Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ನೂತನ ಶ್ರೀ ಮಾರುತೇಶ್ವರ ಹಾಗೂ ನವಗ್ರಹಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಅ.೯ ಮತ್ತು ೧೦ರಂದು ಹಮ್ಮಿಕೊಳ್ಳಲಾಗಿದೆ.೯ರಂದು ಬೆಳಿಗ್ಗೆ ೧೦ಕ್ಕೆ ಗ್ರಾಮದ ಸುಮಂಗಲೆಯರಿಂದ ಕುಂಭ ಮೇಳ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಕುಂಟೋಜಿ ಸಂಸ್ಥಾನ ಹಿರೇಮಠದ ಪ.ಪೂ ಡಾ.ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲ್ಲಿ ದೇವಸ್ಥಾನದ ಆವರಣಕ್ಕೆ ಬರುವದು. ನಂತರ ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯರಿಂದ ಆಶೀರ್ವಚನ ಮದ್ಯಾಹ್ನ ಮಹಾಪ್ರಸಾದ. ಅ೧೦ ರಂದು ಬೆಳಿಗ್ಗೆ ೮ಕ್ಕೆ ರುದ್ರಾಭಿಷೇಕ ಹಾಗೂ ಮಹಾ ಮಂಗಳಾರುತಿಯೊಂದಿಗೆ ಕಾರ್ಯಸಿದ್ಧಿ ಆಂಜನೇಯ ಮತ್ತು ನವಗ್ರಹಗಳ ಗರ್ಭಗುಡಿಯಲ್ಲಿ ಪೀಠಾರೋಹಣ ಮದ್ಯಾಹ್ನ ಮಹಾಪ್ರಸಾದ, ಸಂಜೆ ದಾನಿಗಳಿಗೆ ಸನ್ಮಾನ ಕಾರ್ಯಕ್ರಗಳು ಜರುಗಲಿದ್ದು ಸಾರ್ವಜನಿಕರು ಆಗಮಿಸಿ ಆಂಜನೇಯನ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳ: ಮಹಾರಾಷ್ಟ್ರದ ಗಾಜಾಪುರದಲ್ಲಿ ಜೆಎಸ್‌ಆರ್ ಸಂಘಟನೆಯವರು ಪಾರ್ಥನಾ ಸ್ಥಳವನ್ನು ಜಖಂ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ ಹಾಗೂ ಆಸ್ತಿ ಪಾಸ್ತಿ ನಷ್ಟ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಬಾಗವಾನ ಜಮಾತ್ ವತಿಯಿಂದ ಇಲ್ಲಿನ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಘಟನೆಯಲ್ಲಿ ಮಸೀದಿ ಧ್ವಂಸಗೊಳಿಸಿ, ಕುರಾನ್ ಪ್ರತಿಗಳನ್ನು ಅಗ್ನಿಗಾಹುತಿ ಮಾಡಿ ತಡೆಯಲು ಬಂದ ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದನ್ನು ಖಂಡಿಸುತ್ತೇವೆ. ರಾಜ್ಯ ಸಭೆಯ ಸದಸ್ಯ ಸಂಬಾಜಿರಾವ್ ಛತ್ರಪತಿ ವಿಶಾಲಘಡದಲ್ಲಿ ಯುವಕರನ್ನುದ್ದೇಶಿಸಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರ ಪರಿಣಾಮ ಜೆಎಸ್‌ಆರ್ ಸಂಘಟನೆಯ ಯುವಕರು ಈ ಕೃತ್ಯ ಎಸಗಿದ್ದಾರೆ. ಪ್ರಚೋದನಾತ್ಮಕ ಭಾಷಣ ಮಾಡಿದ್ದ ಸಂಬಾಜಿರಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಹಲ್ಲೆಗೊಳಗಾದ ಮುಸ್ಲಿಂ ಸಮುದಾಯದ ಜನರಿಗೆ ಪುನರ್ವಸತಿ ಮತ್ತು ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.ಮನವಿ ಪತ್ರಕ್ಕೆ ಎಚ್.ಆರ್.ಬಾಗವಾನ, ಡಿ.ಡಿ.ಬಾಗವಾನ,…
