Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕ್ರಾಂತಿಕಾರಿ ಕವಿ ಸರ್ವಜ್ಞ

ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ

ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ
ವಿಶೇಷ ಲೇಖನ

ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ – ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ
ಮೊ ನಂ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಸಾಮಾನ್ಯ ಮಹಿಳೆಯಾಗಿದ್ದ ತಿಮ್ಮಕ್ಕನವರು ಪರಿಸರ ರಕ್ಷಣೆಗೆ ತೋರಿದ ನಿಷ್ಠೆ ನಮಗೆಲ್ಲ ಮಾದರಿ. ತಮಗೆ ಮಕ್ಕಳಿಲ್ಲದಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು, ಅವುಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೀರುಣಿಸಿ ಬೆಳೆಸಿದರು. ಯಾವುದೇ ಫಲಾಪೇಕ್ಷೆಯಿಲ್ಲದೆ ದಶಕಗಳ ಕಾಲ ಅವರು ತೋರಿದ ಸಮರ್ಪಣೆಗೆ ಜಗತ್ತು ತಲೆಬಾಗಿದೆ.
ನಮ್ಮಲ್ಲಿ ಬಹುತೇಕರು ಯಾವುದೇ ಒಂದು ಗುರಿಯನ್ನು ನಿರ್ಧರಿಸುತ್ತಾರೆ. ಅದನ್ನು ಅತಿಯಾದ ಉತ್ಸಾಹದಿಂದ ಆರಂಭಿಸುತ್ತಾರೆ. ಗುರಿಯ ಸಾಧನೆಯಲ್ಲಿ ಬರುವ ಅಡೆತಡೆಗಳಿಗೆ ಹೆದರಿ ಆ ಗುರಿಯನ್ನು ಅಲ್ಲಿಯೇ ಕೈ ಬಿಡುತ್ತಾರೆ. ಹೀಗೆ ಹತ್ತಾರು ಸಲ ಮಾಡಿ ನನ್ನಿಂದ ಯಾವುದೂ ಆಗುತ್ತಿಲ್ಲವೆಂದು ಬೇಸರಿಸುತ್ತಾರೆ. ವಾಸ್ತವದಲ್ಲಿ ಯಶಸ್ಸನ್ನು ಸಾಧಿಸಲು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಸಾಲದು. ಅದರೊಂದಿಗೆ ಸಮರ್ಪಣಾ ಭಾವ ಬೇಕು. ಮಾಡುವ ಕೆಲಸದ ಪ್ರತಿ ನಿಷ್ಠೆ ಬೇಕು. ನಿಷ್ಠೆ ಎಂದರೆ ಕೈಗೆತ್ತಿಕೊಂಡ ಕೆಲಸವನ್ನು ಯಾವುದೇ ಅಡೆತಡೆಗಳು ಬಂದರೂ ಅರ್ಧಕ್ಕೆ ನಿಲ್ಲಿಸದೆ, ಗುರಿ ತಲುಪುವವರೆಗೆ ಶ್ರಮಿಸುವುದು. ನಿಷ್ಠೆಯಿಂದ ಗುರಿಯನ್ನು ಬೆನ್ನು ಹತ್ತಿದವರೆಲ್ಲ ದೊಡ್ಡ ಸಾಧಕರಾಗಿ ಹೊರ ಹೊಮ್ಮಿದ್ದಾರೆ.
ಸಮರ್ಪಣಾ ಭಾವ ಎನ್ನುವುದು ಒಂದೇ ದಿನದಲ್ಲಿ ಬರುವಂಥದ್ದಲ್ಲ. ಇದು ನಿರಂತರ ಅಭ್ಯಾಸದಿಂದ ಸಿದ್ಧಿಸುವ ಗುಣ. ಹಾಗಿದ್ದರೆ ಸಮರ್ಪಣಾ ಭಾವದಿಂದ ಗುರಿಯತ್ತ ಮುನ್ನಡೆಯಲು ಪೂರಕ ಅಂಶಗಳಾವವು ತಿಳಿಯೋಣ ಬನ್ನಿ.
