ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಐತಿಹಾಸಿಕ ಪರಂಪರೆ ಉಳಿಸಿ’ ಅಭಿಯಾನದಡಿ
ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ). ವಿಜಯಪುರ ಜಿಲ್ಲಾ ಸಮಿತಿಯು ಆಲಮೇಲ ತಾಲ್ಲೂಕಿನ ಕಡ್ಲೇವಾಡ ಗ್ರಾಮದ ಕಲ್ಯಾಣ ಚಾಳುಕ್ಯರ ಕಾಲದ ಪುರಾತನ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿತು.
ಶಾಸನ ತಜ್ಞರಾದ ಡಾ. ದೇವರಕೊಂಡಾರೆಡ್ಡಿ, ಅಭಾಸಾಪ ಪದಾಧಿಕಾರಿಗಳಾದ ವಿವೇಕ ಕುಲಕರ್ಣಿ, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಆನಂದ ಗೋಡಸೆ , ಮಹಾಂತೇಶ , ಶ್ರೀರಂಗ ಕುಲಕರ್ಣಿ, ಪ್ರದೀಪ ಹೂಗಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

