Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆಯನ್ನು ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಮಹಾತ್ಮಾ ಗಾಂಧೀಜಿ, ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿಯವರು ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಹಾತ್ಮರ ನೆನಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡತನದಲ್ಲಿಯೇ ಹುಟ್ಟಿ ಬಡತನಲ್ಲಿಯೇ ಬೆಳೆದು ಕೊನೆಗೆ ಬಡತನದಲ್ಲಿಯೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ, ಲಾಲ್‌ಬಹಾದ್ದೂರ ಶಾಸ್ತ್ರಿ ವೃತ್ತಕ್ಕೆ ತೆರಳಿ ಪುಷ್ಪಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ ಜಾಧವ, ಮಲ್ಲಿಕಾರ್ಜುನ ಗಡಗಿ, ಎಸ್.ಎ. ಪಾಟೀಲ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ನೈರ್ಮಲ್ಯ ದೃಷ್ಟಿಕೋನವು ಸ್ವಚ್ಛ ಭಾರತ ಆಭಿಯಾನಕ್ಕೆ ಸ್ಪೂರ್ತಿ ನೀಡಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಡಾ. ಆರ್.ಎಸ್.ಮುಧೋಳ ಹೇಳಿದ್ದಾರೆ.ಬುಧವಾರ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿಯವರ 155 ಮತ್ತು ಲಾಲ ಬಹಾದ್ದೂರ ಶಾಸ್ತಿಯವರ 120ನೇ ಜಯಂತಿಯನ್ನು ಅಂಗವಾಗಿ ಉಭಯ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ತತ್ವದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅಲ್ಲದೇ, ದೇಶದ ಎರಡನೇ ಪ್ರಧಾನಿಯಾಗಿ ಲಾಲ ಬಹಾದ್ದೂರ ಶಾಸ್ತ್ರಿ ಅವರು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.ಸಮಕುಲಪತಿ ಡಾ.ಅರುಣ ಸಿ. ಇನಾಮದಾರ ಮಾತನಾಡಿದರು.ಈ ಸಂದರ್ಭದಲ್ಲಿ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ತೇಜಸ್ವಿನಿ ವಲ್ಲಭ, ಡಾ. ಎಂ.ಎಂ.ಪಾಟೀಲ, ಡಾ.ವಿಕಾಸ ದೇಸಾಯಿ, ಡಾ. ಎಸ್.ವಿ.ಪಾಟೀಲ, ಡಾ.ಆನಂದ ಅಂಬಲಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಅಂಭಾಭವಾನಿ ದೇವಸ್ಥಾನದ ಆವರಣದಲ್ಲಿ ಶರನ್ ನವರಾತ್ರಿಯ ಪ್ರಯುಕ್ತ ಅ.೩ ರಿಂದ ಅ.೧೨ ರ ವರೆಗೆ ದೇವಿ ಪುರಾಣ ನಡೆಯಲಿದೆ ಅ.೧೨ ಮತ್ತು ೧೩ ರಂದು ಧಾರ್ಮಿಕ ವಿಜಯಮಹೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಿ ಉಪಾಸಕರಾದ ಮೋತಿಲಾಲ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಅಪ್ಪಾಜಿ ನಾಡಗೌಡ ಸಲಹೆ ಉದಯರಶ್ಮಿ ದಿನಪತ್ರಿಕೆ ತಾಳಿಕೋಟಿ: ಕನ್ನಡ ಭಾಷೆ ಜೀವಂತ ಭಾಷೆಯಾಗಿದ್ದು ಬದುಕು ಕಟ್ಟಿಕೊಡುವ ಭಾಷೆಯಾಗಿದೆ. ಅದರೊಂದಿಗೆ ನಮ್ಮ ಪರಂಪರೆ ಸಂಸ್ಕೃತಿ ಬೆಸೆದುಕೊಂಡಿದೆ. ಅದು ನಮ್ಮೆಲ್ಲರ ಉಸಿರಾಗಬೇಕು. ಅದರ ಕುರಿತು ಇರುವ ಅಭಿಮಾನ ಒಂದು ದಿನಕ್ಕೆ ಸೀಮಿತ ಬೇಡ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.ಮಂಗಳವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಕಸಾಪ ತಾಲೂಕ ಘಟಕ ಹಮ್ಮಿಕೊಂಡ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮ್ಮೇಳನಗಳು ಸಾಮಾಜಿಕ ಬದಲಾವಣೆಗೆ ಪೂರಕವಾಗಬೇಕು. ಸಮಾಜದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿವೆ, ಜನರ ಮಧ್ಯೆ ಗೋಡೆಗಳನ್ನು ನಿರ್ಮಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ, ಈ ಸಮ್ಮೇಳನದಿಂದ ಎಲ್ಲರ ಮನಸ್ಸುಗಳನ್ನು ಜೋಡಿಸುವ ಕಾರ್ಯ ಆಗಬೇಕು ಎಂದ ಅವರು, ಐತಿಹಾಸಿಕ ಸಮ್ಮೇಳನವಾಗಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ನಾಡಿನ ನೆಲ ಜಲ ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗಾಂಧಿಜೀಯವರ ಮೌಲ್ಯಗಳನ್ನು ಸ್ಮರಿಸುತ್ತಾ ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ, ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಹಸಿರು ಸ್ಥಳವನ್ನಾಗಿ ಮಾಡೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಬುಧವಾರ ನಗರದ ಆನಂದ ಮಹಲ್ ಆವರಣದಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ವಿಜಯಪುರ ಲಾಡ್ಲೀ ಪೌಂಡೇಶನ್ ನವದೆಹಲಿ, ಜಿಲ್ಲಾ ಎನ್.ಎಸ್.ಎಸ್. ಘಟಕ, ಕ್ಷೇತ್ರ ಸಂವಹನ ಇಲಾಖೆ, ಸ್ಪಂದನಾ ಸೇವಾ ಸಂಸ್ಥೆ, ಸಮಪ್ರಭ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ “ಸ್ವಚ್ಛತಾ ಹಿ ಸೇವಾ“ ಕಾರ್ಯಕ್ರಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆ ನಮ್ಮ ಬದ್ಧತೆ ಕೊಡುಗೆ ನೀಡಬೇಕಾಗಿದೆ. ಗಾಂಧಿಜೀಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ನಡೆದುಕೊಂಡು ಸ್ವಚ್ಛತೆ ಮತ್ತು ಸಮಾಜ ಸೇವೆಗೆ ಅಣಿಯಾಗಬೇಕಾಗಿದೆ. ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತು ಭಾಗಿಯಾಗಬೇಕೆಂದು ಎಂದು ಹೇಳಿದರು.ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ ಡೋಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾವೀದ ಜಮಾದಾರ…
ಮಹಾತ್ಮ ಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಸಂದೇಶದ ಮೂಲಕ ನೀಡಿದ ಕೊಡುಗೆ ಅಮೂಲ್ಯವಾದದ್ದು, ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳನ್ನು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಮಹನೀಯರ ಕುರಿತು ಇಂದಿನ ಜನರು ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳನ್ನು ಹಾಗೂ ಆದರ್ಶ ವಿಚಾರಗಳನ್ನು ಅರಿತುಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ವರ ಪಾತ್ರ ವಹಿಸಿ ಸತ್ಯ, ಅಹಿಂಸೆಯ ಹೋರಾಟದ ಹಾದಿ ಅನುಸರಿಸಿ ವಿಶ್ವಕ್ಕೆ ದೊಡ್ಡ…
