ಸಾಧಕ ವಿದ್ಯಾರ್ಥಿಗಳಿಗೆ ಏಕಲವ್ಯ ಸ್ಕೆಟಿಂಗ್ ಅಕಾಡಮಿ ವತಿಯಿಂದ ಗೌರವ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಛಲ ಇರುವವರು ಖಂಡಿತ ಯಶಸ್ಸು ಕಾಣಲು ಸಾಧ್ಯ ಎಂದು ಏಕಲವ್ಯ ಸ್ಕೆಟಿಂಗ್ ಅಕಾಡೆಮಿಯ ಸಂಸ್ಥಾಪಕ ಶಿವುಕುಮಾರ ಶಾರದಳ್ಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಎದುರು ಅಕಾಡೆಮಿ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕ್ರೀಡೆಯಾದರೂ ಸಾಕಷ್ಟು ಅನುಭವ ಪಡೆಯಬೇಕು. ಅನುಭವ ಹೆಚ್ಚಾದಂತೆ ಕ್ರೀಡೆಯಲ್ಲಿ ಗೆಲುವು ಸಾಧಿಸುವ ತಂತ್ರಗಳು ತಿಳಿಯುತ್ತವೆ. ಬಳಿಕ ಯಶಸ್ಸಿನ ಹಾದಿ ಸುಲಭವಾಗಿರುತ್ತದೆ. ಆದರೆ ಕ್ರೀಡೆ ಕಲಿತ ಬಳಿಕವೇ ಸ್ಪರ್ದೆಯಲ್ಲಿ ಪಾಲ್ಗೊಂಡು ಗೆಲ್ಲಲಿಲ್ಲ ಎಂದು ಕೊರಗಬಾರದು. ನಿರಂತರ ಶ್ರದ್ಧೆ ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಚೆಸ್ ಆಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪೂರ್ತಿ ಹರನಾಳ, ಭರತನಾಟ್ಯ ಸ್ಪರ್ದೆಯಲ್ಲಿ ಭಾಗಿಯಾಗಿದ್ದ ಸಿಂಧು ಅನ್ನಗೌನಿ ಮತ್ತು ರನ್ವಿತ ಅನ್ನಗೌನಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸುನೀಲ ಹವಾಲ್ದಸಾರ, ಬಸವರಾಜ ನಾಗೂರ, ರುದ್ರು ಮುರಾಳ, ರಿಯಾಜ ನಾಯ್ಕೋಡಿ, ಗುರು ಡಮನಾಳ ಸೇರಿದಂತೆ ಮತ್ತೀತರರು ಇದ್ದರು.

