ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳೆ ಪ್ರತಿ ವಿಭಾಗದಲ್ಲಿ ತಮ್ಮ ಪ್ರತಿಭೆ ತೋರುವುದರ ಮೂಲಕ ಪ್ರಬುದ್ಧತೆ ತೋರಿದ್ದಾಳೆ ಎಂದು ಸದಯ್ಯನಮಠ ವೀರಗಂಗಾಧರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ಸಭಾವನದಲ್ಲಿ ಬುಧವಾರ ವುಮನ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಅಡಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆ ಅಬಲೆ ಎನ್ನುವ ಕಾಲ ಮುಗಿಯಿತು. ಏನಿದ್ದರೂ ಈಗ ಮಹಿಳೆ ಸಬಲೆ ಹಾಗೂ ಸರ್ವರಂಗದಲ್ಲೂ ಸಾಧಕಿ ಎಂದರು.
ತವರುಮನೆ ಟ್ರಸ್ಟ್ ಅಧ್ಯಕ್ಷೆ ಮಂಜುಳಾ ನಾಯಕ, ಆರೋಗ್ಯ ಇಲಾಖೆಯ ಸುಕನ್ಯಾ ಚಳಗೇರಿ, ಪಿಎಸ್‌ಐ ಪಿ.ಎಂ.ಚೌರ, ಮೀನಾಕ್ಷಿ ಮಸಬಿನಾಳ, ರೇಣುಕಾ ಬಿರಾದಾರ ಮಹಿಳೆಯರ ಸಾಧನೆಗಳ ಕುರಿತು ಮಾತನಾಡಿದರು.
ಸರಸ್ವತಿ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಶಬಾನಾ ಯಲಗಾರ, ಪುಷ್ಪಾ ಬಿರಾದಾರ, ಅರ್ಚನಾ ಪಾಟೀಲ, ದಾನಮ್ಮ, ನಂದಿನಿ ಕೋಟ್ಯಾಳ, ಕಮಲಾ ಬಾಗೇವಾಡಿ, ಭಾಗೀರಥಿ ದೇಗಿನಾಳ, ಕೌಶಲ್ಯಾ ಬಾಗೇವಾಡಿ, ಅಂಬಿಕಾ ಕೊಂಡಗೂಳಿ, ರವೀನಾ ಚವ್ಹಾಣ, ನಾಗಮ್ಮಾ ತಳಕೇರಿ, ಶಾಂತಾಬಾಯಿ ಭೈರೋಡಗಿ, ಸುಮಂಗಲಾ ಇಂಡಿ, ಚಾಂದಬಿ ಆಲಮೇಲ, ರೇಣುಕಾ ದಾನಗೊಂಡ, ಭೋರಮ್ಮಾ ಜೋಗೂರ ಶಕೀರಾ ಹೆಬ್ಬಾಳ ಇದ್ದರು.