ಲೇಖನ- ವೀಣಾ ಹೇಮಂತಗೌಡ ಪಾಟೀಲಮುಂಡರಗಿ, ಗದಗ ಉದಯರಶ್ಮಿ ದಿನಪತ್ರಿಕೆ ಒಬ್ಬ ವ್ಯಕ್ತಿ ಒಂದಿಡೀ ಸಮುದಾಯದ ಶಕ್ತಿಯಾದ. ಇಡೀ ದೇಶದ ಒಕ್ಕೊರಲಿನ ದನಿಗೆ ಕಹಳೆಯಾದ. ಆತನ ಅತಿ ಸಾಧಾರಣ ವಸ್ತ್ರವೊಂದರಲ್ಲೇ ಆತ ಅಸಾಧಾರಣ ಶಕ್ತಿಯಾದ. ನಿರಾಯುಧನಾಗಿದ್ದ ಈತನಿಗೆ ಸರ್ವಾಯುಧಧಾರಿಗಳು ಶರಣಾದರು. ತೆಳುಕಾಯದ ಈತನ ದನಿಗೆ ಇಡೀ ಬ್ರಿಟಿಷ್ ಸಾಮ್ರಾಜ್ಯ ನಡುಗುತ್ತಿತ್ತು .ಯಾವುದೀ ಶಕ್ತಿ? ಯಾರು ಈ ವ್ಯಕ್ತಿ? ಖಡ್ಗದ ಝೇಂಕಾರವಿಲ್ಲದ, ಗುಂಡಿನ ಮೊರೆತವಿಲ್ಲದೆ, ಕೇವಲ ಅಹಿಂಸೆಯ ಬಲದಿಂದಲೇ ಸ್ವಾತಂತ್ರ್ಯ ಪಡೆದ ಭಾರತ ದೇಶದ ಹೆಮ್ಮೆಯ ಕುವರ ದಣಿವರಿಯದ ಸಂತ ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಬಾಪು, ಮಹಾತ್ಮ ಗಾಂಧಿ .ಕೇವಲ ನಾಮಮಾತ್ರದಿಂದಲೇ ಇಡೀ ದೇಶದಲ್ಲಿ, ದೇಶದ ಜನತೆಯಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದ ವ್ಯಕ್ತಿ ಗಾಂಧಿ. ಆತನಲ್ಲಿದ್ದ ಶಕ್ತಿ ಯಾವುದು?ಅಹುದು, ಅದುವೇ ಆತನಲ್ಲಿದ್ದ ಅಂತಸ್ಸತ್ವ, ಸತ್ಯಸಂಧತೆ, ಅಹಿಂಸಾವಾದ ಮತ್ತು ಅಂತಿಮವಾಗಿ ಮಾನಸಿಕ ದೃಢತೆ.ತುಂಡು ಬಟ್ಟೆಯುಟ್ಟು ಒಂದಿಡೀ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ನಡುಗಿಸಿದ ಗಾಂಧೀಜಿಯವರಿಗಿದ್ದ ಅಂತಶಕ್ತಿಯ ಮೂಲಸೆಲೆ ಯಾವುದು?ಅಹಿಂಸೆಯ ಮೂಲಕವೇ ದೇಶದ ಜನರನ್ನೆಲ್ಲ ಒಗ್ಗೂಡಿಸಿ ಶಾಂತಿಯ ಕಹಳೆ ಊದಿದ…
ಗಿಡ ಬೆಳೆಸಿ, ಪರಿಸರ ಉಳಿಸಿ-ಹೆಗ್ಗಳಗಿ. ಚಿಮ್ಮಡದಲ್ಲಿ ಸಸಿ ನೆಡುವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ, ಮನೆ, ಮಂದಿರ, ಶಾಲೆ ಸೇರಿದಂತೆ ಪ್ರತಿಯೊಂದು ಸ್ಥಳಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಿಸಲು ಪ್ರತಿಯೊಬ್ಬರು ಪಣ ತೊಡಬೇಕೆಂದು ಸಮೀರವಾಡಿಯ ಗೋದಾವರಿ ಬಯೋರಿಫೈನರೀಜ್‌ನ ರಬಕವಿ ವಲಯ ಕಬ್ಬು ಬೆಳೆಯ ನಿರೀಕ್ಷಕ ಎನ್.ಎಂ.ಹೆಗ್ಗಳಗಿ ಹೇಳಿದರು.ಗ್ರಾಮದ ಪ್ರಭುಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ರ ಸೆ.೧೭ರಿಂದ ಅ. ೨ರ ವರೆಗೆ ಹಮ್ಮಿಕೊಳ್ಲಲಾದ ಸ್ವಚ್ಛತೇಯೆ ಸೇವೆ ಆಂದೋಲನದ ಸಸಿ ನಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನ ಮಂತ್ರಿಗಳ ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನದ ಭಾಗವಾಗಿ ಚಿಮ್ಮಡ ಹಾಗೂ ಹೊಸೂರ ಪಟ್ಟಣಗಳಲ್ಲಿ ಹಲವು ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗಿದ್ದು ಅವುಗಳನ್ನು ಪೋಸಿಸಿ ಬೆಳೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.ಗ್ರಾಮ ಪಂಚಯತಿ ಮಾಜಿ ಅಧ್ಯಕ್ಷ ಆನಂದ ಕವಟಿ, ಐಟಿಐ ಕಾರ್ಯದರ್ಶಿ ಅಶೋಕ ಧಡೂತಿ ಮಾತನಾಡಿದರುವಲಯ…
