Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದಲಾದ ನಮ್ಮ ಜೀವನಶೈಲಿಯಲ್ಲಿ ಮೊದಲೆಲ್ಲ ಸಾಮಾನ್ಯವಾಗಿದ್ದ ಸಂಸ್ಕೃತಿ ಸಂಸ್ಕಾರಗಳು ಅಪರೂಪವೆನಿಸುತ್ತಿವೆ. ಯಾವುದೇ ಒಂದು ವಸ್ತು, ವ್ಯಕ್ತಿ, ನಿತ್ಯ ಜೀವನದಲ್ಲಿ ಬಳಕೆಯಲ್ಲಿದ್ದರೆ ಮಾತ್ರ ಅವು ಜೀವಂತಿಕೆಯನ್ನು ಉಳಿಸಿಕೊಳ್ಳುತ್ತವೆ. ಇಲ್ಲದಿದ್ದರೆ, ಅವು ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತವೆ. ಬರಬರುತ್ತ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಚರಿತ್ರೆಯ ಪುಟಗಳನ್ನು ಸೇರಿಕೊಳ್ಳುತ್ತವೆ. ಕೆಲವೊಮ್ಮೆಯಂತೂ ಹೇಳ ಹೆಸರಿಲ್ಲದಂತೆ ಕಾಲಗರ್ಭದಲ್ಲಿ ಅಡಗಿ ಹೋಗುತ್ತವೆ. ಹಾಗೆಯೇ ಚೆಂದದ, ಗೆಲುವಿನ, ಸರಳ ಜೀವನವೆನ್ನುವುದು ಕೂಡ ತನ್ನ ಅರ್ಥವನ್ನು ಕಳೆದುಕೊಂಡು ಕೇವಲ ದಂತ ಕಥೆಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಬರುವ ಕಥೆಗಳಿಗೆ ಮಾತ್ರ ಸೀಮಿತವಾಗಿವೆ ಎಂಬುದು ನಮ್ಮ ಹಿರಿಯರ ಅಂಬೋಣ. ಇತ್ತೀಚಿಗಂತೂ ಗೊಣುಗುವುದೇ ಜೀವನದ ಪಾಡಾಗಿದೆ. ನಮ್ಮ ಬದುಕಿನಲ್ಲಿ ಅದು ಇಲ್ಲ ಇದು ಇಲ್ಲ. ಇದ್ದರೆ ಸಾಲುವುದಿಲ್ಲ. ಇಲ್ಲದ್ದು ಬೇಕಾಗುತ್ತದೆ. ಇದ್ದದ್ದು ಬೇಡವೆಂದು ಎಸೆಯಬೇಕೆನಿಸುತ್ತದೆ. ಒಟ್ಟಿನಲ್ಲಿ ಯಾವುದಕ್ಕೂ ಸಂತಸವಿಲ್ಲ. ಬೇಕು ಬೇಡಗಳ ಸಂತೆಯಲ್ಲಿ ದಿನವೂ ಅಳುವುದೇ ಬಾಳು ಎನಿಸಿದೆ. ನಮ್ಮ ಹಿರಿಯರೆಲ್ಲ ಇದ್ದುದ್ದರಲ್ಲೇ ಆನಂದದ ಸುದೀರ್ಘ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ೮ನೇ ವಾರ್ಡಿನ ತಡಪಟ್ಟಿ ನಿವೇಶನದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡ ಲಕ್ಷ್ಮೀದೇವಿಯ ಜಾತ್ರೆಯನ್ನು ಭಕ್ತಿ, ಭಾವದಿಂದ ಆಚರಿಸಲಾಯಿತು.ಪಟ್ಟಣದಲ್ಲಿ ಬುಧವಾರ ಸಾಂಪ್ರದಾಯಿಕ ಲಕ್ಷ್ಮೀ ದೇವಿಯ ಜಾತ್ರೆಯ ಅಂಗವಾಗಿ ಬೆಳಿಗ್ಗೆಯಿಂದಲೇ ಶಾಸ್ತ್ರೋಕ್ತ ಪೂಜೆ ಆರಂಭಗೊಂಡಿತು. ನಂತರ ದೇವಿಯ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಮೇನ್ ಬಜಾರ್, ತೇರು, ಗದ್ದಿಗೆಮಠ ರಸ್ತೆ ಮೂಲಕ ಮೂಲ ದೇವಸ್ಥಾನ ತಲುಪಿತು. ನಂತರ ಮಹಾಪ್ರಸಾದ ಜರುಗಿತು.ಜಾತ್ರೆಯಲ್ಲಿ ಗುರುಪಾದ ಬುದ್ನಿ, ಗುರುರಾಜ್ ದೇಸಾಯಿ, ರಾಜಶೇಖರ ಅತನೂರ, ರಮೇಶ ಈಳಗೇರ, ಶ್ರೀನಿವಾಸ ಪಾಟೀಲ(ವರ್ಕಾನಳ್ಳಿ), ಸದಾನಂದ ಮಣೂರ ನೇತೃತ್ವ ವಹಿಸಿದ್ದರು.ಶ್ರೀಶೈಲ ದೇಸಾಯಿ, ಅಭಿಜಿತ ತಡಪಟ್ಟಿ, ಸೀಮಾ ಬುದ್ನಿ, ಲತಾ ತಟಪಟ್ಟಿ ಸ್ಮೀತಾ ಈಳಗೇರ, ಪ್ರೀತಿ ಅತನೂರ, ಪ್ರೀತಿ ಪಾಟೀಲ, ಮಂಜುಳಾ ಮಣೂರ, ರೇಖಾ ಅತನೂರ, ಕಸ್ತೂರಿ ದೇಸಾಯಿ, ಸೇರಿದಂತೆ ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕಿತ್ತೂರು ರಾಣಿ ಚನ್ನöಮ್ಮಳ ೨೦೦ನೇ ವಿಜಯೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ಸಂಚರಿಸುತ್ತಿರುವ ವಿಜಯಜ್ಯೋತಿ ರಥಯಾತ್ರೆಯನ್ನು ಮಂಗಳವಾರ ರಾತ್ರಿ ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಪ್ರಮುಖರು ಸ್ವಾಗತಿಸಿ, ಬಿಳ್ಕೋಟ್ಟರು.ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ರಾತ್ರಿ ೧೧ ಗಂಟೆಗೆ ಆಗಮಿಸಿದ ವಿಜಯಜ್ಯೋತಿ ರಥಯಾತ್ರೆಗೆ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ ಅವರ ನೇತೃತ್ವದಲ್ಲಿ ಸ್ವಾಗತಿಸಿ, ರಾಣಿ ಚನ್ನಮ್ಮಳ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು.ಗ್ರಾಮಾಡಳಿತಾಧಿಕಾರಿ ಅನೀಲ ರಾಠೋಡ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಶಂಕರಗೌಡ ಪಾಟೀಲ (ಯರನಾಳ), ಕೆ.ಜಿ.ಭಾವಿಮನಿ, ಪಂಚಾಕ್ಷರಿ ಮಿಂಚನಾಳ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ವಿರೇಶ ಕುದರಿ, ಶಿವನಗೌಡ ಪಾಟೀಲ(ಯರನಾಳ), ರಾಮು ದೇಸಾಯಿ, ಅಪ್ಪುಗೌಡ ಪಾಟೀಲ, ಪವನ ಪಾಟೀಲ ಸಹಿತ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣಕ್ಕೆ ಆಗಮಿಸಿದ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ರಾವುತರಾಯ , ಮಲ್ಲಯ್ಯ ಜಾತ್ರಾ ಕಮೀಟಿ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟರು.ಪಟ್ಟಣದ ಮೂಲಕ ವಿಜಯಪುರಕ್ಕೆ ಪ್ರಯಾಣ ಬೆಳೆಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಮಂಗಳವಾರ ಬಿಜೆಪಿ ಕಾರ್ಯಕರ್ತರು ಮಲ್ಲಯ್ಯ ದೇವಸ್ಥಾನದ ಮುಂದೆ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಿ.ಟಿ.ರವಿ ಮಲ್ಲಯ್ಯ ದೇವಸ್ಥಾನಕ್ಕೆ ತೆರಳಿ ರಾವುತರಾಯ, ಮಲ್ಲಯ್ಯನ ದರ್ಶನ ಪಡೆದರು. ನಂತರ ಜಾತ್ರಾ ಕಮೀಟಿಯಿಂದ ಸನ್ಮಾನ ಸ್ವೀಕರಿಸಿದರು.ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸಹ ವಿಜಯಪುರಕ್ಕೆ ತೆರಳುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಯುವಜನತೆ ಇವರನ್ನು ಮಲ್ಲಯ್ಯ ದೇವಸ್ಥಾನದ ಮುಂದೆ ಸ್ವಾಗತಿಸಿ ಸನ್ಮಾನಿಸಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪಣ್ಣ ತಡವಲ್, ಜಾತ್ರಾ ಸಮಿತಿ ಅಧ್ಯಕ್ಷ ವಿನೋದ ಪಾಟೀಲ, ಉಪಾಧ್ಯಕ್ಷ…
ಮುಡಾ ಅಧ್ಯಕ್ಷ ಕೆ.ಮರಿಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ | ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿ? | ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಉದಯರಶ್ಮಿ ದಿನಪತ್ರಿಕೆ ನವದೆಹಲಿ: ಕೆ ಮರಿಗೌಡ ಅವರು ಮುಡಾ ಅಧ್ಯಕ್ಷ ಸ್ಥಾನದಿಂದ ಬುಧವಾರ ಕೆಳಗಿಳಿದ ಬೆನ್ನಲ್ಲೇ, ಭೂ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂರ್ಯ ಮುಳುಗುದರೊಳಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರಿಗೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಅಧ್ಯಕ್ಷ ಕೆ ಮರಿಗೌಡ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮುಡಾ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಿಮ್ಮಲ್ಲಿ ಕಿಂಚಿತ್ತೂ ನೈತಿಕತೆ ಉಳಿದಿದ್ದರೆ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಇಂದು ಸೂರ್ಯಾಸ್ತದೊಳಗೆ ರಾಜೀನಾಮೆ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ಸಂಸದ ಸಂಬಿತ್ ಪಾತ್ರಾ ಒತ್ತಾಯಿಸಿದ್ದಾರೆ.ಮರಿಗೌಡ ಅವರ ರಾಜೀನಾಮೆ ಮತ್ತು ಸಿದ್ದರಾಮಯ್ಯ ಅವರ ಪತ್ನಿ ಅವರಿಗೆ ಮಂಜೂರು…
ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: 2024 ರಿಂದ 2029 ಅವಧಿಗೆ ನಡೆಯುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಯುಕ್ತ ಯಡ್ರಾಮಿ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನಕ್ಕೆ ಕಣಮೇಶ್ವರ ಪ್ರೌಡ ಶಾಲೆಯ ಶಿಕ್ಷಕ ನಿಂಗಣ್ಣ ದೊಡಮನಿ ಬುಧವಾರ ಪಟ್ಟಣದ ನೌಕರರ ಸಂಘದ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಈ ವೇಳೆ ಶಿಕ್ಷಕರಾದ ಬಲವಂತ್ರಾಯ ಹಿರೇಗೌಡರ, ಪ್ರಭುಗೌಡ ದೇಸಾಯಿ, ಪ್ರಭು ಯಾಳಗಿ, ಉದಂಡಪ್ಪ ರತ್ನಾಕರ, ಸುಭಾಸ ಸಿಂಗ್ ರಜಪೂತ್, ಮಹೇಶ ಹಾವರೆಡ್ಡಿ, ಪ್ರವೀಣ ಬಿರಾದಾರ ಇದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಯುದ್ದದಲ್ಲಿ ಗೆಲುವು ಸಾಧಿಸಿದ ೨೦೦ ನೇ ವಿಜಯೋತ್ಸವದ ಅಂಗವಾಗಿ ರಾಜ್ಯದ ಎಲ್ಲೆಡೆ ಸಂಚರಿಸುತ್ತಿರುವ ವಿಜಯ ಜ್ಯೋತಿ ರಥಯಾತ್ರೆಯನ್ನು ಮಂಗಳವಾರ ತಾಲ್ಲೂಕಾ ಆಡಳಿತ ದಿಂದ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡ ಐತಿಹಾಸಿಕ ಕಿತ್ತೂರು ಉತ್ಸವ -೨೦೨೪ ರ ೨೦೦ ನೇ ವಿಜಯೋತ್ಸವದ ವಿಜಯ ಜ್ಯೋತಿ ರಥ ಯಾತ್ರೆಯು ತಾಲೂಕಿನ ಹೊನಗನಹಳ್ಳಿ ಮಂಗಮ್ಮದೇವಿ ದೇವಸ್ಥಾನದ ಬಳಿ ತಹಶೀಲ್ದಾರ ಎಸ್ ಎಸ್ ನಾಯಕಲಮಠ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಪುತ್ಥಳಿಗೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ ಭವ್ಯವಾಗಿ ಸ್ವಾಗತವನ್ನು ಕೋರಿ ವಿಜಯ ಜ್ಯೋತಿ ಯಾತ್ರಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ತಾಲೂಕಿನ ಗುರುಹಿರಿಯರು ಮುಖಂಡರು ವೀರಮಾತೆ ಕಿತ್ತೂರು ಚೆನ್ನಮ್ಮಳ ರಥಕ್ಕೆ ಮಾಲಾರ್ಪಣೆ ಮಾಡಿ ,ಪೂಜೆ ಸಲ್ಲಿಸಿ ಜಯ ಘೋಷ ಹಾಕಿದರು. ನಂತರ ೨೧೮ ರಾಷ್ಟ್ರೀಯ ಹೆದ್ದಾರಿ ಮೂಲಕ ವಿಜಯ ಜ್ಯೋತಿ ಯಾತ್ರೆ ರಥವು ಮಲಘಾಣ ಕ್ರಾಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಕೊಡಮಾಡುವ ರಾಜ್ಯ ಮಟ್ಟದ “ಜಾನಪದ ಪ್ರಪಂಚ ” ಪ್ರಶಸ್ತಿಗೆ ರಾಜ್ಯದ ಜನಪದ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ.ಇದೆ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲೆಗೆ ಒಬ್ಬರನ್ನು ಆಯ್ಕೆಮಾಡಲಾಗುವುದು. 5000 ರೂ ನಗದು,ಪ್ರಶಸ್ತಿ ಪತ್ರ, ನೆನಪಿನ ಸ್ಮರಣಿಕೆಯೊಂದಿಗೆ ಗೌರವಿಸಲಾಗುವುದು.ಜನಪದ ಮೂಲ ಕಲಾವಿದರು 55 ವರ್ಷ ತುಂಬಿರಬೇಕು. ತಮ್ಮ ಸೇವಾವದಿಯ ಫೋಟೊ, ಪ್ರಮಾಣಪತ್ರ, ಪತ್ರಿಕಾ ವರದಿ , ಶಿಫಾರಸ್ಸು ಪತ್ರ ಮತ್ತು ಆಧಾರ್ ಕಾರ್ಡ ಇತ್ಯಾದಿಗಳೊಂದಿಗೆ ದಿನಾಂಕ 20.10.2024 ರ ಒಳಗಾಗಿ ಜಿಲ್ಲಾಧ್ಯಕ್ಷರಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.ಅರ್ಜಿ ಕಳಿಸುವ ವಿಳಾಸ: ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್ ವಿಜಯಪುರ.ರೇನಬೋ ಫೋಟೊ ಸ್ಟುಡಿಯೋ. ವಿಠ್ಠಲ ಮಂದಿರ ರಸ್ತೆ. ಕೆನರಾ ಬ್ಯಾಂಕ್ ಎದುರು. ಮಿಲನ ಬಾರ್ ಹಿಂದೆ, ವಿಜಯಪುರ ಇಲ್ಲಿಗೆ ಕಳಿಸಲು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಠದಲ್ಲಿ ಅ.೧೭ರಂದು ನಡೆಯುವ ಹುಣ್ಣಿಮೆ ೮ನೆಯ ಮಾಸಿಕ ಶರಣಾನುಭವ ಹಾಗೂ ಘನ ಶರಣ ಹರಳಯ್ಯ-ಮಧುರಸ ಶೀಲವಂತ ಶರಣರ ಹುತಾತ್ಮರಾದ ದಿನ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ ಕನ್ನಡ ಜನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪಡಗಾನೂರ ಅವರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಶ್ರೀಮಠದ ಪ್ರಭುಲಿಂಗ ಶರಣರು ತಿಳಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಅ.೧೭ರಂದು ಸಾಯಂಕಾಲ ೬:೩೦ಗಂಟೆಗೆ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ೩೩೫ನೆಯ ಸದ್ವೀಚಾರ ಗೋಷ್ಠಿ ಜರುಗಲಿದೆ.ಸಾನಿಧ್ಯವನ್ನು ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಬ್ಯಾಕೋಡ ಗ್ರಾಮದ ನಿವೃತ್ತ ಜಿಲ್ಲಾ ಸಾಂಖಿಕಾಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ ಮಾಜಿ ತಾಲೂಕಾಧ್ಯಕ್ಷ ಚನ್ನಪ್ಪ ಕತ್ತಿ ಅತಿಥಿ ಲಲಿತ ಸಹಸ್ರನಾಮ ಜಪದ ಮಹತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ.ಈ ವೇಳೆ ನೂತನವಾಗಿ ಅಖಿಲ ಭಾರತ ವೀರಶೈವ ಮಹಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮಲ್ಲಿಕಾರ್ಜುನ ಗಂಗಾಧರ ವಾರದ, ಕಮಲಾ ಮಲ್ಲಿಕಾರ್ಜುನ ಉಪ್ಪಿನ, ವಿಜಯಲಕ್ಷ್ಮಿ ಶಶಿಧರ ಮಠ ಹಾಗೂ ಬ್ಯಾಕೋಡ ಕತ್ತಿ ಪರಿವಾರದವರಿಂದ ದಾಸೋಹ ಸೇವೆ ನಡೆಯಲಿದೆ ಎಂದು ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕರು ಪ್ರಕಟಣೆಯ ಮೂಲಕ ತಿಳಸಿದ್ದಾರೆ.
