Author: editor.udayarashmi@gmail.com

ಖೊಟ್ಟಿ ದಾಖಲೆಗಳ ಆಧಾರದಲ್ಲಿ ಮಾನ್ಯತೆ ಪಡೆದಿದ್ದ ಆರೋಪ | ಧಾರವಾಡದ ಆಯುಕ್ತರ ಕಚೇರಿಯ ನಿರ್ದೇಶಕರ ಆದೇಶ | ವಿದ್ಯಾರ್ಥಿಗಳಿಗೆ ಹತ್ತಿರದ ಸರ್ಕಾರಿ ಶಾಲೆಗೆ ದಾಖಲಿಸಲು ಸೂಚನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ವಿದ್ಯಾನಗರದಲ್ಲಿನ ವಿದ್ಯಾಸ್ಪೂರ್ತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಮಾನ್ಯತೆಯನ್ನು ರದ್ದುಪಡಿಸಿ ಧಾರವಾಡದ ಆಯುಕ್ತರ ಕಚೇರಿಯ ನಿರ್ದೇಶಕರು ಆದೇಶಿಸಿದ್ದಾರೆ.ಶಾಲೆಗೆ ಅನುಮತಿ ಪಡೆಯುವ ವೇಳೆ ಖೊಟ್ಟಿ ದಾಖಲೆಗಳನ್ನು ಇಲಾಖೆಗೆ ನೀಡಿ ಅನುಮತಿ ಪಡೆದ ಹಿನ್ನೆಲೆ ತನಿಖೆ ನಡೆಸಿ ಈ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಿದ ಅಧಿಕಾರಿಗಳು ಈಗಾಗಲೇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹತ್ತಿರದ ಸರ್ಕಾರಿ ಶಾಲೆಗೆ ದಾಖಲಿಸುವಂತೆ ಮತ್ತು ಶಾಲೆಯ ಎಲ್ಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.ಏನಿದು ಅಕ್ರಮ?ಶಾಲೆಯು ಮಾನ್ಯತೆ ಪಡೆಯಲು ಸಲ್ಲಿಸಿದ್ದ ದಾಖಲೆಗಳಲ್ಲಿ ಹಲವು ಗಂಭೀರ ವೈರುಧ್ಯಗಳು ತನಿಖೆಯಿಂದ ಪತ್ತೆಯಾಗಿವೆ. ಶಾಲೆ ಕಾರ್ಯನಿರ್ವಹಿಸುತ್ತಿರುವ ಭೂಮಿ, ಕಟ್ಟಡ, ಮೂಲಸೌಕರ್ಯ ಹಾಗೂ ಇಲಾಖೆಗೆ ಸಲ್ಲಿಸಲಾದ ದಾಖಲೆಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಮಾನ್ಯತೆ ಪಡೆಯಲು ಕಡ್ಡಾಯವಾಗಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಹಾಗೂ ಇಲಾಖೆಗೆ ತಪ್ಪು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತ ಸ್ವೀಪ್ ಸಮಿತಿ ಶನಿವಾರದಂದು ಪಟ್ಟಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾವು ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮಕ್ಕೆ ಜಾಲನೆ ನೀಡಿ ಮಾತನಾಡಿದ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶೋಕ ರಾಠೋಡರವರು. ಪ್ರಜಾಪ್ರಭುತ್ವದ ಯಶಸ್ಸು ಮತದಾರರ ಸಕ್ರಿಯ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಅಭಿಯಾನವು ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ಒಂದು ಸುಸಂದರ್ಭವಾಗಿದೆ. ತಾಲೂಕಿನ ಪ್ರತಿಯೊಬ್ಬ ನಾಗರಿಕನು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಜವಾಬ್ದಾರಿಯುತ ಮತದಾರರಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರರಾದ ಸಂಜಯ ಇಂಗಳೆಯವರು. ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳುವುದು ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ-೨೦೨೬ರ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ, ಪ್ರಜಾಪ್ರಭುತ್ವದ ಅಡಿಪಾಯವನ್ನು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯಲಗೋಡ, ವಂದಾಲ ಗ್ರಾಮಗಳಿಗೆ ಭೇಟಿ ನೀಡಿದ ತಹಶೀಲ್ದಾರ ನಿಂಗಣ್ಣ ಬಿರಾದಾರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ೨೦೨೬ ಕಾರ್ಯದ ಪ್ರಗತಿ ಪರಿಶೀಲಿಸಿದರು.