ಚಡಚಣ: ತಾಲೂಕಿನ ನಿವರಗಿ ಗ್ರಾಮದ ಶಿಕ್ಷಕರಾದ ಧರೇಪ್ಪ. ಅಡವೇಪ್ಪ. ಪೂಜಾರಿ ಅವರು ಲೋಣಿ(ಬಿ.ಕೆ) ಗ್ರಾಮದ ಶ್ರೀ ರುದ್ರೇಶ್ವರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಭಾಗದ ಶಿಕ್ಷಕರಾಗಿ ಕಳೆದ ಐದು ವರ್ಷಗಳಿಂದ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿರುವದನ್ನು ಗುರುತಿಸಿ, ಇವರನ್ನು ‘ಚಡಚಣ ತಾಲೂಕು ಮಟ್ಟದ ಶಿಕ್ಷಕರತ್ನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಚಡಚಣ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇವರ ವತಿಯಿಂದ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೆ.29 ರ ಭಾನುವಾರದಂದು ಜರುಗುವ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ’ ಸಮಾರಂಭದಲ್ಲಿ ‘ಶಿಕ್ಷಕ ಧರೇಪ್ಪ ಪೂಜಾರಿ’ ಇವರನ್ನು ‘ಶಿಕ್ಷಕ ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಿ, ಗೌರವಿಸಲಾಗುವುದು ಎಂದು ಚಡಚಣ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಂಕರ ಹಾವಿನಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