ಸಿಂದಗಿ: ಪಟ್ಟಣದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿಜಯಪುರ, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಪಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿನಯ ವಿಶ್ವಕರ್ಮ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ, ಸರ್ಪಳಿ ಗುಂಡು ಎಸೆತದಲ್ಲಿ ದ್ವಿತೀಯ, ಆಕಾಶ ನಾವಿ ೧೦ಸಾವಿರ ಮೀ.ಓಟದಲ್ಲಿ ತೃತೀಯ, ನಡಿಗೆಯಲ್ಲಿ ಪ್ರಥಮ, ೩ಸಾವಿರ ಮೀ. ಓಟದಲ್ಲಿ ಭೀಮಣ್ಣ ತಳವಾರ ದ್ವಿತೀಯ, ಅಸ್ಲಾಂ ಪಟೇಲ ತ್ರಿವಿಧಿ ಜಿಗತದಲ್ಲಿ ತೃತೀಯ, ಪೂಜಾ ಜಾಧವ ತ್ರಿವಿಧಿ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ಯಶೋಧ ಗುಡಿಮನಿ ೩ಸಾವಿರ ಮೀ.ಒಟದಲ್ಲಿ ದ್ವಿತೀಯ, ದಾನೇಶ್ವರಿ ಕಣ್ಣಿ ನಡೆಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ಮಾರ್ಗದರ್ಶಕ ದೈಹಿಕ ಉಪನ್ಯಾಸಕ ಸತೀಶ ಬಸರಕೋಡ ಅವರಿಗೆ ಸಂಸ್ಥೆಯ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ, ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ,…
ಸಿಂದಗಿ: ಭಾರತ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರ. ಹಳ್ಳಿಗಳು ಎಲ್ಲ ಸೌಕರ್ಯಗಳಿಂದ ಅಭಿವೃದ್ಧಿಯಾದಲ್ಲಿ ಮಾತ್ರ ದೇಶ ಸಮೃದ್ಧ ದೇಶವಾಗುತ್ತದೆ. ಆ ನಿಟ್ಟಿನಲ್ಲಿ ಸಿಂದಗಿ ಮತಕ್ಷೇತ್ರದ ಪ್ರತಿ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದುತ್ತಲ್ಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಪಂಚಾಯತ್ ರಾಜ್ಯ ಇಲಾಖೆ ಉಪಯುಭಾಗ ಸಿಂದಗಿ, ೨೦೨೩ -೨೪ ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ ರೂ.೫೦ ಲಕ್ಷ ದಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಯೋಗ ಸಿಂದಗಿ, ೨೦೨೩- ೨೪ನೇ ಸಾಲಿನ ಜೀವ ಜಲ ಮಿಷನ್ ಯೋಜನೆ ಅಡಿಯಲ್ಲಿ ಗುಂಡಗಿ ಗ್ರಾಮದ ಮನೆ ಮನೆ ನಳ ಸಂಪರ್ಕ ಯೋಜನೆಗೆ ರೂ.೧೪೧ ಲಕ್ಷದ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾವೆಲ್ಲ ಆರೋಗ್ಯದಿಂದಿರಲು ಶುದ್ಧ ನೀರು ಅತ್ಯಂತ ಅವಶ್ಯಕ. ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಮನೆ ಮನೆಗೆ ನೀರು ಮತ್ತು ಸಿಸಿ ರಸ್ತೆ…
ಸಿಂದಗಿ: ಪಟ್ಟಣದ ಅಶೋಕ ಚೌಕದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡ ಶ್ರೀ ಸಿದ್ಧಿವಿನಾಯಕ ಮೂರ್ತಿಗೆ ಬೆಳ್ಳಿ ಕವಚಧಾರಣೆ ಹಾಗೂ ಶ್ರೀಸುಬ್ರಮಣ್ಯ ಸ್ವಾಮಿಯವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾನಪದ ಜಾತ್ರೆಯ ಸಮಾರಂಭದಲ್ಲಿ ಮಹೇಶ ಈಳಗೇರ, ಶ್ರೀಶೈಲ ರೆಬಿನಾಳ ಒಳಗೊಂಡಂತೆ ಹಲವರಿಗೆ ಬೆಳ್ಳಿ ಕವಚಕ್ಕೆ ದಾನ ನೀಡಿದ ಸದ್ಭಕ್ತರಿಗೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಣಮಂತ ಸುಣಗಾರ, ಅಶೋಕ ಗಾಯಕವಾಡ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಈ ಪ್ರಶಸ್ತಿ ಇದೆ ಮೊದಲ ಬಾರಿಗೆ ನೀಡುತ್ತಿದ್ದು, ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ.