ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದರಬಾರ ಸಂಸ್ಥೆಯ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು, ಡಿ.ಕೆ.ಎಸ್ ಎಜುಕೇಷನ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ನಗರದ ಜೆ.ಎಂ ರಸ್ತೆಯಲ್ಲಿರುವ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ ೪ರಂದು ಉದ್ಯೋಗಮೇಳ ಆಯೋಜಿಸಲಾಗಿದೆ.
ವಿವಿಧ ಎಂಎನ್‌ಸಿ ಕಂಪನಿಗಳು ಹಾಗೂ ಸ್ಥಳೀಯ ಖಾಸಗಿ ಕಂಪನಿಗಳ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಆಸಕ್ತರು ತಮ್ಮ ಶಾಲಾ ದಾಖಲಾತಿಗಳ ಸಹಿತ ಕನಿಷ್ಠ ೫ ಸೆಟ್ ಬಯೋಡೇಟಾ ಮತ್ತು ಆಧಾರ ಕಾರ್ಡನೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗೆ ಖುದ್ದಾಗಿ ಅಥವಾ ಪೋನ್ ಮೂಲಕ(ಮೊ.೯೪೮೦೩೧೦೮೩೭, ೯೯೪೫೦೦೦೭೯೩) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