ತಾಲ್ಲೂಕಿನ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ತಹಶೀಲ್ದಾರ, ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಆಯ್‌ಆರ್-೨೦೨೬) ಪ್ರಕ್ರಿಯೆ ಆರಂಭವಾಗಿದೆ. ಮತದಾರರಿಗೆ ಗಣತಿ ನಮೂನೆ ವಿತರಿಸಲು ಮತಗಟ್ಟೆ ಅಧಿಕಾರಿಗಳ(ಬಿಎಲ್‌ಓ) ಮನೆ,ಮನೆ ಭೇಟಿ ಪ್ರಾರಂಭವಾಗಿದೆ.ದಿ:೧೬ ಜೂನ್ ೨೦೨೬ರಂತೆ ಮತದಾರರ ಪಟ್ಟಿಯಲ್ಲಿ ೨,೩೦,೭೮೦ ಮತದಾರರಿದ್ದಾರೆ. ಗಣತಿ ನಮೂನೆಗಳನ್ನು ಮುದ್ರಿಸಿ ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲಾಗಿರುತ್ತದೆ. ಕ್ಷೇತ್ರದಲ್ಲಿ ಶೇ ೯೫.೪೫ ಮ್ಯಾಪ್ ಮಾಡಲಾದ ಒಟ್ಟು ಮತದಾರರಿದ್ದು, ೨,೩೦,೬೧೬ ಒಟ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈವರೆಗೆ ೫೭,೩೩೮ ಗಣತಿ ನಮೂನೆಗಳು ಗಣಕೀಕರಣಗೊಂಡಿವೆ. ೮೩ ಮತದಾರರು ಆನ್‌ಲೈನ್‌ನಲ್ಲಿ ಗಣತಿ ನಮೂನೆಗಳನ್ನು ಸಲ್ಲಿಸಿದ್ದು, ೧೭ ಗೈರು ಹಾಜರಾದ ಮತದಾರರು, ೪೨೫ ಜನ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, ೮೦೬ ಮರಣ ಹೊಂದಿರುವ ಮತದಾರರ ಮಾಹಿತಿ ಇದೆ. ಇನ್ನೂ ೭೫ ಮತದಾರರು ಈಗಾಗಲೇ ನೊಂದಾಯಿಸಿಕೊAಡಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ. ೧ ರಲ್ಲಿ ಶ್ರೀ ಮಾತಾ ದುರ್ಗಾದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲ ತಾಂಡಾಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಧರ್ಮದರ್ಶಿಗಳಾದ ಡಾ. ಜಗನೂ ಮಹಾರಾಜ ಅವರು ಮನವಿ ಮಾಡಿದರು.ನಗರದ ನವಮಿ ಮಂಗಲ ಕಾರ್ಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುದೀರ್ಘ ಇತಿಹಾಸವಿರುವ ಈ ಧಾರ್ಮಿಕ ಕೇಂದ್ರದಲ್ಲಿ ಜುಲೈ ೧೪ರಂದು ಅದ್ಧೂರಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನವು ಸುಮಾರು ೧೯೪೮ ರಲ್ಲಿ ಸ್ಥಾಪನೆಯಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ವರ್ಷವೂ ನಿಗಮದ ಸಹಯೋಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿAದ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದರು.ಮAಗಳವಾರ, ಜುಲೈ ೧೪ ರ ಮಧ್ಯಾಹ್ನ ೧:೦೦ ಗಂಟೆಗೆ ಸರಿಯಾಗಿ ಮುಖ್ಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಅಂದು ಮಧ್ಯಾಹ್ನ ಗಂಗಾಪೂಜೆ, ಮಹಾ ಮಂಗಳಾರತಿ ಹಾಗೂ ವಿಶೇಷ ಧಾರ್ಮಿಕ ಸಭೆಗಳು ಜರುಗಲಿವೆ. ಅಂದು ಖ್ಯಾತ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತಾನು ವಾಸಿಸುತ್ತಿರುವ ಪರಿಸರ, ಪ್ರಕೃತಿ ಸಮಾಜ, ಸಂಸ್ಕೃತಿ, ಕುಟುಂಬ ಪರಿವಾರ ಹೀಗೆ ಎಲ್ಲರೊಂದಿಗೆ ಒಂದು ಅನನ್ಯ, ಆತ್ಮೀಯ ಭಾವವನ್ನು ಹೊಂದಿರುತ್ತಾನೆ. ತನ್ನ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಸ್ಪಂದಿಸುವ ಪ್ರತಿಕ್ರಿಯಿಸುವ ಎಲ್ಲರೊಂದಿಗೆ ಮನುಷ್ಯ ಕೃತಜ್ಞತಾ ಭಾವವನ್ನು ಹೊಂದಿರಲೇಬೇಕು.