ಬಿರಾದಾರ ಇವರಿಗೆ ಆಯ್ಕೆ ಮಾಡಲಾಗಿದೆ.ಆ.೯ರಂದು ಬೆಳಿಗ್ಗೆ ೧೧ಗಂಟೆಗೆ ಬೆಂಗಳೂರಿನ ಕೆ.ಎಸ್.ಆರ್.ಪಿ ೪ನೇ ಬೆಟಾಲಿಯನ್ ಕೋರಮಂಗಲದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಹಿನ್ನೆಲೆ: ಎನ್.ಎಂ.ಬಿರಾದಾರ ಅವರು ಕಳೆದ ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅನಾಥ, ಬಡ ಮಕ್ಕಳಿಗೆ ಆರ್ಥಿಕ ಸಹಕಾರ ನೀಡುವ ಜೊತೆಗೆ ಉಚಿತ ತರಬೇತಿ ನೀಡಿ ಸಾವಿರಾರು ಬಡ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿ ಸಮಾಜಕ್ಕೆ ಮಾದರಿ ಮತ್ತು ಆದರ್ಶ ವ್ಯಕ್ತಿತ್ವ ಹೊಂದಿದವರೆನಿಸಿದ್ದಾರೆ. ಅಲ್ಲದೇ ಹಾದಿ ತಪ್ಪಿದ್ದ ಅದೆಷ್ಟೋ ಯುವ ಜನಾಂಗ ಇವರ ಸ್ಪೂರ್ತಿದಾಯಕ ಮಾತುಗಳಿಂದ ಬದಲಾವಣೆ ಹೊಂದಿ ಸಮಾಜದ ಉನ್ನತ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎನ್.ಎಂ.ಬಿರಾದಾರ ಇವರ ಈ ಶೈಕ್ಷಣಿಕ ಸೇವೆಯನ್ನು ಗುರುತಿಸಿ…
ಸಿಂದಗಿ: ಸಾಧನೆ ಮಾಡಬೇಕಾದರೆ ತಪಸ್ಸು ಮುಖ್ಯ. ತಪಸ್ಸು ಎಂದರೆ ನಂಬಿಕೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ.ಆರ್.ಆರ್. ಬಿರಾದಾರ ಹೇಳಿದರು.ಪಟ್ಟಣದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸಣ್ಣಪುಟ್ಟ ಗುರಿಗಳು ಉನ್ನತ ಮಟ್ಟದ ಗುರಿಗೆ ದಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಗುರಿಗಳತ್ತ ಹೆಜ್ಜೆ ಹಾಕಬೇಕು. ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಹಲವು ದಾರಿಗಳಿವೆ. ಏನೇ ಅಡೆತಡೆಗಳು ಬಂದರೂ ಸಹ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ನಿಮ್ಮಲ್ಲಿ ಬೇಕಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಇರುತ್ತದೆ ಅದನ್ನು ಉಪನ್ಯಾಸಕರು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ.ಬಿರಾದಾರ ನಿವೃತ್ತ ದೈಹಿಕ ಶಿಕ್ಷಕ ಕೆ.ಎಚ್.ಸೋಮಾಪೂರ, ಎಸ್.ವಾಯ್.ಬೀಳಗಿ,…
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ೨೦೨೪-೨೫ ನೇ ಸಾಲಿನ ೬ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು ಖಾಲಿ ಇರುವ ಸಾಮಾನ್ಯ-೧, ಪರಿಶಿಷ್ಟ ಜಾತಿ-೨, ಪರಿಶಿಷ್ಟ ಪಂಗಡ-೨, ೩ಬಿ-೧ ಮೀಸಲಾತಿ ವರ್ಗದ ೬ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಆಧರಿಸಿ ಅ.