ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಿಕ್ಷಣ ಮನುಷ್ಯನಿಗೆ ಆಭರಣವಿದ್ದಂತೆ, ಒಂದು ದೇಶದ ಪ್ರಗತಿಗೆ ಶಿಕ್ಷಣ ಮುಖ್ಯ. ರಾಜಕೀಯ ಜೀವನದಲ್ಲಿ ಅತೀ ಹೆಚ್ಚು ಶಿಕ್ಷಣಕ್ಕೆ ಮಹತ್ವ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ವಿಧದಲ್ಲಿ ಶಿಕ್ಷಣ ಅಭಿವೃದ್ದಿಪಡಿಸೋಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಪಡನೂರ ಗ್ರಾಮದ ವ್ಹಿ.ವಾಯ್.ಪಾಟೀಲ ಪ್ರೌಢ ಶಾಲೆಯ ನೂತನ ಶಾಲಾ ಕೋಣೆಗಳ ಉದ್ಘಾಟನೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪಡನೂರ ನೂತನ ಸ್ಮಾರ್ಟ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ಪರಿವರ್ತನೆ ಶಿಕ್ಷಣ ಕೇಂದ್ರದಿಂದ ಮಾತ್ರ ಸಾದ್ಯ, ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾತೃಗಳಾಗಲಿ ಎಂದು ಹೇಳಿದರು.
ಸಾನಿಧ್ಯವಹಿಸಿದ ಅಂತರಾಷ್ಟ್ರೀಯ ಗುರುದೇವ ಯೋಗಾಶ್ರಮ ಬಾಲಗಾಂವ-ಕಾತ್ರಾಳ ಡಾ.ಅಮೃತಾನಂದ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.
ಸಾಹಿತಿ ಮಲ್ಲಿಕಾರ್ಜುನ ಮೇತ್ರಿ, ಡಾ.ಬಸವಾನಂದ ಮಹಾಸ್ವಾಮಿಗಳು, ಸಿದ್ದರಾಮೇಶ್ವರ ಪಟ್ಟದ ದೇವರು ಸಾನಿಧ್ಯ ವಹಿಸಿದ್ದರು.
ಶರಣಬಸಪ್ಪಾ ಎನ್.ಕೆ, ಧನರಾಜ ಮುಜಗೊಂಡ ಮಾತನಾಡಿದರು.
ಪಡನೂರ ಗ್ರಾಪಂ ಅಧ್ಯಕ್ಷ ಷಡಕ್ಷರಿ ಮೇತ್ರಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸೌದಾಗರ, ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಪೊಲೀಸ್ ಉಪಾಧೀಕ್ಷಕ ಜಗದೀಶ ಎಸ್.ಎಚ್, ಟಿ.ಎಸ್ ಆಲಗೂರ, ಎಸ್.ಆರ್ ನಡಗಡ್ಡಿ, ನಂದೀಪ ರಾಠೋಡ, ನಿಜಣ್ಣಾ ಕಾಳೆ, ಭೀಮನಗೌಡ ಬಿರಾದಾರ, ಭೀಮಾಶಂಕರ ಬೈರಜಿ, ಮಹಾಂತೇಶ ಅವರಾಧಿ, ಕಲ್ಲನಗೌಡ ಬಿರಾದಾರ, ಹಣಮಂತ ಅರವತ್ತು ಮತ್ತಿತರಿದ್ದರು.