ಗುರಿ
‘ಯಾರಿಗೆ ಜೀವನದಲ್ಲಿ ಸ್ಪಷ್ಟವಾದ ಗುರಿ ಇರುವುದಿಲ್ಲವೋ, ಅವರು ಬೇರೆಯವರ ಗುರಿಯನ್ನು ತಲುಪಿಸಲು ಕೇವಲ ಕೆಲಸಗಾರರಾಗಿ ಉಳಿಯುತ್ತಾರೆ.’ ಆದ್ದರಿಂದ ಮೊತ್ತಮೊದಲನೆಯದಾಗಿ ನಿನಗೇನು ಬೇಕು ಎನ್ನುವುದರಲ್ಲಿ ನಿನಗೆ ಸ್ಪಷ್ಟತೆ ಇರಬೇಕು. ನಿನ್ನ ಮನಸ್ಸಿನಲ್ಲಿ ನಿಖರವಾದ ಚಿತ್ರಣವಿರಬೇಕು. ಗುರಿ ಸ್ಪಷ್ಟವಾಗಿದ್ದಾಗ ಮಾತ್ರ ಅದಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಒಂದು ಗುರಿಯನ್ನು ತಲುಪಲು ಕೇವಲ ಆಲೋಚನೆ ಸಾಲದು, ಅದಕ್ಕೆ ತಕ್ಕ ಕಠಿಣ ಪರಿಶ್ರಮ ಮತ್ತು ಬದ್ಧತೆ ಅತ್ಯಗತ್ಯ. ‘ಸಿದ್ದಾಂತಕ್ಕಿಂತ ಸಮರ್ಪಣೆ ಮತ್ತು ನಿರಂತರ ಪ್ರಯತ್ನ ಮುಖ್ಯ. ಕಠಿಣ ಪರಿಶ್ರಮವಿಲ್ಲದೇ ಯಾವುದೇ ಹಕ್ಕು ಅಥವಾ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.’ ಎಂದಿದ್ದಾರೆ ಡಾ. ಬಿ.ಆರ್. ಅಂಬೇಡ್ಕರ್ ಗುರಿ ತಲುಪಲು ನೂರಾರು ದಾರಿಗಳು ಇರಬಹುದು. ಆ ದಾರಿಯಲ್ಲಿ ಸಾಗಲು ನಿಮ್ಮಲ್ಲಿ ಸಮರ್ಪಣಾ ಭಾವ ಇರಬೇಕು. ಅದರೊಂದಿಗೆ ಪರಿಶ್ರಮವೂ ಬೇಕು. ಅಂತೆಯೇ ‘ಗುರಿ ತಲುಪುವ ಹಾದಿಯಲ್ಲಿ ನೂರಾರು ನಿಂದೆಯ ನುಡಿಗಳು ಟೀಕೆಗಳು ಬರಬಹುದು. ನೆನಪಿಡಿ ಕಲ್ಲು ಹೊಡೆಯುವುದು ಹಣ್ಣು ಕೊಡುವ ಮರಕ್ಕೆ ಮಾತ್ರ.’ ಸೋಲು ಎಂಬುದು ಗುರಿಗೆ ಮುಕ್ತಾಯವಲ್ಲ, ಹೊಸ ಅಧ್ಯಾಯದ ಆರಂಭ ಎನ್ನುವುದನ್ನು ಮರೆಯುವಂತಿಲ್ಲ.