೧೩ ಮತ್ತು ೧೪ ರಂದು ಬೆಳಿಗ್ಗೆ ೧೦ಕ್ಕೆ ಕೌನ್ಸಲಿಂಗ್ ಪ್ರಕ್ರೀಯೆ ನಡೆಸುತ್ತಿದ್ದು, ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಅಥವಾ ಪಾಲಕರು ತಮ್ಮ ದಾಖಲಾತಿಗಳೊಂದಿಗೆ ೪ನೇ ಸುತ್ತಿನ ಕೌನ್ಸಲಿಂಗ್ ಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ವಿಜಯಪುರ: ತಾಳಿಕೋಟಿ ತಾಲೂಕಿನ ಆಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು, ಇದರಿಂದ ಈ ಭಾಗದ ನೂರಾರು ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗಲಿದ್ದು, ಈ ಕೆರೆಗಳು ತುಂಬುವುದರಿಂದ ಅಕ್ಕಪಕ್ಕದ ಜಲಮೂಲಗಳು ಅಭಿವೃದ್ಧಿಯಾಗಿ ಬಾವಿ, ಬೊರವೆಲಗಳಲ್ಲಿ ನೀರು ಹೆಚ್ಚಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಆದ್ದರಿಂದ ತುರ್ತಾಗಿ ಈ ೩ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎ.ಇ ಸಂಗಮೇಶ ಮುಂಡಾಸ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿದರು.ಈಗಾಗಲೇ ಹಲವಾರು ಬಾರಿ ತಾಳಿಕೋಟಿ ತಹಶಿಲ್ದಾರರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ, ಆಸ್ಕಿ ಕೆರೆಯಲ್ಲಿಯೇ ಧರಣಿ ಸತ್ಯಾಗ್ರಹ ಮಾಡಲಾಗಿದ್ದು, ತಾಳಿಕೋಟಿ ತಹಶೀಲ್ದಾರರು ಮಧ್ಯ ಪ್ರವೇಶ ಮಾಡಿ ಚುನಾವಣಾ ಸಂದರ್ಭ ಇದೆ, ನಂತರದಲ್ಲಿ ಇಲಾಖೆಯ ಅಧಿಕಾರಿಗಳೊಡನೆ ಸಭೆ ಕರೆದು ನಿರ್ಣಯಿಸೋಣ ಎಂದು ಹೋರಾಟಗಾರರಿಗೆ ಮನವೊಲಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದರಿಂದ ಧರಣಿ ಮುಗಿಸಲಾಗಿತ್ತು. ಈಗ ಶಾಶ್ವತ ಪರಿಹಾರಕ್ಕಾಗಿ…
ವಿಜಯಪುರ ಜಿಲ್ಲಾ “ಮಕ್ಕಳ ಸಾಹಿತ್ಯ ಸಂಗಮ” ತಾಲೂಕು ಘಟಕ ಉದ್ಘಾಟನೆ & ಪದಗ್ರಹಣ ಸಮಾರಂಭ ಇಂಡಿ: ಸಾಹಿತ್ಯದ ಅವಲೋಕನ ಮಾಡುವ ಘಟ್ಟದಲ್ಲಿ ನಾವಿದ್ದು, ಸಮಾಜದ ದಿಕ್ಕು ಬದಲಿಸುವ ಸಾಹಿತ್ಯದ ಸೃಷ್ಟಿ ಮಕ್ಕಳಿಂದ ಆಗಬೇಕೆಂದು ಖ್ಯಾತ ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಹೇಳಿದರು.ಮಂಗಳವಾರ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಮತಿ ರಮಾಬಾಯಿ ಪ್ರೌಢಶಾಲೆಯಲ್ಲಿ ವಿಜಯಪುರ ಜಿಲ್ಲಾ “ಮಕ್ಕಳ ಸಾಹಿತ್ಯ ಸಂಗಮ” ತಾಲೂಕ ಘಟಕ ಉದ್ಘಾಟಿಸಿ ಹಾಗೂ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.ಮೊಬೈಲ್‌ನ ಆವಿಷ್ಕಾರ ಒಂದು ಕುತಂತ್ರವಾಗಿದ್ದು, ಅದು ನೆನಪಿನ ಶಕ್ತಿಯನ್ನು ಕುಂದಿಸಲು ಬಂದಂತಿದೆ. ಆದರೆ ಇದನ್ನು ತಂತ್ರವನ್ನಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯದ ಪ್ರಸಾರ ಮಾಡಬೇಕು. ನಮ್ಮತನವನ್ನು ಪ್ರಕಟಿಸಬೇಕು. ಇದನ್ನು ದಾಖಲಿಸುವ ಕೆಲಸ ಈಗ ಆಗುತ್ತಿರುವುದು ಸ್ವಾಗತಾರ್ಹವಾಗಿದೆ. ಭಾಷಾ ಸೊಗಡನ್ನು ಬಿಂಬಿಸುವ ಚಟುವಟಿಕೆ ನಡೆಯುತ್ತಿದೆ. ಇಂತಹ ಕಾರ್ಯಗಳಿಂದ ಆತ್ಮಸ್ಥೈರ್ಯ ಮಕ್ಕಳಲ್ಲಿ ಮೂಡುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿ ಜಿಲ್ಲಾಧ್ಯಕ್ಷ ಎ. ಆರ್ ಹೆಗ್ಗನದೊಡ್ಡಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಹಾಗೂ ಮಕ್ಕಳಿಗೆ ಒಳ್ಳೆಯ ರೀತಿಯಾದ…