ಅಂಕಿ ಸಂಖ್ಯೆ ಇಲಾಖೆಗೆ ಬೀಗ ಜಡಿದ ರೈತರು | ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು | ಬೆಳೆ ಕಟಾವಿನ ಮಾಹಿತಿ ನೀಡಲು ಒಪ್ಪಿಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಅವ್ಯವಹಾರ ಆಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮಂಗಳವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ೨೦೨೩-೨೪ ರಲ್ಲಿ ಜಿಲ್ಲೆಯಲ್ಲಿ ನಷ್ಟಗೊಂಡ ಎಲ್ಲಾ ರೈತರಿಗೂ ಬೆಳೆ ವಿಮೆಯ ಪರಿಹಾರ ನೀಡಬೇಕು. ವಿಮೆಯಲ್ಲಿ ಆಗಿರುವ ಮೋಸವನ್ನು ಸರಿಪಡಿಸಬೇಕು. ಫಸಲ್ ಭೀಮಾ ಯೋಜನೆ ಅನ್ನುವುದು ಅವೈಜ್ಞಾನಿಕ ಹಾಗೂ ಅಪಾರದರ್ಶಕವಾಗಿದೆ ಇವುಗಳ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಕೋಲಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ ೧೩೧ ಕೋಟಿ ವಿಮೆ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದಾರೆ, ಬರಗಾಲದಿಂದ ತತ್ತರಿಸಿರುವ ಜಿಲ್ಲೆಗೆ ಸುಮಾರು ೧೦೦೦ ಕೋಟಿ ಪರಿಹಾರ ಬರಬೇಕಿತ್ತು ಆದರೆ ಅಧಿಕಾರಿಗಳು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದಲ್ಲಿ ಅ.3 ರಿಂದ ಅ.14 ರ ವರೆಗೆ ಹಮ್ಮಿಕೊಂಡಿರುವ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗ್ರಾಮದ ಹಿರೇಮಠದ ಆನಂದ ದೇವರು ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನವರಾತ್ರೋತ್ಸವ ಕಾರ್ಯಕ್ರಮದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ 27 ಗ್ರಾಮಗಳಲ್ಲಿ ಜನಜಾಗೃತಿ ಸೇವಾ ಯಾತ್ರೆಯ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ 5 ದಿನಗಳವರೆಗೆ ಪ್ರವಚನ, ಗ್ರಾಮಸ್ಥರಿಗೆ ರುದ್ರಾಕ್ಷಿ ಧಾರಣೆ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವರಾತ್ರೋತ್ಸವ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಯುವಕರು ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಉತ್ತಮ ಸಂಸ್ಕಾರ ಪಡೆದುಕೊಂಡು ಸಮಾಜಕ್ಕೆ ಕೊಡುಗೆ ನೀಡುವವರಾಗಬೇಕು ಎಂದು ಹೇಳಿದರು.ವೀರಬಸವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾದುದು. ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ…