ಬದ್ಧತೆ ಇರಲಿ
ಅಂದುಕೊಂಡದ್ದನ್ನು ಸಾಧಿಸಲು ಕನಸು ಕಾಣುತ್ತ ಕುಳಿತರೆ ನನಸಾಗದು. ಕೇವಲ ಆಸೆಯನ್ನು ಹೊತ್ತು ತಿರುಗುವುದರಿಂದ ಗುರಿಯ ಕನಸು ಕಾಣುವುದರಿಂದ ಯಶಸ್ಸು ಸಿಗದು. ಅದಕ್ಕೆ ಬದ್ಧತೆಯ ಬೆಂಬಲ ಬೇಕೇ ಬೇಕು. ‘ಆಸೆ ಪಡುವುದು ಸುಲಭ ಆದರೆ ಆ ಆಸೆಯನ್ನು ಸಾಧಿಸುವ ತನಕ ಪ್ರಯತ್ನಿಸುವುದೇ ಬದ್ಧತೆ.’ ನೀವು ಎಷ್ಟೇ ಉತ್ತಮ ಯೋಜನೆಗಳನ್ನು ಹೊಂದಿದ್ದರೂ ಅವು ಕೇವಲ ನಿಮ್ಮ ಮನಸ್ಸಿನಲ್ಲಿ ಇಲ್ಲವೇ ಕಾಗದದ ಮೇಲೆ ಉಳಿದುಬಿಡುತ್ತವೆ. ಯೋಜನೆಗಳ ಜತೆಗೆ ಬದ್ಧತೆ ಇರಬೇಕು. ‘ಏನೇ ಆಗಲಿ ನಾನು ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ’ ಎಂಬ ಬದ್ಧತೆ ಇದ್ದರೆ ಮಾತ್ರ ಸಮಯಕ್ಕೆ ಸರಿಯಾಗಿ ಗುರಿ ತಲುಪಲು ಸಾಧ್ಯವಾಗುವುದು. ಸರ್ ಎಂ ವಿಶ್ವೇಶ್ವರಯ್ಯ ಹೇಳಿದಂತೆ ‘ನೀವು ಯಾವುದೇ ಕೆಲಸವನ್ನು ಮಾಡಿದರೂ, ಅದನ್ನು ಜಗತ್ತಿನಲ್ಲೇ ಅತ್ಯುತ್ತಮವಾಗಿ ಮಾಡಲು ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿ.’


ಪ್ರೀತಿಸಿ
ಕೆಲಸದ ಬಗ್ಗೆ ಪ್ರೀತಿ ಇರುವುದು ಯಶಸ್ವಿ ಜೀವನಕ್ಕೆ ಬುನಾದಿಯೇ ಸರಿ. ಕೆಲಸವನ್ನು ಹೊರಗಿನ ಒತ್ತಡಕ್ಕಾಗಿ ಇಲ್ಲವೇ ಹಣಕ್ಕಾಗಿ ಮಾಡುವುದು ಸಂತೃಪ್ತಿಯನ್ನು ತರದು. ಕೆಲಸದ ಮೇಲಿನ ಪ್ರೀತಿ ಬೇಸರವನ್ನು ದೂರವಾಗಿಸಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಹಕಾರಿ. ’ನಿಮ್ಮ ಕೆಲಸವನ್ನು ನೀವು ಪ್ರೀತಿಸಿ, ಆಗ ನಿಷ್ಠೆ ಮತ್ತು ಸಮರ್ಪಣೆ ತನ್ನಿಂದ ತಾನೇ ಬರುತ್ತದೆ.’ ಎನ್ನುವ ಕಲಾಂರವರ ನುಡಿಗಳಂತೆ ಕೆಲಸ ಪ್ರೀತಿಸಿದರೆ ಸಮರ್ಪಣೆ ಅದನ್ನು ಹಿಂಬಾಲಿಸುತ್ತದೆ. ಸಾಧಕರಾರೂ ಮೊದಲಿನಿಂದ ಅಸಾಮಾನ್ಯರಾಗಿರಲಿಲ್ಲ. ಆದರೆ ಅವರು ತಮ್ಮ ಗುರಿಯತ್ತ ತೋರಿದ ಸಮರ್ಪಣಾ ಭಾವ ಅವರನ್ನು ಅಸಾಮಾನ್ಯ ಸಾಧಕರನ್ನಾಗಿಸಿತು. ಪ್ರೀತಿಯಿಂದ ಮಾಡುವ ಕೆಲಸದಲ್ಲಿ ಹೊಸ ಆಲೋಚನೆಗಳು ಕಷ್ಟದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ನಮ್ಮ ವೃತ್ತಿ ಅಥವಾ ಕರ್ತವ್ಯದ ಮೇಲಿರುವ ನಿಷ್ಠೆ ಮತ್ತು ಸಮರ್ಪಣಾ ಭಾವವೇ ನಮಗೆ ಸಮಾಜದಲ್ಲಿ ಅತ್ಯುನ್ನತ ಗೌರವ ತಂದುಕೊಡುತ್ತದೆ.
