒದಗಿಸಿ ಹೆಚ್ಚಿನ ಸೇವೆ ಮಾಡುವುದಾಗಿದೆ. ಎಲ್ಲ ಸೇವೆಗಳು ಆನಲೈನದಲ್ಲಿ ಮಾಡಬೇಕು. ಹಳ್ಳಿಗಳಲ್ಲಿ ನೆಟ್ ಸಮಸ್ಯೆಯಾಗುತ್ತದೆ. ಸೇವೆ ಮಾಡಲು ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಗಮನಕ್ಕೂ ಬಂದಿದ್ದು, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನೀವು ಹಮ್ಮಿಕೊಳ್ಳುವ ತಾಲ್ಲೂಕ, ಜಿಲ್ಲಾ ಹಾಗೂ ರಾಜ್ಯ ಹಂತದ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಿಮ್ಮ ಜೊತೆ ಇರುತ್ತೇವೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ನೌಕರ ಸಂಘದ ಖಜಾಂಚಿ ಜುಬೇರ ಕೆರೂರ, ಜಿಲ್ಲಾ ಕಂದಾಯ ಇಲಾಖಾ ನೌಕರ…

Read More

ಇಂಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದಾದ್ಯಂತ ರಾಜ್ಯ ಸಂಘದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನಲ್ಲಿಯೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಗ್ರಾಮ ಆಡಳಿತ ತಾಲೂಕು ಘಟಕದ ಅಧ್ಯಕ್ಷ ಯಲ್ಲು ಪೂಜಾರಿ ತಿಳಿಸಿದ್ದಾರೆ.ಈ ವೇಳೆ ಮಾತನಾಡಿದ ಮುಖಂಡರು, ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಾದ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು, ಕಚೇರಿ, ಗುಣಮಟ್ಟದ ಮೊಬೈಲ್, ಡೇಟಾ, ಸಿಮ್ ನೀಡಬೇಕು. ಪ್ರಿಂಟರ್ ಹಾಗೂ ಸ್ಕ್ಯಾನರ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್ ಬುಕ್ ಒದಗಿಸಬೇಕು. ಸರಕಾರಿ ರಜಾ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಅಂತರ ಜಿಲ್ಲಾ ವರ್ಗಾವಣೆ ನಿಯಮ ೧೬ (ಎ) ಉಪಖಂಡ (೨) ಮರುಸೇರ್ಪಡೆ ಮಾಡಬೇಕು, ಪತಿ-ಪತ್ನಿ ವರ್ಗಾವಣೆ…

Read More

ಸಾಧಕ ವಿದ್ಯಾರ್ಥಿಗಳಿಗೆ ಏಕಲವ್ಯ ಸ್ಕೆಟಿಂಗ್ ಅಕಾಡಮಿ ವತಿಯಿಂದ ಗೌರವ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಛಲ ಇರುವವರು ಖಂಡಿತ ಯಶಸ್ಸು ಕಾಣಲು ಸಾಧ್ಯ ಎಂದು ಏಕಲವ್ಯ ಸ್ಕೆಟಿಂಗ್ ಅಕಾಡೆಮಿಯ ಸಂಸ್ಥಾಪಕ ಶಿವುಕುಮಾರ ಶಾರದಳ್ಳಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದ ಎದುರು ಅಕಾಡೆಮಿ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ಕ್ರೀಡೆಯಾದರೂ ಸಾಕಷ್ಟು ಅನುಭವ ಪಡೆಯಬೇಕು. ಅನುಭವ ಹೆಚ್ಚಾದಂತೆ ಕ್ರೀಡೆಯಲ್ಲಿ ಗೆಲುವು ಸಾಧಿಸುವ ತಂತ್ರಗಳು ತಿಳಿಯುತ್ತವೆ. ಬಳಿಕ ಯಶಸ್ಸಿನ ಹಾದಿ ಸುಲಭವಾಗಿರುತ್ತದೆ. ಆದರೆ ಕ್ರೀಡೆ ಕಲಿತ ಬಳಿಕವೇ ಸ್ಪರ್ದೆಯಲ್ಲಿ ಪಾಲ್ಗೊಂಡು ಗೆಲ್ಲಲಿಲ್ಲ ಎಂದು ಕೊರಗಬಾರದು. ನಿರಂತರ ಶ್ರದ್ಧೆ ಹೊಂದಿರಬೇಕು ಎಂದರು.ಕಾರ್ಯಕ್ರಮದಲ್ಲಿ ಚೆಸ್ ಆಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪೂರ್ತಿ ಹರನಾಳ, ಭರತನಾಟ್ಯ ಸ್ಪರ್ದೆಯಲ್ಲಿ ಭಾಗಿಯಾಗಿದ್ದ ಸಿಂಧು ಅನ್ನಗೌನಿ ಮತ್ತು ರನ್ವಿತ ಅನ್ನಗೌನಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಸುನೀಲ ಹವಾಲ್ದಸಾರ, ಬಸವರಾಜ ನಾಗೂರ, ರುದ್ರು ಮುರಾಳ, ರಿಯಾಜ ನಾಯ್ಕೋಡಿ, ಗುರು ಡಮನಾಳ ಸೇರಿದಂತೆ ಮತ್ತೀತರರು ಇದ್ದರು.

Read More