ಹೊರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಾಂಗೊಳಿಸಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ : ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಖಾಯಂಮತಿಗಾಗಿ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಬೇಕೆಂದು ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷö್ಮಣ ಹಂದ್ರಾಳ ಮಾತನಾಡಿ, ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳಲ್ಲಿ. ಗುತ್ತಿಗೆ, ಹೊರ ಗುತ್ತಿಗೆ, ಆಧಾರಿತ ನೇರ ಪಾವತಿ ಪೌರಕಾರ್ಮಿಕರು, ಲೋಡರ್, ಕಸದ ಮತ್ತು ಇತರ ವಾಹನ ಚಾಲಕರು, ಸಹಾಯಕರು, ಕ್ಲಿನರ್ ಗಳು, ಸ್ಯಾನಿಟರಿ ಸುಪರವೈಜರ್‌ಗಳು, ಪಾರ್ಕ, ಸ್ಮಶಾನ, ಯು.ಜಿ.ಡಿ, ಘನತಾಜ್ಯ ವೀಲೆವಾರಿ, ಯು.ಜಿ.ಡಿ. ನೀರು ಸಂಸ್ಕರಣಾ ಕಾರ್ಮಿಕರು, ಕಳೆದ ೧೫-೨೦ ವರ್ಷಗಳಿಂದ ನಿರಂತರವಾಗಿ ನಾಗರಿಕರಿಗೆ ಅಗತ್ಯವಾದ ಸ್ವಚ್ಚತೆ ಯು.ಜಿ.ಡಿ. ನಿರ್ವಾಹಣೆ ವಿಭಾಗದಲ್ಲಿ ನಿರಂತರ ದುಡಿಯುತ್ತಿರುವ ಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಮುನ್ಸಿಪಲ್ ಕಾರ್ಮಿಕರು ಕಾಯಂಗೊಳಿಸುವ ನೇರ ಪಾವತಿ ಅಡಿಯಲ್ಲಿ ದುಡಿಯುತ್ತಿರುವ ೨೪ ಸಾವಿರ ಪೌಕಾರ್ಮಿಕರ ಸೇವಗಳನ್ನ ಮಾತ್ರ ಕಾಯಂಗೊಳಿಸುವ ಪ್ರಕ್ರಿಯನ್ನು ನಡೆಸುತ್ತದೆ. ಇದನ್ನು ಮುನ್ಸಿಪಲ್ ಕಾರ್ಮಿಕರ ಸಂಘ ಸ್ವಾಗತಿಸುತ್ತದೆ. ಆದರೆ ಇತರ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಬಗ್ಗೆ ಯಾವುದೇ ಕ್ರಮ ವಹಿಸಿದೆ ಇರುವದು ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ರಾಜ್ಯ ಸರಕಾರವು ಮುನ್ಸಿಪಾಲಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಆಧಾರಿತ ಪೌರಕಾರ್ಮಿಕರು, ಒಳ ಚಂರಡಿ ಸ್ವಚ್ಚತಾ ಕಾರ್ಮಿಕರು, ಲೋರ‍್ಸ, ಕಸದ ವಾಹನ ಚಾಲಕರು, ಸಹಾಯಕರು, ಸ್ಯಾನಿಟರಿ ಸುಪರವೈಜ್‌ರಗಳು, ಪಾರ್ಕ, ಸ್ಮಶಾನ ಶೌಚಾಲಯಗಳಲ್ಲಿ, ಘನತಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣ ಘಟಕ, ಕಾರ್ಮಿಕರನ್ನ, ಮೇಲ್ವಚಾರಕರು ಎಂಬ ಅಸಬಂಧ ವಿಂಗಡಣೆಯನ್ನು ಕೈ ಬಿಟ್ಟು ಎಲ್ಲಾ ಸ್ವಚ್ಚತಾ ಕಾರ್ಮಿಕರನ್ನ ವಾಹನ ಚಾಲಕರ ಸೇವೆಗಳನ್ನ, ಈ ತಕ್ಷಣದಿಂದ ನೇರ ಪಾವತಿ ಅಡಿಯಲ್ಲಿ ತಂದು ಸಮಾನ ವೇತನ ನೀಡಬೇಕು. ನಂತರದಲ್ಲಿ ಹಂತ ಹಂತವಾಗಿ ಕಾಯಂಗೊಳಿಸಲು ಒತ್ತಾಯಿಸಿ ದಿನಾಂಕ:-೨೬-೦೯-೨೦೨೪ ರಂದು ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರು ಒಟ್ಟಾಗಿ ಸಲ್ಲಿಸಿದ ಮನವಿ ಪತ್ರ. ಈ ಹಕ್ಕೋತಾಯಗಳ ಆಧಾರದಲ್ಲಿ ಸೆ.ರಂದು ಮುನ್ಸಿಪಲ್ ಕಾರ್ಮಿಕರು “ವಿಧಾನ ಸೌಧ ಚಲೋ” ನಡೆಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕ ಮುಖಂಡರಾದ ದಯಾನಂದ ಅಲಿಯಾಬಾದ ಮಾತನಾಡಿ, ಸುಪ್ರೀಂಕೊರ್ಟಿನ ತಿರ್ಮಾನದಂತೆ ಎಲ್ಲಾ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೌಲಭ್ಯ ನೀಡಬೇಕು. ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತಿ/ಮರಣ ಹೊಂದುವ ಮುನ್ಸಿಪಲ್ ಕಾರ್ಮಿಕರ ಅವಲಂಬಿತರಿಗೆ ಉಪಧನ ನೀಡುವ ಸಂಭಂದ ಸ್ಪಷ್ಟವಾದ ಆದೇಶ ಹೊರಡಿಸಬೇಕು. ಇದಕ್ಕೆ ವಿಳಂಬವಾದರೆ ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರು ಅಲ್ಪವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರಕಾರ ಗೃಹಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ನಿವೇಶನಗಳ ನೀಡಬೇಕು. ನೇರ ಪಾವತಿ, ಗುತ್ತಿಗೆ, ದಿನಗೂಲಿ, ಸಮಾನ ವೇತನ ಆಧಾರದಲ್ಲಿ ದುಡಿಯುವ ಮುನ್ಸಿಪಲ್ ಕಾರ್ಮಿಕರು ಸೇವೆಯಲ್ಲಿರುವಾಗಲೆ ಮರಣ ಹೊಂದಿದರೆ ಆ ಕುಟುಂಬದ ಅವಲಂಬಿತರಿಗೆ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮನೋಹರ ಚವ್ಹಾಣ, ರಘುನಾಥ ಪುಕಾಳೆ, ರವಿ ಲೋನಾರೆ, ಪೀರಪ್ಪ ಚಲವಾದಿ, ಅನೀಲ ಮೇಲಿನಮನಿ, ಧನಂಜಯ ನಿಂಬರಗಿ, ದಿಲೀಪ ರಣದೇವಿ, ಯಲ್ಲವ್ವ ಗೊಲ್ಲರ, ಅನೀಲ ತುಪಸುಂದರ, ಅಭೀಷೇಕ ಲೀಮಕರ, ಶಾಂತಾ ಗೊಲ್ಲರ, ಜಯಶ್ರೀ ಲಂಬು, ದಾನಪ್ಪ ಯಡಳ್ಳಿ ಮುಂತಾದವರು ಇದ್ದರು