ಶ್ರಮವಹಿಸಿ
‘ನಿನ್ನ ಕಷ್ಟಕ್ಕೆ ನೀನೇ ಹೆಗಲಾಗು. ಅನ್ಯರ ದಾರಿ ಕಾಯದಿರು. ನಿನ್ನ ಗುರಿಯ ಕಡೆಗೆ ನಿನ್ನದೇ ನಡಿಗೆಯಿರಲಿ.’ ಎಂದಿದ್ದಾರೆ ಕವಿ ಕುವೆಂಪು. ಇದನ್ನು ಹೀಗೂ ಹೇಳಬಹುದು ನಿಮ್ಮ ಗುರಿ ನಿಮ್ಮದಾಗಿರಲಿ, ಅದನ್ನು ತಲುಪುವ ಶ್ರಮವೂ ನಿಮ್ಮದೇ ಆಗರಿಲಿ. ಯಶಸ್ಸು ಸಿಗಬೇಕಾದರೆ ಇತರರ ಮೇಲೆ ಅವಲಂಬಿತರಾಗದೆ, ನಮ್ಮ ಕೆಲಸಕ್ಕೆ ನಾವೇ ಸಂಪೂರ್ಣವಾಗಿ ಬದ್ಧರಾಗಿರಬೇಕು.‘ಬಲವು ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಅದು ಅಚಲವಾದ ಇಚ್ಛಾಶಕ್ತಿ ಮತ್ತು ಸಮರ್ಪಣೆಯಿಂದ ಬರುತ್ತದೆ.’ ಎನ್ನುವ ಮಹಾತ್ಮಾ ಗಾಂಧೀಜಿಯವರ ನುಡಿಯಂತೆ ದೈಹಿಕವಾಗಿ ಎಷ್ಟೇ ಬಲಶಾಲಿಯಾದಿದ್ದರೂ, ಮನಸ್ಸಿನಲ್ಲಿ ಕೆಲಸದ ಕಡೆಗೆ ದೃಢವಾದ ಬದ್ಧತೆ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ.


ಗಮನವಿರಲಿ
‘ನಿಮ್ಮ ಗಮನ ಯಾವುದರ ಮೇಲಿರುತ್ತದೆಯೋ ಅಲ್ಲಿಗೆ ನಿಮ್ಮ ಶಕ್ತಿ ಹರಿಯುತ್ತದೆ. ಮತ್ತು ಅಲ್ಲಿ ಯಶಸ್ಸು ಸೃಷ್ಟಿಯಾಗುತ್ತದೆ.’ ಗಮನದ ಕೊರತೆ ಇದ್ದರೆ ಯಶಸ್ಸು ಸಿಗುವುದು ಕಷ್ಟ. ಇಂದು ಮೊಬೈಲ್ ಯುಗ ಸಾಮಾಜಿಕ ಜಾಲತಾಣಗಳಂತಹ ಹತ್ತಾರು ವಿಚಲನಗಳ ನಡುವೆ ಗಮನವನ್ನು ಒಂದೇ ಕಡೆ ಕೇಂದ್ರೀಕರಿಸುವುದು ಕಷ್ಟದ ಕೆಲಸವೆನಿಸುತ್ತದೆ. ಆದರೆ ಒಂದೇ ಕೆಲಸದ ಮೇಲೆ ಗಮನವಿಟ್ಟಾಗ ಮನಸ್ಸು ಶಾಂತವಾಗುತ್ತದೆ. ಮತ್ತು ಮಾನಸಿಕ ಸಾಮರ್ಥ್ಯವೂ ಹೆಚ್ಚುತ್ತದೆ. ಯಾವಾಗ ಒಂದು ವಿಷಯದ ಮೇಲೆ ಆಳವಾಗಿ ಗಮನ ಹರಿಸುತ್ತೇವೆಯೋ ಅಲ್ಲಿ ಸೃಜನಶೀಲ ಪರಿಹಾರಗಳು ದೊರೆಯುತ್ತವೆ. ಸಣ್ಣ ಕೆಲಸವಿರಲಿ ಅಥವಾ ದೊಡ್ಡ ಕೆಲಸವಿರಲಿ, ಅದರಲ್ಲಿ ಪರಿಪೂರ್ಣತೆ ಸಾಧಿಸಲು ನಮ್ಮ ಪೂರ್ಣ ಗಮನವನ್ನು ನೀಡಬೇಕು. ನಿಮ್ಮ ಇಡೀ ಮನಸ್ಸು, ಶರೀರ ಮತ್ತು ಶಕ್ತಿಯನ್ನು ಒಂದೇ ಗುರಿಗೆ ಸಂಪೂರ್ಣವಾಗಿ ಸಮರ್ಪಿಸಿದಾಗ ಮಾತ್ರ ಯಶಸ್ಸು ಸಾಧ್ಯ.
