ಅ.೦೨ ರಿಂದ ಒಂದು ತಿಂಗಳು ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಕುರಿತಾದ ಬ್ಯಾನರ್ ಮತ್ತು ಕರಪತ್ರಗಳನ್ನು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಸರಕಾರದ ನಿರ್ದೇಶನದಂತೆ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅ.೦೨ ರಿಂದ ಒಂದು ತಿಂಗಳುಗಳ ಕಾಲ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಭಾಗವಾಗಿ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತಿ ವತಿಯಿಂದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವದರ ಜೊತೆಗೆ ಯೋಜನೆಯ ಕುರಿತು ಮಾಹಿತಿ ನೀಡಲಾಗುವುದು. ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಚುನಾಯಿತ ಸದಸ್ಯರು, ಗ್ರಾಮ ಪಂಚಾಯತಿ & ಅನುಷ್ಠಾನ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳು ಸಹ ಪಾಲ್ಗೊಂಡು ಅಭಿಯಾನದ ಯಶಸ್ವಿಗೆ ಕೈಜೋಡಿಸಲಿದ್ದಾರೆ ಎಂದರು.
ಅಭಿಯಾನದ ಭಾಗವಾಗಿ ಗ್ರಾಮದ ಪ್ರಮುಖ ಕೆಂದ್ರಗಳಾದ ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ಹಾಲು ಕೇಂದ್ರಗಳಲ್ಲಿ ಬೇಡಿಕೆ ಪಟ್ಟಿಯನ್ನು ಸ್ಥಾಪಿಸಲಾಗುವುದು. ಆ ಬೇಡಿಕೆಯಲ್ಲಿ ಗ್ರಾಮಸ್ಥರು ತಮಗೆ ಅವರ್ಶಯಕವಿರುವ ಕಾಮಗಾರಿಗಳ ಬೇಡಿಕೆ ಸಲ್ಲಿಸಬಹುದು ಎಂದರು.
ಈ ಯೋಜನೆಯಡಿ ಮಹಿಳೆಯರಿಗೆ, ದುರ್ಬಲ ವರ್ಗದವರಿಗೆ, ವಿಶೇಷಚೇತನರಿಗೆ ಪ್ರಥಮಾಧ್ಯತೆ ನೀಡುವ ಜೊತೆಗೆ ಮಕ್ಕಳ ದೈಹಿಕ & ಮಾನಸಿಕ ಬೆಳವಣಿಗೆಗೆ ಅವಶ್ಯಕ ಶಾಲಾಭಿವೃದ್ಧಿ ಕಾಮಗಾರಿಗಳನ್ನು ಈ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಶೋಭಕ್ಕ ಶೀಳಿನ, ಸಹಾಯಕ ಲೆಕ್ಕಾಧಿಕಾರಿ ಬಸವರಾಜ ಸಂಕಗೊಂಡ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಪಿಡಿಓ ಸಂತೋಷಕುಮಾರ ಬಿರಾದಾರ, ವಿ.ಕೆ.ಹಟ್ಟಿ, ವಿಷಯ ನಿರ್ವಾಹಕಿ ಜಯಶ್ರೀ ಕೆಂಗಲಗುತ್ತಿ, ಆಡಳಿತ ಸಹಾಯಕ ಸುನೀಲ ಬನಸೋಡೆ, ಬಿ.ಎಫ್.ಟಿಗಳಾದ ಸಿದ್ರಾಯ ದಾಶ್ಯಾಳ ಸೇರಿ ಇತರರು ಹಾಜರಿದ್ದರು.