ಯಾವುದೇ ಒಂದು ಕಟ್ಟಡವನ್ನು ಕಟ್ಟುವಾಗ ಕಂಬಗಳನ್ನು ನಿರ್ಮಿಸುತ್ತಾರೆ. ಇದನ್ನು ಸ್ಟ್ರಕ್ಚರ್ ಅಥವಾ ಸಂರಚನೆ ಎಂದು ಕರೆಯುತ್ತೇವೆ. ಈ ರಚನೆಯ ಆಧಾರದ ಮೇಲೆ ಕಟ್ಟಡದ ಉಳಿದ ನಿರ್ಮಾಣ ಕಾರ್ಯ ನಡೆಯುತ್ತದೆ. ಈ ಕಂಬ (ಕಾಲಂ)ಗಳ ಸಂರಚನೆ ಸರಿಯಾಗಿರದಿದ್ದರೆ, ಅದೆಷ್ಟೇ ಚೆನ್ನಾಗಿ ಕಟ್ಟಿದರೂ ಕಟ್ಟಡ ತನ್ನ ಗಟ್ಟಿತನವನ್ನು, ರಚನಾತ್ಮಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಲ್ಲವೇ?ಹಾಗೆಯೇ ಮಕ್ಕಳಲ್ಲಿ ಸಂಸ್ಕಾರ ಎಂಬ ಉತ್ತಮ ಅಡಿಪಾಯವನ್ನು ಹಾಕಿ ಸುಸಂಸ್ಕೃತಿಯನ್ನು ಬೆಳೆಸಬೇಕು. ಕುಟುಂಬದ ಹಿರಿಯರು ಹೇಳುವ ಮಾತುಗಳನ್ನು ಮಕ್ಕಳು ಕಡ್ಡಾಯವಾಗಿ ಪಾಲಿಸಲೇಬೇಕು ಎಂಬ ಅಲಿಖಿತ ನಿಯಮ ಮನೆಯಲ್ಲಿ ಜಾರಿಯಲ್ಲಿದ್ದರೆ, ಮಕ್ಕಳು ತಮ್ಮ ಹಿರಿಯರನ್ನು ಗೌರವಿಸುವರು. ಅವರ ಮಾತುಗಳಿಗೆ ಒಡಂಬಡುವರು. ಪರಿವಾರದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಆರೋಪದ ಮೇರೆಗೆ ವಿಜಯಪುರ ನಗರದ ಗಣೇಶನಗರ ನಿವಾಸಿ, ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದ ತುಳಸಿರಾಮ್ ತಂದೆ ಪಂಡಿತ ಹರಿಜನ @ ಬನಸೋಡೆ (27) ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಆನಂದ್ ಕೆ. ಅವರು ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸರಾಯಿ ವ್ಯವಹಾರ, ಮಾದಕ ದ್ರವ್ಯ ಅಪರಾಧಿಗಳು, ಜೂಜುಕೋರರು, ಗುಂಡಾಗಳು, ಅನೈತಿಕ ಮಾನವ ಕಳ್ಳಸಾಗಣೆ ಹಾಗೂ ಇತರೆ ಅಪಾಯಕಾರಿ ಚಟುವಟಿಕೆಗಳ ತಡೆ ಅಧಿನಿಯಮ–1985 (ಗೂಂಡಾ ಕಾಯ್ದೆ)ರ ಕಲಂ 3(1) ಮತ್ತು 3(2) ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.ಆದೇಶದಲ್ಲಿ ತುಳಸಿರಾಮ್ ಬನಸೋಡೆ ವೃತ್ತಿಪರ ಅಪರಾಧಿಯಾಗಿದ್ದು, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಅಧ್ಯಾಯಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ ತೊಡಗಿರುವ ಪ್ರವೃತ್ತಿ ಹೊಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಸಮಾಜದ ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗೆ…

Read More

ಬಾಲಿವುಡ್ ನಟ ಗೋವಿಂದ | ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಭಾಗಿ | ಬಂಜಾರಾ ಮುಖಂಡ ಡಾ.ಬಾಬು ರಾಜೇಂದ್ರ ನಾಯಕ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೋಮದೇವರ ಹಟ್ಟಿ ಪುಟ್ಟ ಗ್ರಾಮವಾದರೂ ಅಧ್ಯಾತ್ಮಿಕವಾಗಿ ಪ್ರಸಿದ್ಧಿ.ಗೋವಾ, ರಾಜಸ್ತಾನ, ತ್ರಿಪುರಾ ಹೀಗೆ ನಾನಾ ಭಾಗಗಳಿಂಧ ಗಣ್ಯಾತಿಗಣ್ಯರ ದಂಡು ಸೋಮದೇವರ ಹಟ್ಟಿಗೆ ಆಗಮಿಸಿದ್ದುಂಟು. ತ್ರಿಪುರಾ ಮಾಜಿ ಸಿಎಂ ಗಿರಿಧರ ಗಮಾಂಗ್ ಅನೇಕ ಬಾರಿ ಈ ನೆಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು ಸಹ ಇದೆ.