Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 05, 2026

ರಾಷ್ಟ್ರವನ್ನು ಆಧುನಿಕತೆಯತ್ತ ಮುನ್ನಡೆಸಿದ ಡಾ.ಬಾಬು ಜಗಜೀವನರಾಂ

ಜೀವನ ಜ್ಯೋತಿ ಭೀಮಾ ಯೋಜನೆ: ರೂ.2 ಲಕ್ಷ ಪರಿಹಾರ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೋದಿ 165 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ :ಸಿಎಂ
(ರಾಜ್ಯ ) ಜಿಲ್ಲೆ

ಮೋದಿ 165 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ :ಸಿಎಂ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

‘ಮುಸ್ಲಿಮರನ್ನು ದೇಶಬಿಟ್ಟು ಓಡಿಸೋಕೆ ಆಗುತ್ತಾ? | ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.
ಯುಗಾದಿ, ದೀಪಾವಳಿ, ಶಿವರಾತ್ರಿಯಂತಹ ಹಬ್ಬದ ಸಮಯದಲ್ಲಿ ನಾನು ಮಾಂಸ ತಿನ್ನುವುದು ನಿಜ, ಆಹಾರ ಸೇವನೆ ನನ್ನ ಹಕ್ಕು, ನಾನು ಯಾಕೆ ತಿನ್ನಬಾರದು, ಅದರಲ್ಲೇನು ತಪ್ಪು ಎಂದು ಕೇಳಿದರು.
ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಗಳನ್ನೂ ಖಂಡಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ, ತಾವು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 3000 ರೂಪಾಯಿ. ನೀಡುವುದಾಗಿ ಮತ್ತು ಕಲ್ಲು ತೂರಾಟ ನಡೆಸಿದರೆ ಅಂತಹ ಮತ್ತು ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಬುಲ್ಡೋಜರ್ ಮೂಲಕ ಕೆಡವುದಾಗಿ ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸಿದರು.
ಇಂತಹ ಹೇಳಿಕೆಗಳು ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿವೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಸಮಂಜಸವಾಗಿವೆ, ಮುಸಲ್ಮಾನರು ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಅವರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಸಹಿಸಲಾಗದು ಎಂದರು.

ಮುಸಲ್ಮಾನರು ಶೇ.14 ಕ್ಕಿಂತ ಹೆಚ್ಚು ಇದ್ದಾರೆ

ನಮ್ಮ ರಾಜ್ಯದಲ್ಲಿ ಶೇಕಡಾ 14ಕ್ಕಿಂತ ಹೆಚ್ಚು ಜನ ಮುಸಲ್ಮಾನರಿದ್ದಾರೆ. ಬಜೆಟ್ ಗಾತ್ರ 4 ಲಕ್ಷದ 48 ಸಾವಿರದ 4 ಕೋಟಿ ರೂಪಾಯಿ, ಬಜೆಟ್ ಓದದೆ ಬಿಜೆಪಿ ನಾಯಕರು ಹೇಳಿಕೆ ಕೊಡುತ್ತಾರೆ. ನಾನು ನಾಲ್ಕೂವರೆ ಗಂಟೆ ಅಸೆಂಬ್ಲಿಯಲ್ಲಿ ಮತ್ತು ಮೂರೂವರೆ ಗಂಟೆ ಕೌನ್ಸಿಲ್ ನಲ್ಲಿ ಉತ್ತರ ಕೊಟ್ಟಿದ್ದೇನೆ, ವಿಜಯೇಂದ್ರ ಶ್ವೇತಪತ್ರ ಮಂಡಿಸಿ ಎನ್ನುತ್ತಾರೆ, ಬಜೆಟ್ ನಲ್ಲಿ ಎಲ್ಲ ಹೇಳಿರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೋದಿ ರೂ.165 ಲಕ್ಷ ಕೋಟಿ ಸಾಲ ಮಾಡವ್ರೆ

ಜಿಡಿಪಿಯಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಸಾಲ ಆಗಬಾರದು, ನಮ್ಮದು 24.94ರಲ್ಲಿದೆ, ಸಾಲ ನಿಗದಿ ಮಾಡುವವರು ಕೇಂದ್ರ ಸರ್ಕಾರ, ರಾಜ್ಯಗಳು ಸಿಕ್ಕಾಪಟ್ಟೆ ಮಾಡಲಾಗುವುದಿಲ್ಲ. ಸಿದ್ದರಾಮಯ್ಯ ಸಾಲ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುವುದು ಹಸಿ ಸುಳ್ಳು. ವಿತ್ತೀಯ ಜವಬ್ದಾರಿ ಕಾಯ್ದೆ ಪ್ರಕಾರವೇ ನಾನು ಸಾಲ ಮಾಡಿರುವುದು. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ, ಕೇಂದ್ರ ಸರ್ಕಾರದಿಂದ ಉತ್ತಮವಾಗಿದೆ.
ಕೇಂದ್ರ ಸರ್ಕಾರದ ಜಿಡಿಪಿ 7.14 ಶೇಕಡಾದಷ್ಟಿದ್ದರೆ ಕರ್ನಾಟಕದ ಜಿಡಿಪಿ 8.1 ಶೇಕಡಾ ಇದೆ. ನಾವು ಕೇಂದ್ರ ಸರ್ಕಾರದಿಂದ ಉತ್ತಮ ಮಟ್ಟದಲ್ಲಿದ್ದೇವೆ. ಮೋದಿ ಸರ್ಕಾರ 165 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ.
2014ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಸಾಲ 53 ಲಕ್ಷದ 11 ಸಾವಿರ ಕೋಟಿ ರೂಪಾಯಿ, ಈಗ ಅದು 2027 ಮಾರ್ಚ್ ಗೆ 218 ಲಕ್ಷ ಕೋಟಿ ರೂಪಾಯಿ ಆಗಬಹುದು. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಮಾಡಿದ ಸಾಲ 165 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿಅಂಶ ನೀಡಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 05, 2026

ರಾಷ್ಟ್ರವನ್ನು ಆಧುನಿಕತೆಯತ್ತ ಮುನ್ನಡೆಸಿದ ಡಾ.ಬಾಬು ಜಗಜೀವನರಾಂ

ಜೀವನ ಜ್ಯೋತಿ ಭೀಮಾ ಯೋಜನೆ: ರೂ.2 ಲಕ್ಷ ಪರಿಹಾರ ವಿತರಣೆ

ಅಕ್ಕಮಹಾದೇವಿ ಇಡೀ ಸ್ತ್ರೀ ಕುಲದ ಸಂಕೇತ :ಸಚಿವ ಎಂ.ಬಿ.ಪಾಟೀಲ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 05, 2026
    In ದಿನಪತ್ರಿಕೆ
  • ರಾಷ್ಟ್ರವನ್ನು ಆಧುನಿಕತೆಯತ್ತ ಮುನ್ನಡೆಸಿದ ಡಾ.ಬಾಬು ಜಗಜೀವನರಾಂ
    In ವಿಶೇಷ ಲೇಖನ
  • ಜೀವನ ಜ್ಯೋತಿ ಭೀಮಾ ಯೋಜನೆ: ರೂ.2 ಲಕ್ಷ ಪರಿಹಾರ ವಿತರಣೆ
    In (ರಾಜ್ಯ ) ಜಿಲ್ಲೆ
  • ಅಕ್ಕಮಹಾದೇವಿ ಇಡೀ ಸ್ತ್ರೀ ಕುಲದ ಸಂಕೇತ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಅಂಗವಿಕಲತೆ ಎನ್ನುವುದು ಶಾಪವಲ್ಲ :ಉಮರಾಣಿ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ದುಡ್ಡಿನ ಮಹತ್ವ, ಅನ್ನದ ಬೆಲೆ ತಿಳಿಸಿಕೊಡಿ :ಆನಂದ ದೇವರು
    In (ರಾಜ್ಯ ) ಜಿಲ್ಲೆ
  • ಏ.30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯಿತಿ :ತಾವಸೆ
    In (ರಾಜ್ಯ ) ಜಿಲ್ಲೆ
  • ಏ.13 ರಂದು ಪಪಂ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು
    In (ರಾಜ್ಯ ) ಜಿಲ್ಲೆ
  • ತಾಯಂದಿರು ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸಬೇಕು :ಸಿದ್ದಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಕುರಿಗಾಹಿ ಆತ್ಮಹತ್ಯೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.