ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ನೈರ್ಮಲ್ಯ ದೃಷ್ಟಿಕೋನವು ಸ್ವಚ್ಛ ಭಾರತ ಆಭಿಯಾನಕ್ಕೆ ಸ್ಪೂರ್ತಿ ನೀಡಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಡಾ. ಆರ್.ಎಸ್.ಮುಧೋಳ ಹೇಳಿದ್ದಾರೆ.
ಬುಧವಾರ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿಯವರ 155 ಮತ್ತು ಲಾಲ ಬಹಾದ್ದೂರ ಶಾಸ್ತಿಯವರ 120ನೇ ಜಯಂತಿಯನ್ನು ಅಂಗವಾಗಿ ಉಭಯ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ತತ್ವದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅಲ್ಲದೇ, ದೇಶದ ಎರಡನೇ ಪ್ರಧಾನಿಯಾಗಿ ಲಾಲ ಬಹಾದ್ದೂರ ಶಾಸ್ತ್ರಿ ಅವರು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಸಮಕುಲಪತಿ ಡಾ.ಅರುಣ ಸಿ. ಇನಾಮದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ತೇಜಸ್ವಿನಿ ವಲ್ಲಭ, ಡಾ. ಎಂ.ಎಂ.ಪಾಟೀಲ, ಡಾ.ವಿಕಾಸ ದೇಸಾಯಿ, ಡಾ. ಎಸ್.ವಿ.ಪಾಟೀಲ, ಡಾ.ಆನಂದ ಅಂಬಲಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