ಈ ಬಾರಿ ಇದೇ ದಿನಾಂಕ ೧೩ ರಿಂದ ನಡೆಯಲಿರುವ ಸೋಮದೇವರ ಹಟ್ಟಿಯ ಸುಪ್ರಸಿದ್ಧ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಬಾರಿ ಬಾಲಿವುಡ್ ಖ್ಯಾತ ನಟ ಗೋವಿಂದ, ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಅನೇಕ ಗಣ್ಯರ ದಂಡು ಭಾಗವಹಿಸಲಿದೆ. ದೇವಾಲಯದ ಧರ್ಮದರ್ಶಿ ಜಗನು ಮಹಾರಾಜರ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.ಈ ಕುರಿತು ವಿವರಣೆ ನೀಡಿದ ಡಾ.ಬಾಬು ರಾಜೇಂದ್ರ ನಾಯಕ, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದಿ.೧೩…

Read More

ರಾಜ್ಯದಲ್ಲಿ ತೀವ್ರ ಬರಗಾಲ ಛಾಯೆ | ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕವನ್ನು ಕೂಡಲೇ ಬರಪೀಡಿತ ರಾಜ್ಯ ಎಂದು ಘೋಷಣೆ ಮಾಡಿ ಕೂಡಲೇ ರೈತರಿಗೆ ಅಭಯ ಹಸ್ತ ನೀಡುವುದಕ್ಕಾಗಿ ಬೆಳೆ ನಷ್ಟ ಪರಿಹಾರವಾಗಿ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಧನ ಘೋಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ಒತ್ತಾಯಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಿ ರೈತರು ಕೃಷಿ ಚಟುವಟಿಕೆಗಳಿಗೆ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್, ಸಹಕಾರ ವಲಯ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.ಒಂದು ಕಡೆ ಕೇಂದ್ರ ಸರ್ಕಾರದ ಷಡ್ಯಂತ್ರದ ಭಾಗವಾಗಿರು ಎಸ್.ಐ.ಆರ್. ಹಾಗೂ ಬರಗಾಲ ಎರಡು ಆತಂಕದ ಛಾಯೆ ಎದುರಾಗಿದೆ ಎಂದರು.ವಾಡಿಕೆ ಮಳೆ ಪ್ರಮಾಣ ಶೇ.೭೫ ರಷ್ಟು ಕಡಿಮೆ ಮಳೆ ಸುರಿದಿರುವುದರಿಂದ ಬರಗಾಲ ಎದುರಾಗಿದೆ, ಬಿತ್ತನೆ ಪ್ರಮಾಣ ಶೇ.೧೫ಕ್ಕೆ ಸೀಮಿತವಾಗಿದೆ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೊಲ್ಹಾರ ತಾಲೂಕಿನಲ್ಲಿ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಹಾಗೂ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆಯ 1ನೇ, 2ನೇ ಹಾಗೂ 3ನೇ ಹಂತದ ಕಾಲುವೆಗಳಿಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನೀರಿನ ಒಳಹರಿವು ಇರುವುದರಿಂದ ರೈತರ ಹಿತದೃಷ್ಟಿಯಿಂದ ನೀರು ಬಿಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಮಳೆಯ ಕೊರತೆಯಿಂದ ಕೊಲ್ಹಾರ ಸೇರಿದಂತೆ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆದಿರುವ ಗೋವಿನ ಜೋಳ, ತೊಗರಿ, ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಇದರಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುವ ಆತಂಕ ವ್ಯಕ್ತವಾಗಿದೆ.ಇದೇ ವೇಳೆ ರೈತರು ರಸಗೊಬ್ಬರ ಸಮಸ್ಯೆಯನ್ನೂ ಎತ್ತಿಹಿಡಿದರು. ಯುರಿಯಾ ಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ,…

Read More