ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಬ್ಬ ರಕ್ತದಾನಿ ೩ ಜೀವಗಳನ್ನು ಉಳಿಸಬಹುದು. ಕಾರಣ ಯುವಕ, ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಂಪತಕುಮಾರ ಗುಣಾರಿ ಕರೆ ನೀಡಿದರು.
ನಗರದ ಸರಕಾರಿ ಪಾಲಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ -೨೦೨೪ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಾಡಿದ ನಂತರ ೫ ಕಾಯಿಲೆಗಳ ಬಗ್ಗೆ ಪರೀಕ್ಷೆ ಮಾಡಿ ಅದರಲ್ಲಿ ಯಾವದೇ ಸಮಸ್ಯೆ ಇಲ್ಲವೆಂದು ಖಾತರಿಪಡಿಸಿಕೊಂಡ ಬಳಿಕವೇ ಬೇರೆಯವರಿಗೆ ರಕ್ತವನ್ನು ನೀಡಲಾಗುವುದು. ಪ್ರತಿಯೊಬ್ಬರೂ ರಕ್ತದಾನ ಮಾಡಿದಾಗ ಮಾತ್ರ ಬೇರೆಯವರಿಗೆ ರಕ್ತವನ್ನು ಪೂರೈಸಲು ಸಾದ್ಯವಾಗುತ್ತದೆ ಎಂದು ಡಾ.ಸಂಪತಕುಮಾರ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ನಮ್ಮ ಜಿಲ್ಲೆಗೆ ಬೇಕಾದ ರಕ್ತವನ್ನು ಪೂರೈಕೆಯಾಗಬೇಕಾದರೆ ಆರೋಗ್ಯವಂತ ಯುವಕ/ಯುವತಿಯರು ರಕ್ತದಾನ ಮಾಡಿದಾಗ ಮಾತ್ರ ಸಾಧ್ಯ. ದೇಹಕ್ಕೆ ವಯಸ್ಸಾದರು ಸಹ ಯುವಕರಂತೆ ಕಾಣಬೇಕಾದರೆ ನಿರಂತರವಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸರಕಾರಿ ಪಾಲಟೆಕ್ನಿಕ್ ಕಾಲೇಜು ಪ್ರಾಚಾರ್ಯ
ಎಸ್.ಬಿ.ಜವಳಿ ವಹಿಸಿದ್ದರು.
ಜಿಲ್ಲಾ ಏಡ್ಸ್/ಕ್ಷಯರೋಗ ನಿಯಂತ್ರಣ & ರಕ್ತ ಸುರಕ್ಷತಾ ಅಧಿಕಾರಿ ಡಾ. ಎಮ್.ಬಿ ಬಿರಾದಾರ ಮಾತನಾಡಿದರು.
ಡಾ.ಸುಮಾ ಮಮದಾಪೂರ, ಡಾ..ಶ್ವೇತಾ ಸನದಿ, ಎ.ಹೆಚ್.ವಲ್ಲಿಬಾಯಿ, ಎನ್.ಎಸ್.ಎಸ್ ಅಧಿಕಾರಿ ಸಿರಾಜದೌಲಾ ನದಾಫ, ಯುತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಸಂತೋಷ ರಾಠೋಡ ವೇದಿಕೆ ಮೇಲಿದ್ದರು.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸುಮಾ ಮಮದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿರೂಪಣೆಯನ್ನು ವಿಜ್ಞಾನ ವಿಭಾಗ ಉಪನ್ಯಾಸಕಿ ಸರೋಜನಿ ನಾಯಕ, ಸ್ವಾಗತವನ್ನು ಇ&ಸಿ ವಿಭಾಗ ಉಪನ್ಯಾಸಕ ಪ್ರಸಾದ ಮಾವುರಕರ್ ನಡೆಸಿಕೊಟ್ಟರು,
ಎ.ಆರ್.ಟಿ ಜಿಲ್ಲಾ ಆಸ್ಪತ್ರೆ ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ಪರಿಸರ & ಹೆಚ್.ಐ.ವಿ ಕುರಿತು ಹಾಡು ಹೇಳಿದರು, ಸನ್ಮಾನ & ಬಹುಮಾನ ವಿತರಣೆ ಕಾರ್ಯಕ್ರಮ ಡ್ಯಾಪ್ಕೊ ಘಟಕದ ಜಿಲ್ಲಾ ಮೇಲ್ವಿಚಾರಕ ಬಾಬುರಾಯ ತಳವಾರ ನಿರೂಪಿಸಿದರು. ಬಿ.ಎಲ್.ಡಿ.ಇ ಐಸಿಟಿಸಿ ಆಪ್ತಸಮಾಲೋಚಕಿ ಅರ್ಚನಾ ವಳಕೋಟಿ ವಂದಿಸಿದರು.
ಡ್ಯಾಪೊ ಸಿಬ್ಬಂದಿಗಳು ಹಾಗೂ ಸರಕಾರಿ ಪಾಲಟೆಕ್ನಿಕ್ ಕಾಲೇಜಿನ ಎಲ್ಲ ಭೋಧಕ & ಭೋಧಕೇತರ ಸಿಬ್ಬಂದಿ ಹಾಜರಿದ್ದರು.
ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚಿಗೆ ರಕ್ತದಾನ ಮಾಡಿದ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ ೫ಜನ ಮುಖ್ಯಸ್ಥರಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸನ್ಮಾನ ಮಾಡಲಾಯಿತು.
ರಕ್ತದಾನದ ಮಹತ್ವದ ಕುರಿತು ಏರ್ಪಡಿಸಿದ ಪ್ರಭಂದ/ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ನಾಲ್ಕು ವಿದ್ಯಾರ್ಥಿಗಳಿಗೆ (೨-ಪ್ರಥಮ, ದ್ವಿತೀಯ, ತೃತೀಯ) ನಗದು ಬಹುಮಾನ & ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಹಲವು ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿದರು.

