ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ತಾಲೂಕಿನ ಮಣೂರ ಗ್ರಾಮದ ಕೆ.ಎಸ್.ಎಲ್.ಎ ಪ್ರೌಢಶಾಲಾ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಪ್ರೌಢಶಾಲಾ ವಿಭಾಗದ ಬಾಲಕರ ತಾಲ್ಲೂಕು ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಎಲ್.ಆರ್.ಅಂಗಡಿ, ಮುಖ್ಯಶಿಕ್ಷಕ ಎಸ್.ಸಿ.ಕಿತ್ತೂರ, ದೈಹಿಕ ಶಿಕ್ಷಕ ಎಸ್.ಡಿ.ಆನೆಗುಂದಿ, ಶಿಕ್ಷಕ ಸಿಬ್ಬಂದಿ ಪ್ರಕಾಶ ನಾಯಿಕ್, ಮೋಹನ ಸಜ್ಜನ ಇದ್ದರು.

