ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಲೋಟಗಿಯ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಪ್ರಸಿದ್ದ ನೀರಾಟ ಏ.೬ ರಂದು ನಡೆಯಲಿದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ ೩ ರಿಂದ ೫ ನೇ ತಾರಿಖಿನ ರವಿವಾರದ ವರೆಗೆ ದಿನ ನಿತ್ಯ ಊರ ಒಳಗಿನ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ಪೂಜೆ ನಡೆಯುವದು.
ಸೋಮವಾರ ೬ರಂದು ಶ್ರೀ ಶಿವಯೋಗೀಶ್ವರರು ರಾತ್ರಿ ೯ ಗಂಟೆಗೆ ಊರ ಒಳಗಿನ ದೇವಸ್ಥಾನದಿಂದ ವಿಶೇಷ ತರಹದ ಮದ್ದು ಸುಡುತ್ತ ಉತ್ಸವದಿಂದ ಹೊರಟು ಹೊರಗಿನ ದೇವಸ್ಥಾನದಲ್ಲಿ ವಾಸ್ತವ್ಯ, ಹಾಗೂ ರಾತ್ರಿ ಒಂದು ಗಂಟೆಯಿಂದ ಬೆಳಗ್ಗೆ ೬ ಗಂಟೆಯ ವರೆಗೆ ನೀರಾಟ ಉತ್ಸವ ಜರಗುವದು.
ಏ ೭ ರಿಂದ ಏ ೧೩ ರ ವರೆಗೆ ಹೊರಗಿನ ದೇವಸ್ಥಾನದಲ್ಲಿ ಮುಂಜಾನೆ ೫ ಗಂಟೆಯಿAದ ಬೆಳಗ್ಗೆ ೭ ಗಂಟೆಯ ವರೆಗೆ ಹಾಗೂ ಸಂಜೆ ೪ ಗಂಟೆಯಿಂದ ೬ ಗಂಟೆಯ ವರೆಗೆ ನಿತ್ಯ ಶಿವ ಪೂಜೆ ಜರಗುವದು.
೧೩ ರಂದು ಸೋಮವಾರ ಮಹಾ ಪ್ರಸಾದ, ರಾತ್ರಿ ೧೦ ಗಂಟೆಯಿಂದ ಗೀ ಗೀ ಪದಗಳು, ೧೪ ರಂದು ಮಂಗಳವಾರ ಕಡೆಯ ಜಾತ್ರೆ ಜರಗುವದು. ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