ಉತ್ಸಾಹವಿರಲಿ
ಉತ್ಸಾಹವಿಲ್ಲದಿದ್ದರೆ ಯಾವ ಕೆಲಸದಲ್ಲೂ ಉತ್ತಮ ಫಲಿತಾಂಶ ಪಡೆದುಕೊಳ್ಳುವುದು ದುರ್ಲಭ. ಸಾಧಕರೆಲ್ಲರೂ ಈ ರೀತಿಯ ಉತ್ಸಾಹದ ಮಹತ್ವವನ್ನು ಅರಿತವರೆ. ಇದನ್ನೇ ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ. ‘ಒಂದು ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು ಆಲೋಚನೆಯನ್ನೇ ನಿಮ್ಮ ಜೀವನವಾಗಿಸಿ. ಅದರ ಬಗ್ಗೆಯೇ ಯೋಚಿಸಿ, ಅದರ ಕನಸು ಕಾಣಿ, ಆ ಆಲೋಚನೆಯಲ್ಲೇ ಬದುಕಿ.’ ‘ನಿಮ್ಮ ಕೆಲಸಕ್ಕೆ ನೀವು ಕೈಮುಗಿದರೆ ಬೇರೆ ಯಾರಿಗೂ ಕೈಮುಗಿಯುವ ಅಗತ್ಯವಿರುವುದಿಲ್ಲ. ಆದರೆ ನಿಮ್ಮ ಕೆಲಸವನ್ನು ನೀವು ನಿರ್ಲಕ್ಷಿಸಿದರೆ ಎಲ್ಲರಿಗೂ ಕೈಮುಗಿಯಬೇಕಾಗುತ್ತದೆ.’ ಎಂಬ ಡಾ.ಎ.ಪಿ.ಜೆ.. ಅಬ್ದುಲ್ ಕಲಾಂರವರ ಮಾತುಗಳು ಮನನ ಯೋಗ್ಯ. ಕೇವಲ ಉತ್ಸಾಹದಿಂದಲೇ ಸಾಧನೆ ಸಾಧ್ಯವಿಲ್ಲ. ಗುರಿಯತ್ತ ಸಾಗಲು ಕೆಲಸದ ಮೇಲೆ ಪ್ರೀತಿಯೊಂದಿಗೆ ಸಮರ್ಪಣಾ ಭಾವವಿದ್ದರೆ ಮಾತ್ರ ಕೊನೆಯಿರದ ಸಾಧನೆಗೆ ಹಾದಿ ತೆರೆಯುವುದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕ್ರಾಂತಿಕಾರಿ ಕವಿ ಸರ್ವಜ್ಞ

ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ

ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ :ಸಲೀಮ್ ಮರ್ತೂರ್

ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಿ :ಯಂಪೂರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕ್ರಾಂತಿಕಾರಿ ಕವಿ ಸರ್ವಜ್ಞ
    In ವಿಶೇಷ ಲೇಖನ
  • ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ
    In ವಿಶೇಷ ಲೇಖನ
  • ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ
    In (ರಾಜ್ಯ ) ಜಿಲ್ಲೆ
  • ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ :ಸಲೀಮ್ ಮರ್ತೂರ್
    In (ರಾಜ್ಯ ) ಜಿಲ್ಲೆ
  • ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಿ :ಯಂಪೂರೆ
    In (ರಾಜ್ಯ ) ಜಿಲ್ಲೆ
  • ವಿಶೇಷ ಚೇತನರು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯಬೇಕು
    In (ರಾಜ್ಯ ) ಜಿಲ್ಲೆ
  • ಜೂ.೧೮ರಿಂದ ಬಂಜಾರ ಯುವಕ-ಯುವತಿಯರಿಗೆ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ಉಪವಿಭಾಗ ಕಚೇರಿ ಆರಂಭಕ್ಕೆ ಒತ್ತಾಯಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಯೋಜನೆಗಳು ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.