ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಠ ಮಾನ್ಯಗಳಿಂದಲೇ ತಾಲೂಕು ಪ್ರಸಿದ್ದಿ ಪಡೆದಿದೆ. ಹಲವಾರು ಮಠಗಳು ಅನ್ನ ಪ್ರಸಾದ, ಉಚಿತ ಶಿಕ್ಷಣ ಹುಣ್ಣಿಮೆ ಕಾರ್ಯಕ್ರಮದಂತಹ ಸಂಸ್ಕಾರ ನೀಡುತ್ತಿವೆ. ಸತ್ಸಂಗದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಹೇಳಿದರು.
ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ೬೦ ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಧಾರ್ಮಿಕತೆಯನ್ನು ಬೆಳೆಸಿಕೊಂಡು ಹೋಗಲು ಇಂದಿನ ಯುವ ಪೀಳಿಗೆ ಮುಂದಾಗಬೇಕಿದೆ. ಯಾವದೇ ಕೆಲಸ ವಿರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೆಮ್ಮದಿ ಬದುಕು ಸಾಗಿಸಲು ಸಾದ್ಯ ಎಂದರು.
ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮಾತನಾಡಿದರು.
ವೇದಿಕೆಯ ಮೇಲೆ ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ ವೇದಿಕೆಯ ಮೇಲೆ ಇದ್ದರು.
ಶ್ರೀಮತಿ ರಾಚಮ್ಮ ಬಸಯ್ಯ ನಿಂಬರಗಿಮಠ ದಂಪತಿಗಳು, ಶ್ರೀಮತಿ ಚೆನ್ನಮ್ಮ ಚಂದ್ರಕಾಂತ ಉಪ್ಪಿನ ದಂಪತಿಗಳು ಶ್ರೀಮತಿ ಸುಗಲಾಬಾಯಿ ಭೀಮನಗೌಡ ಪಾಟೀಲ ದಂಪತಿಗಳು ಶ್ರೀಮತಿ ಮಹಾದೇವಿ ಚನ್ನಗೌಡ ಪಾಟೀಲ ದಂಪತಿಗಳು, ಪಾರ್ವತಿ ಶಂಕರ ಮಜ್ಜಗಿ ದಂಪತಿಗಳನ್ನು ಸನ್ಮಾನಿಸಲಾಯಿತು.

